Site icon Vistara News

KMF recruitment 2022 | ಕೆಎಂಎಫ್‌ನಲ್ಲಿ 487 ಹುದ್ದೆಗಳಿಗೆ ನೇಮಕ; ವಿದ್ಯಾರ್ಹತೆ ಕುರಿತ ಮಾಹಿತಿ ಇಲ್ಲಿದೆ

KMF recruitment 2022

ಬೆಂಗಳೂರು: “ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ ʼʼ (ಕೆಎಂಎಫ್‌) ಖಾಲಿ ಇರುವ ವಿವಿಧ ವೃಂದದ ಒಟ್ಟು 487 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು (KMF recruitment 2022) ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-11-2022
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 19-11-2022

ಸಹಾಯವಣಿ ಸಂಖ್ಯೆ: 9036377735

ಯಾವೆಲ್ಲಾ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ?, ವೇತನ ಎಷ್ಟಿರುತ್ತದೆ?, ವಿದ್ಯಾರ್ಹತೆ ಏನು? ಎಂಬ ವಿವರ ಇಲ್ಲಿದೆ.

1 : ಹಿರಿಯ ಉಪ ನಿರ್ದೇಶಕ(ವಿತ್ತ)– ವೇತನ ಶ್ರೇಣಿ: ರೂ. 56,800-99,600
ವಿದ್ಯಾರ್ಹತೆ: ಅಭ್ಯರ್ಥಿಯು ಕಾನೂನು ರೀತ್ಯಾ ಮಾನ್ಯತೆ ಪಡೆದ ಅಂಗೀಕೃತ ಸಂಸ್ಥೆಗಳಿಂದ ಸಿ.ಎ/ಐ.ಸಿ.ಡಬ್ಲ್ಯೂ.ಎ/ಎ.ಸಿ.ಎಸ್. ನಲ್ಲಿ ಇಂಟರ್ ಮೀಡಿಯಟ್ ಅಥವಾ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‍ಮೆಂಟ್‍ನಿಂದ ಹಣಕಾಸು ವಿಷಯದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿರಬೇಕು.

2 : ಹಿರಿಯ ಉಪ ನಿರ್ದೇಶಕ(ಮಾರುಕಟ್ಟೆ)- ವೇತನ ಶ್ರೇಣಿ: ರೂ. 56,800-99,600
ವಿದ್ಯಾರ್ಹತೆ: ಅಭ್ಯರ್ಥಿಯು ಇರ್ಮ, ಆನಂದ್ ದಿಂದ ಪಿ.ಜಿ.ಡಿ.ಎಂ ಪದವಿ /ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‍ಮೆಂಟ್‍ನಿಂದ ಮಾರುಕಟ್ಟೆ ವಿಷಯದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿರಬೇಕು.

3: ಹಿರಿಯ ಉಪ ನಿರ್ದೇಶಕ(ಪಶು ಆಹಾರ)– ವೇತನ ಶ್ರೇಣಿ: ರೂ. 56,800-99,600
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಐ.ಸಿ.ಎ.ಆರ್ ದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ವಿ.ಎಸ್.ಸಿ(ಅನಿಮಲ್ ನ್ಯೂಟ್ರಿಷಿಯನ್) ಸ್ನಾತ್ತಕೋತ್ತರ ಪದವಿ ಪಡೆದಿರಬೇಕು.

4 : ಉಪ ನಿರ್ದೇಶಕ(ವಿತ್ತ)- ವೇತನ ಶ್ರೇಣಿ: ರೂ. 52,650-97,100
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಜೊತೆಗೆ ಎಂ.ಬಿ.ಎ(ಹಣಕಾಸು) ಅಥವಾ ಎ.ಕಾಂ ಸ್ನಾತ್ತಕೋತ್ತರ ಪದವಿ ವಿದ್ಯಾರ್ಹತೆ ಜೊತೆಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ 03 ವರ್ಷಗಳ ಸೇವಾನುಭವ ಹೊಂದಿರತಕ್ಕದ್ದು.

5 : ಉಪ ನಿರ್ದೇಶಕ(ಪಶು ವೈದ್ಯಕೀಯ)– ವೇತನ ಶ್ರೇಣಿ: ರೂ. 52,650-97,100
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್.ಸಿ /ಬಿ.ವಿ.ಎಸ್.ಸಿ&ಎ.ಹೆಚ್ ಪದವಿ ಪಡೆದಿರಬೇಕು.

