Site icon Vistara News

KPSC Recruitment 2023 : ಕೆಪಿಎಸ್‌ಸಿಯಿಂದ ಏ.11 ಮತ್ತು‌ 12 ರಂದು ಪರೀಕ್ಷೆ; ಪ್ರವೇಶ ಪತ್ರ ಪ್ರಕಟ

KPSC Recruitment

ಕೆಪಿಎಸ್‌ಸಿ

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಏಪ್ರಿಲ್‌ 11 ಮತ್ತು 12 ರಂದು (KPSC Recruitment 2023) ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಮುದ್ರಣ, ಲೇಖನ ಸಾಮಾಗ್ರಿ ಮತ್ತು ಪ್ರಕಟಣೆಗಳ ಇಲಾಖೆಯಲ್ಲಿನ ಸಹಾಯಕ ನಿರ್ದೇಶಕರ -2 ಹುದ್ದೆ, ಭಾಷಾಂತರ ನಿರ್ದೇಶನಾಲಯದಲ್ಲಿನ ಭಾಷಾಂತರಕಾರರ 8 ಹುದ್ದೆ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ನಗರಯೋಜಕರ 23 ಹುದ್ದೆಗಳಿಗೆ ಈ ಪರೀಕ್ಷೆ ನಡೆಯುತ್ತಿದೆ.

ಪರೀಕ್ಷೆಯ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಈ ಪರೀಕ್ಷೆ ಬರೆಯಬೇಕಾಗಿರುವ ಅಭ್ಯರ್ಥಿಗಳು ಅರ್ಜಿಯ ಸಂಖ್ಯೆ ಮತ್ತು ಜನ್ಮದಿನಾಂಕದೊಂದಿಗೆ ಲಾಗಿನ್‌ ಆಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಪ್ರವೇಶ ಪತ್ರವಿಲ್ಲದೆ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ.

ಏಪ್ರಿಲ್‌ 11 ರಂದು ಮತ್ತು ಏಪ್ರಿಲ್‌ 12 ರಂದು ಬೆಳಗ್ಗೆ ಮತ್ತು ಮದ್ಯಾಹ್ನ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಇದರ ಜತೆಯಲ್ಲಿಯೇ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಕೂಡ ನಡೆಸಲಾಗುತ್ತದೆ. ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳುವಾಗ ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಸಹಾಯವಾಣಿ ಸಂಖ್ಯೆ : 18005728707 ಸಂಪರ್ಕಿಸಬೇಕೆಂದು ಕೆಪಿಎಸ್‌ಸಿಯು ಸೂಚಿಸಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ : https://kpsc.kar.nic.in

ಇದನ್ನೂ ಓದಿ: KEA Recruitment 2023 : ಕೆಇಎಯಿಂದ 757 ಹುದ್ದೆಗಳಿಗೆ ನೇಮಕ ಖಚಿತ; ಏಪ್ರಿಲ್‌ 17 ರಿಂದ ಅರ್ಜಿ ಸಲ್ಲಿಕೆ ಶುರು

Exit mobile version