6 : ವೈದ್ಯಾಧಿಕಾರಿ- ವೇತನ ಶ್ರೇಣಿ: ರೂ. 52,650-97,100
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಬಿ.ಬಿ.ಎಸ್. ಪದವಿ ಪಡೆದಿರಬೇಕು. ಆದಾಗ್ಯೂ ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಟ 02 ವರ್ಷಗಳ ಅನುಭವ ಹೊಂದಿರುವರಿಗೆ ಆದ್ಯತೆ ನೀಡಲಾಗುತ್ತದೆ.

7 : ಬಯೋ ಸೆಕ್ಯೂರಿಟಿ ಆಫೀಸರ್- ವೇತನ ಶ್ರೇಣಿ: ರೂ. 52,650-97,100
ವಿದ್ಯಾರ್ಹತೆ : ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ವಿ.ಎಸ್.ಸಿ /ಬಿ.ವಿ.ಎಸ್.ಸಿ&ಎ.ಹೆಚ್ ಪದವಿ ಪಡೆದಿರಬೇಕು ಜೊತೆಗೆ ಹೈನು ರಾಸುಗಳ ವಿರ್ಯಾಣು ಕೇಂದ್ರದಲ್ಲಿ ಕನಿಷ್ಠ 01 ವರ್ಷ ಕೆಲಸ ನಿರ್ವಹಿಸಿರುವ ಅನುಭವ ಹೊಂದಿರತಕ್ಕದ್ದು.

8 : ಉಪ ನಿರ್ದೇಶಕ(ಮಾರುಕಟ್ಟೆ)– ವೇತನ ಶ್ರೇಣಿ: ರೂ. 52,650-97,100
ವಿದ್ಯಾರ್ಹತೆ : ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಬಿ.ಎ.(ಮಾರುಕಟ್ಟೆ) ಸ್ನಾತ್ತಕೋತ್ತರ ಪದವಿ ಪಡೆದಿರಬೇಕು ಸಂಬಂಧಪಟ್ಟ ಕ್ಷೇತ್ರದಲ್ಲಿ ಕನಿಷ್ಠ 03 ವರ್ಷಗಳ ಅನುಭವ ಹೊಂದಿರತಕ್ಕದ್ದು.

9 : ಉಪ ನಿರ್ದೇಶಕ(ಡಿ.ಟಿ)-(ಡೇರಿ ಕೆಮಿಸ್ಟ್ರಿ) ವೇತನ ಶ್ರೇಣಿ: ರೂ. 52,650-97,100
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ. ಟೆಕ್ (ಡೇರಿ ಕೆಮಿಸ್ಟ್ರಿ) ಸ್ನಾತಕೋತ್ತರ ಪದವಿ ಹೊಂದಿರತಕ್ಕದ್ದು.

10 : ಉಪ ನಿರ್ದೇಶಕ(ಡಿ.ಟಿ)-(ಡೇರಿ ಮೈಕ್ರೋಬಯಾಲಜಿ) ವೇತನ ಶ್ರೇಣಿ: ರೂ. 52, 650-97, 100
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಟೆಕ್ (ಡೇರಿ ಮೈಕ್ರೋಬಯಾಲಜಿ) ಸ್ನಾತಕೋತ್ತರ ಪದವಿ ಪಡೆದಿರಬೇಕು.

11 : ಉಪ ನಿರ್ದೇಶಕ(ಡಿ.ಟಿ)- (ಡೇರಿ ಟೆಕ್ನಾಲಜಿ) ವೇತನ ಶ್ರೇಣಿ: ರೂ. 52,650-97,100
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಟೆಕ್ (ಡೇರಿ ಟೆಕ್ನಾಲಜಿ) ಸ್ನಾತಕೋತ್ತರ ಪದವಿ ಪಡೆದಿರಬೇಕು.

12 : ಉಪ ನಿರ್ದೇಶಕ(ಉತ್ಪಾದನೆ)- (ಪುಡ್ ಸೈನ್ಸ್ & ಟೆಕ್ನಾಲಜಿ) ವೇತನ ಶ್ರೇಣಿ: ರೂ. 52,650-97,100
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಎಸ್.ಸಿ(ಪುಡ್ ಸೈನ್ಸ್ & ಟೆಕ್ನಾಲಜಿ) ಸ್ನಾತಕೋತ್ತರ ಪದವಿ ಪಡೆದಿರಬೇಕು.

13 : ಸಹಾಯಕ ನಿರ್ದೇಶಕ(ಡೇರಿ ಟೆಕ್ನಾಲಜಿ)– ವೇತನ ಶ್ರೇಣಿ: ರೂ. 43,100-83, 900
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ (ಡಿ.ಟಿ.)/ ಬಿ.ಟೆಕ್(ಡಿ.ಟೆಕ್) ಪದವಿ ವಿದ್ಯಾರ್ಹತೆ ಪಡೆದಿರಬೇಕು.

14 : ಸಹಾಯಕ ನಿರ್ದೇಶಕ(ಪುಡ್ ಟೆಕ್ನಾಲಜಿ/ಪುಡ್ ಸೈನ್ಸ್&ಟೆಕ್ನಾಲಜಿ)-ವೇತನ ಶ್ರೇಣಿ: ರೂ. 43,100-83,900
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಂಗೀಕೃತ ಬಿ.ಟೆಕ್.(ಪುಡ್ ಟೆಕ್ನಾಲಜಿ/ಪುಡ್ ಸೈನ್ಸ್&ಟೆಕ್ನಾಲಜಿ) ಪದವಿ ಪಡೆದಿರಬೇಕು.

15 : ಸಹಾಯಕ ನಿರ್ದೇಶಕ(ಅಭಿಯಂತರ)-(ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್) ವೇತನ ಶ್ರೇಣಿ: ರೂ. 43,100-83,900
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿಯಿಂದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಷಯದಲ್ಲಿ ಬಿ.ಇ./ಬಿ.ಟೆಕ್ ಪದವಿ ಪಡೆದಿರಬೇಕು.

16 : ಸಹಾಯಕ ನಿರ್ದೇಶಕ(ಅಭಿಯಂತರ)-(ಇಲೆಕ್ಟ್ರಿಕಲ್) ವೇತನ ಶ್ರೇಣಿ: ರೂ. 43,100-83,900
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿಯಿಂದ ಇಲೆಕ್ಟ್ರಿಕಲ್ ವಿಷಯದಲ್ಲಿ ಬಿ.ಇ./ಬಿ.ಟೆಕ್ ಪದವಿ ಪಡೆದಿರಬೇಕು.

17 : ಸಹಾಯಕ ನಿರ್ದೇಶಕ(ಅಭಿಯಂತರ)-(ಕೆಮಿಕಲ್) ವೇತನ ಶ್ರೇಣಿ: ರೂ. 43,100-83,900
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿಯಿಂದ ಕೆಮಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಬಿ.ಇ./ಬಿ.ಟೆಕ್ ಪದವಿ ಪಡೆದಿರಬೇಕು.

18 : ಸಹಾಯಕ ನಿರ್ದೇಶಕ(ಕೃಷಿ)– ವೇತನ ಶ್ರೇಣಿ: ರೂ. 43,100-83, 900
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನ ವಿಷಯದಲ್ಲಿ ಬಿ.ಎಸ್.ಸಿ (ಕೃಷಿ) ಪದವಿ ಪಡೆದಿರಬೇಕು.

19 : ವಿಜಿಲೆನ್ಸ್ ಆಫೀಸರ್- ವೇತನ ಶ್ರೇಣಿ: ರೂ. 43, 100- 83,900
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ವಿದ್ಯಾರ್ಹತೆಯೊಂದಿಗೆ ಕ್ಯಾಪ್ಟನ್/ಮೇಜರ್ ಅಥವಾ ಸಮಾನಾಂತರ ಹುದ್ದೆಗಿಂತ ಕಡಿಮೆ ಇಲ್ಲದ ದರ್ಜೆಯಲ್ಲಿ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿರಬೇಕು.

20 : ಸುರಕ್ಷತಾ ಅಧಿಕಾರಿ- ವೇತನ ಶ್ರೇಣಿ: ರೂ. 43,100-83,900
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯದಿಂದ ಪಡೆದ ಯಾವುದೇ ಪದವಿ ವಿದ್ಯಾರ್ಹತೆ ಜೊತೆಗೆ ಡಿಪ್ಲೋಮಾ ಇನ್ ಇಂಡಸ್ಟ್ರಿಯಲ್ ಸೇಪ್ಟಿ ಮ್ಯಾನೇಜ್‍ಮೆಂಟ್ ಪಡೆದಿರಬೇಕು.

21 : ಸಹಾಯಕ ನಿರ್ದೇಶಕ(ಆರ್ಕಿಟೆಕ್ಚರ್/ಸ್ಟ್ರಕ್ಚರ್)-ವೇತನ ಶ್ರೇಣಿ: ರೂ. 43, 100-83,900
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ/ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿಯಿಂದ ಬಿ.ಇ.(ಆರ್ಕಿಟೆಕ್ಟ್/ಸ್ಟ್ರಕ್ಚರ್) ಪದವಿ ಪಡೆದಿರಬೇಕು.

22 : ಸಹಾಯಕ ನಿರ್ದೇಶಕ(ತರಬೇತಿ)-(ಡೇರಿ ತಾಂತ್ರಿಕ)– ವೇತನ ಶ್ರೇಣಿ: ರೂ. 43,100-83,900
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ(ಡಿ.ಟಿ)/ಬಿ.ಟೆಕ್(ಡಿ.ಟಿ)/ಪದವಿ ಪಡೆದಿರಬೇಕು.

23 : ಸಹಾಯಕ ನಿರ್ದೇಶಕ(ತರಬೇತಿ)-(ಅಭಿಯಂತರ)– ವೇತನ ಶ್ರೇಣಿ: ರೂ. 43,100-83,900
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಇ. ಅಥವಾ ಬಿ.ಟೆಕ್(ಮೆಕಾನಿಕಲ್) ವಿದ್ಯಾರ್ಹತೆ ಹೊಂದಿರತಕ್ಕದ್ದು.

24: ಸಹಾಯಕ ನಿರ್ದೇಶಕ(ತರಬೇತಿ)-(ಕೃಷಿ)-ವೇತನ ಶ್ರೇಣಿ: ರೂ. 43, 100-83,900
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ(ಕೃಷಿ) ಪದವಿ ಪಡೆದಿರಬೇಕು.

25 : ಸಹಾಯಕ ನಿರ್ದೇಶಕ(ತರಬೇತಿ)-(ಎಂ.ಎಸ್.ಡಬ್ಲ್ಯು)-ವೇತನ ಶ್ರೇಣಿ: ರೂ. 43,100-83,900
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಎಸ್.ಡಬ್ಲ್ಯು ಪದವಿ ಪಡೆದಿರಬೇಕು.

26 : ಸಹಾಯಕ ನಿರ್ದೇಶಕ(ತರಬೇತಿ)-(ಸಹಕಾರ)-ವೇತನ ಶ್ರೇಣಿ: ರೂ. 43,100-83, 900
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಎ.(ಸಹಕಾರ) ಪದವಿ ಪಡೆದಿರಬೇಕು.

27 : ಕಾರ್ಮಿಕ ಕಲ್ಯಾಣ/ಕಾನೂನು ಅಧಿಕಾರಿ– ವೇತನ ಶ್ರೇಣಿ: ರೂ. 43,100-83,900
ವಿದ್ಯಾರ್ಹತೆ: ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಹೊಂದಿದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಅಥವಾ ಎಂ.ಎಸ್.ಡಬ್ಲ್ಯು ಸ್ನಾತ್ತಕೋತ್ತರ ಪದವಿ ಪಡೆದಿರಬೇಕು.

28 : ಅಧೀಕ್ಷಕ(ಉಗ್ರಾಣ/ಖರೀದಿ)- ವೇತನ ಶ್ರೇಣಿ: ರೂ. 40, 900-78,200
ವಿದ್ಯಾರ್ಹತೆ: ಅಭ್ಯರ್ಥಿಯು ಕಡ್ಡಾಯವಾಗಿ ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ವಿದ್ಯಾರ್ಹತೆಯೊಂದಿಗೆ ಮೆಟೀರಿಯಲ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಮಾಡಿರಬೇಕು.

29 : ಅಧೀಕ್ಷಕ(ಆಡಳಿತ)- ವೇತನ ಶ್ರೇಣಿ: ರೂ. 40,900-78,200
ವಿದ್ಯಾರ್ಹತೆ: ಅಭ್ಯರ್ಥಿಯು ಕಡ್ಡಾಯವಾಗಿ ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಬಿ.ಎಂ/ಬಿ.ಬಿ.ಎ ಪದವಿ ವಿದ್ಯಾರ್ಹತೆ ಮತ್ತು ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಮಾಡಿರಬೇಕು.

30 : ಅಧೀಕ್ಷಕ(ಮಾರುಕಟ್ಟೆ) – ವೇತನ ಶ್ರೇಣಿ: ರೂ. 40,900-78,200
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಬಿ.ಎಂ ಪದವಿ ಪಡೆದಿರಬೇಕು.

31 : ಅಧೀಕ್ಷಕ(ಕೋ-ಆರ್ಡಿನೇಟರ್ ಪ್ರೊಟೆಕ್ಷನ್) – ವೇತನ ಶ್ರೇಣಿ: ರೂ. 40,900-78,200
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ವಿದ್ಯಾರ್ಹತೆಯೊಂದಿಗೆ ಕಿರಿಯ ಕಮಿಷನ್ಡ್ ಆಫೀಸರ್ ರ‍್ಯಾಂಕ್ ಗಿಂತ ಕಡಿಮೆ ಇಲ್ಲದ ಮಾಜಿ ಸೈನಿಕರಾಗಿರಬೇಕು.

32 : ಹಿರಿಯ ಕೆಮಿಸ್ಟ್–(ಕೆಮಿಸ್ಟ್ರಿ)-ವೇತನ ಶ್ರೇಣಿ: ರೂ. 40,900-78, 200
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಎಸ್.ಸಿ(ಕೆಮಿಸ್ಟ್ರಿ) ಸ್ನಾತಕೋತ್ತರ ಪದವಿ ಪಡೆದಿರಬೇಕು.

33 : ಹಿರಿಯ ಕೆಮಿಸ್ಟ್-(ಮೈಕ್ರೋ ಬಯಾಲಜಿ)-ವೇತನ ಶ್ರೇಣಿ: ರೂ. 40, 900-78,200
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಎಸ್.ಸಿ(ಮೈಕ್ರೋಬಯಾಲಜಿ) ಸ್ನಾತಕೋತ್ತರ ಪದವಿ ಪಡೆದಿರಬೇಕು.

34 : ಅಧೀಕ್ಷಕ(ತರಬೇತಿ) – ವೇತನ ಶ್ರೇಣಿ: ರೂ. 40,900-78,200
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು.

35 : ಲೆಕ್ಕ ಸಹಾಯಕ ದರ್ಜೆ-1 – ವೇತನ ಶ್ರೇಣಿ: ರೂ. 33,450-62,600
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಪಡೆದಿರಬೇಕು ಜೊತೆಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ 05 ವರ್ಷಗಳ ಅನುಭವ ಹೊಂದಿರಬೇಕು.

36 : ಡೇರಿ ಮೇಲ್ವಿಚಾರಕ ದರ್ಜೆ-2 – ವೇತನ ಶ್ರೇಣಿ: ರೂ.33,450-62,600
ವಿದ್ಯಾರ್ಹತೆ: ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ./ತತ್ಸಮಾನ ವಿದ್ಯಾರ್ಹತೆಯೊಂದಿಗೆ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿಯಿಂದ ಮೆಕ್ಯಾನಿಕಲ್/ಮೆಕಟ್ರಾನಿಕ್ಸ್/ಸಿವಿಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ಇನ್ಸ್‌ಷ್ಟ್ರು ಮೆಂಟೇಷನ್/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್/ಮೆಕ್ಯಾನಿಸ್ಟ್ ವಿಷಯಗಳಲ್ಲಿ ಡಿಪ್ಲೊಮಾ ಮಾಡಿರಬೇಕು.

37 : ಆಡಳಿತ ಸಹಾಯಕ ದರ್ಜೆ-2 -ವೇತನ ಶ್ರೇಣಿ: ರೂ. 27,650-52,650
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು.

38 : ಲೆಕ್ಕ ಸಹಾಯಕ ದರ್ಜೆ-2 – ವೇತನ ಶ್ರೇಣಿ: ರೂ. 27,650-52,650
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ,ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ ಪಡೆದಿರಬೇಕು.

39 : ಮಾರುಕಟ್ಟೆ ಸಹಾಯಕ ದರ್ಜೆ-2 – ವೇತನ ಶ್ರೇಣಿ: ರೂ. 27,650-52,650
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು.

40 : ಲ್ಯಾಬ್ ಸಹಾಯಕ ದರ್ಜೆ-2(ಕೆಮಿಸ್ಟ್ರಿ) – ವೇತನ ಶ್ರೇಣಿ: ರೂ. 27,650-52,650
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ರಾಸಾಯನ ಶಾಸ್ತ್ರ ಒಂದು ವಿಷಯವನ್ನಾಗಿ ವಿಜ್ಞಾನ ಪದವಿ ಪಡೆದಿರಬೇಕು.

41 : ಲ್ಯಾಬ್ ಸಹಾಯಕ ದರ್ಜೆ-2 (ಮೈಕ್ರೋಬಯಾಲಜಿ) – ವೇತನ ಶ್ರೇಣಿ: ರೂ. 27,650-52,650
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೈಕ್ರೋ ಬಯಾಲಜಿ ಒಂದು ವಿಷಯವನ್ನಾಗಿ ವಿಜ್ಞಾನ ಪದವಿ ಪಡೆದಿರಬೇಕು.

42 : ಹಿರಿಯ ತಾಂತ್ರಿಕ-(ಬಾಯ್ಲರ್) ವೇತನ ಶ್ರೇಣಿ: ರೂ. 27,650-52,650
ವಿದ್ಯಾರ್ಹತೆ: ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ./ತತ್ಸಮಾನ ವಿದ್ಯಾರ್ಹತೆಯೊಂದಿಗೆ ಸರ್ಕಾರದ ಬಾಯ್ಲರ್ ಸಹಾಯಕ ಪರೀಕ್ಷಾ ಮಂಡಳಿಯಿಂದ ಬಾಯ್ಲರ್ ದರ್ಜೆ-1 ಪ್ರಮಾಣ ಪತ್ರ ಹೊಂದಿರತಕ್ಕದ್ದು.

43 : ಶೀಘ್ರಲಿಪಿಗಾರ ದರ್ಜೆ-2- ವೇತನ ಶ್ರೇಣಿ: ರೂ. 27, 650-52, 650
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು ಹಾಗೂ ಕನಿಷ್ಠ ಕಿರಿಯ ಕನ್ನಡ ಅಥವಾ ಇಂಗ್ಲೀಷ್ ಶಾರ್ಟ್ ಹ್ಯಾಂಡ್ ಅಥವಾ ಡಿಪ್ಲೋಮಾ ಇನ್ ಸೆಕ್ರೆಟರಿಯಲ್ ಪ್ರಾಕ್ಟೀಸ್ ತೇರ್ಗಡೆ ಹೊಂದಿರಬೇಕು.

44 : ಕಿರಿಯ ಸಿಸ್ಟಂ ಆಪರೇಟರ್- ವೇತನ ಶ್ರೇಣಿ: ರೂ. 27,650-52,650
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು ಹಾಗೂ ಕನಿಷ್ಠ 01 ವರ್ಷದ ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ ಪೂರ್ಣಗೊಳಿಸಿರಬೇಕು.

45 : ಹಿರಿಯ ಕೋ-ಆರ್ಡಿನೇಟರ್(ಪ್ರೊಟೆಕ್ಷನ್)- ವೇತನ ಶ್ರೇಣಿ: ರೂ. 27,650-52,650
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು ಮತ್ತು ಮಾಜಿ ಸೈನಿಕರಾಗಿರಬೇಕು.

46 : ಸ್ಟಾಪ್ ನರ್ಸ್- ವೇತನ ಶ್ರೇಣಿ: ರೂ. 27,650-52,650
ವಿದ್ಯಾರ್ಹತೆ: ಅಭ್ಯರ್ಥಿಯು ಭಾರತದಲ್ಲಿ ಕಾನೂನು ರೀತ್ಯಾ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ (ನರ್ಸಿಂಗ್) ಪದವಿ ಪಡೆದಿರಬೇಕು.

47 : ಕಿರಿಯ ತಾಂತ್ರಿಕ- (ಮೆಕಾಟ್ರಾನಿಕ್ಸ್) ವೇತನ ಶ್ರೇಣಿ: ರೂ. 21,400-42,000
ವಿದ್ಯಾರ್ಹತೆ: ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ./ತತ್ಸಮಾನ ವಿದ್ಯಾರ್ಹತೆಯೊಂದಿಗೆ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿ/ಜಿ.ಟಿ.ಟಿ.ಸಿ/ಎನ್.ಟಿ.ಟಿ.ಎಫ್ ನಿಂದ ಮೆಕಾಟ್ರಾನಿಕ್ಸ್ ವಿಷಯದಲ್ಲಿ ಐ.ಟಿ.ಐ. ಪ್ರಮಾಣ ಪತ್ರ ಹೊಂದಿರಬೇಕು.

48 : ಕಿರಿಯ ತಾಂತ್ರಿಕ-(ರಿಫ್ರಿಜರೇಷನ್&ಏರ್‍ಕಂಡೀಷನ್)ವೇತನ ಶ್ರೇಣಿ: ರೂ. 21,400-42,000
ವಿದ್ಯಾರ್ಹತೆ: ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ./ತತ್ಸಮಾನ ವಿದ್ಯಾರ್ಹತೆಯೊಂದಿಗೆ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿ/ಜಿ.ಟಿ.ಟಿ.ಸಿ/ಎನ್.ಟಿ.ಟಿ.ಎಫ್ ನಿಂದ ರಿಫ್ರಿಜರೇಷನ್ ಮತ್ತು ಏರ್‍ಕಂಡೀಷನ್ ವಿಷಯದಲ್ಲಿ ಐ.ಟಿ.ಐ. ಪ್ರಮಾಣ ಪತ್ರ ಹೊಂದಿರಬೇಕು.

49 : ಕಿರಿಯ ತಾಂತ್ರಿಕ- (ಫಿಟ್ಟರ್) ವೇತನ ಶ್ರೇಣಿ: ರೂ. 21, 400-42, 000
ವಿದ್ಯಾರ್ಹತೆ: ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ./ತತ್ಸಮಾನ ವಿದ್ಯಾರ್ಹತೆಯೊಂದಿಗೆ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿ/ಜಿ.ಟಿ.ಟಿ.ಸಿ/ಎನ್.ಟಿ.ಟಿ.ಎಫ್ ನಿಂದ ಫಿಟ್ಟರ್ ವಿಷಯದಲ್ಲಿ ಐ.ಟಿ.ಐ. ಪ್ರಮಾಣ ಪತ್ರ ಹೊಂದಿರಬೇಕು.

50 : ಕಿರಿಯ ತಾಂತ್ರಿಕ- (ಟರ್ನರ್) ವೇತನ ಶ್ರೇಣಿ: ರೂ. 21, 400-42, 000
ವಿದ್ಯಾರ್ಹತೆ: ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ./ತತ್ಸಮಾನ ವಿದ್ಯಾರ್ಹತೆಯೊಂದಿಗೆ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿ/ಜಿ.ಟಿ.ಟಿ.ಸಿ/ಎನ್.ಟಿ.ಟಿ.ಎಫ್ ನಿಂದ ಟರ್ನರ್ ವಿಷಯದಲ್ಲಿ ಐ.ಟಿ.ಐ. ಪ್ರಮಾಣ ಪತ್ರ ಹೊಂದಿರಬೇಕು.

51 : ಕಿರಿಯ ತಾಂತ್ರಿಕ-(ವೆಲ್ಡರ್) ವೇತನ ಶ್ರೇಣಿ: ರೂ. 21, 400-42, 000
ವಿದ್ಯಾರ್ಹತೆ: ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ./ತತ್ಸಮಾನ ವಿದ್ಯಾರ್ಹತೆಯೊಂದಿಗೆ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿ/ಜಿ.ಟಿ.ಟಿ.ಸಿ/ಎನ್.ಟಿ.ಟಿ.ಎಫ್ ನಿಂದ ವೆಲ್ಡರ್ ವಿಷಯದಲ್ಲಿ ಐ.ಟಿ.ಐ. ಪ್ರಮಾಣ ಪತ್ರ ಹೊಂದಿರಬೇಕು.

52 : ಕಿರಿಯ ತಾಂತ್ರಿಕ- (ಇಲೆಕ್ಟ್ರಿಕಲ್) ವೇತನ ಶ್ರೇಣಿ: ರೂ. 21,400-42,000
ವಿದ್ಯಾರ್ಹತೆ: ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ./ತತ್ಸಮಾನ ವಿದ್ಯಾರ್ಹತೆಯೊಂದಿಗೆ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿ/ಜಿ.ಟಿ.ಟಿ.ಸಿ/ಎನ್.ಟಿ.ಟಿ.ಎಫ್ ನಿಂದ ಎಲೆಕ್ಟ್ರಿಕಲ್ ವಿಷಯದಲ್ಲಿ ಐ.ಟಿ.ಐ. ಪ್ರಮಾಣ ಪತ್ರ ಹೊಂದಿರಬೇಕು.

53 : ಕಿರಿಯ ತಾಂತ್ರಿಕ-(ಇಲೆಕ್ಟ್ರಿಕಲ್ & ಇಲೆಕ್ಟ್ರಾನಿಕ್ಸ್) ವೇತನ ಶ್ರೇಣಿ: ರೂ. 21,400-42,000
ವಿದ್ಯಾರ್ಹತೆ: ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ./ತತ್ಸಮಾನ ವಿದ್ಯಾರ್ಹತೆಯೊಂದಿಗೆ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿ/ಜಿ.ಟಿ.ಟಿ.ಸಿ/ಎನ್.ಟಿ.ಟಿ.ಎಫ್ ನಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಐ.ಟಿ.ಐ. ಪ್ರಮಾಣ ಪತ್ರ ಹೊಂದಿರಬೇಕು.

54 : ಕಿರಿಯ ತಾಂತ್ರಿಕ-(ಇನ್‌ ಸ್ಟ್ರುಮೆಂಟೇಷನ್) ವೇತನ ಶ್ರೇಣಿ: ರೂ. 21,400-42,000
ವಿದ್ಯಾರ್ಹತೆ: ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ./ತತ್ಸಮಾನ ವಿದ್ಯಾರ್ಹತೆಯೊಂದಿಗೆ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿ/ಜಿ.ಟಿ.ಟಿ.ಸಿ/ಎನ್.ಟಿ.ಟಿ.ಎಫ್ ನಿಂದ ಇನ್‌ಸ್ಟ್ರುಮೆಂಟೇಷನ್ ವಿಷಯದಲ್ಲಿ ಐ.ಟಿ.ಐ. ಪ್ರಮಾಣ ಪತ್ರ ಹೊಂದಿರಬೇಕು.

55 : ಕಿರಿಯ ತಾಂತ್ರಿಕ- (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್) ವೇತನ ಶ್ರೇಣಿ: ರೂ. 21,400-42,000
ವಿದ್ಯಾರ್ಹತೆ: ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ./ತತ್ಸಮಾನ ವಿದ್ಯಾರ್ಹತೆಯೊಂದಿಗೆ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿ/ಜಿ.ಟಿ.ಟಿ.ಸಿ/ಎನ್.ಟಿ.ಟಿ.ಎಫ್ ನಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಐ.ಟಿ.ಐ. ಪ್ರಮಾಣ ಪತ್ರ ಹೊಂದಿರಬೇಕು.

56 : ಕಿರಿಯ ತಾಂತ್ರಿಕ- (ಮೆಕ್ಯಾನಿಸ್ಟ್) ವೇತನ ಶ್ರೇಣಿ: ರೂ. 21,400-42,000
ವಿದ್ಯಾರ್ಹತೆ: ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ./ತತ್ಸಮಾನ ವಿದ್ಯಾರ್ಹತೆಯೊಂದಿಗೆ ಅಂಗೀಕೃತ ತಾಂತ್ರಿಕ ಪರೀಕ್ಷಾ ಮಂಡಳಿ/ಜಿ.ಟಿ.ಟಿ.ಸಿ/ಎನ್.ಟಿ.ಟಿ.ಎಫ್ ನಿಂದ ಮೆಕ್ಯಾನಿಸ್ಟ್ ವಿಷಯದಲ್ಲಿ ಐ.ಟಿ.ಐ. ಪ್ರಮಾಣ ಪತ್ರ ಹೊಂದಿರಬೇಕು.

57 : ಕಿರಿಯ ತಾಂತ್ರಿಕ- (ಬಾಯ್ಲರ್) ವೇತನ ಶ್ರೇಣಿ: ರೂ. 21,400-42,000
ವಿದ್ಯಾರ್ಹತೆ: ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ./ತತ್ಸಮಾನ ವಿದ್ಯಾರ್ಹತೆಯೊಂದಿಗೆ ಸರ್ಕಾರದ ಬಾಯ್ಲರ್ ಸಹಾಯಕ ಪರೀಕ್ಷಾ ಮಂಡಳಿಯಿಂದ ಬಾಯ್ಲರ್ ದರ್ಜೆ-2 ಪ್ರಮಾಣ ಪತ್ರ ಹೊಂದಿರಬೇಕು ಅಥವಾ ಕನಿಷ್ಠ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆಯೊಂದಿಗೆ ಬಾಯ್ಲರ್ ಅಟೆಂಡೆಂಟ್ ಟ್ರೇಡ್ ನಲ್ಲಿ ಪ್ರಾವಿಷನಲ್/ನ್ಯಾಷನಲ್ ಶಿಶಿಕ್ಷು ಪ್ರಮಾಣ ಪತ್ರ ಹೊಂದಿರಬೇಕು.

58 : ಕೋ-ಆರ್ಡಿನೇಟರ್(ಪ್ರೊಟೆಕ್ಷನ್)- ವೇತನ ಶ್ರೇಣಿ: ರೂ. 21,400-42,000
ವಿದ್ಯಾರ್ಹತೆ: ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ./ತತ್ಸಮಾನ ವಿದ್ಯಾರ್ಹತೆಯೊಂದಿಗೆ ಮಾಜಿ ಸೈನಿಕರಾಗಿರಬೇಕು.

59 : ಸಹಾಯಕ– ವೇತನ ಶ್ರೇಣಿ: ರೂ. 17,000-28,950
ವಿದ್ಯಾರ್ಹತೆ: ಅಭ್ಯರ್ಥಿಯು ಎಸ್.ಎಸ್.ಎಲ್.ಸಿ./ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.

ಹೆಚ್ಚಿನ ಮಾಹಿತಿಗೆ ಕೆಎಂಎಫ್‌ ವೆಬ್‌ಸೈಟ್‌|https://www.kmfnandini.coop/

ಇದನ್ನೂ ಓದಿ | KMF recruitment 2022 | ಕೆಎಂಎಫ್‌ನಲ್ಲಿ ಭರ್ಜರಿ ನೇಮಕ; 488 ಹುದ್ದೆಗಳಿಗೆ ಅರ್ಜಿ ಆಹ್ವಾನ

Exit mobile version