ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಒಟ್ಟು ಮೂರು ಅಧಿಸೂಚನೆಗಳಿಗೆ (KPSC Recruitment 2023) ಸಂಬಂಧಿಸಿದಂತೆ, ಹೈದರಾಬಾದ್ ಕರ್ನಾಟಕ ವೃಂದದ ಗ್ರೂಪ್ ʻಸಿʼ ಹುದ್ದೆಗಳಿಗೆ ಮಾ.19 ರಂದು ನಡೆಸಿದ್ದ ಪರೀಕ್ಷೆಯ ಕೀ ಉತ್ತರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಪ್ರತಿಯೊಂದು ಪ್ರಶ್ನೆಗೂ ಒಂದು ಅಂಕ ನಿಗದಿಯಾಗಿದ್ದು, ಅಭ್ಯರ್ಥಿಗಳು ತಪ್ಪು ಉತ್ತರ ಗುರುತಿಸಿದ್ದರೆ 1/4 (0.25) ಅಂಕ ಕಳೆಯಲಾಗುತ್ತದೆ ಎಂದು ಕೆಪಿಎಸ್‌ಸಿಯು ತಿಳಿಸಿದೆ. ಮಾ.19 ರಂದು ಪತ್ರಿಕೆ-1 ಮತ್ತು ಪತ್ರಿಕೆ-2 ರ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ನಡೆದ ಮಾರನೇ ದಿನವೇ ಅಂದರೆ ಮಾ.20 ರಂದೇ ಕೀ ಉತ್ತರ ಪ್ರಕಟಿಸಲಾಗಿದೆ. ಎರಡೂ ಪತ್ರಿಕೆಗಳ ಕೀ ಉತ್ತರಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಈ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದು, ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿಯೇ ಆಕ್ಷೇಪಣೆ ಸಲ್ಲಿಸಬೇಕಿರುತ್ತದೆ. ಆಕ್ಷೇಪಣೆಯ ಮಾದರಿಯನ್ನು ಆಯೋಗದ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.
ಕೀ ಉತ್ತರವನ್ನು ನೋಡಲು ಇಲ್ಲಿ ಕ್ಲಿಕ್ (Click Here) ಮಾಡಿ.
ಆಸಕ್ತರು ಪ್ರಮಾಣೀಕೃತ ಪುಸ್ತಕ, ದಾಖಲೆಗಳೊಂದಿಗೆ ತಮ್ಮ ಆಕ್ಷೇಪಣೆಯನ್ನು ಮಾರ್ಚ್ 27ರ ಒಳಗೆ ಆಯೋಗದ ಕಚೇರಿಗೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ. ಒಂದು ಆಕ್ಷೇಪಣೆಗೆ 50 ರೂ. ಶುಲ್ಕವನ್ನು ಪಾವತಿಸಬೇಕಿರುತ್ತದೆ. ಡಿಡಿಯ ಮೂಲಕ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಸಹಾಯಕ ಸಾಂಖ್ಯಿಕ ಅಧಿಕಾರಿ -5, ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕ ನಿರೀಕ್ಷಕರು -6, ಆರ್ಥಿಕ ಮತ್ತು ಸಾಂಖ್ಯೆಕ ನಿರ್ದೇಶನಾಲಯದಲ್ಲಿನ ಸಾಂಖ್ಯಿಕ ನಿರೀಕ್ಷಕರ 17 ಹುದ್ದೆಗಳಿಗೆ ಈ ಪರೀಕ್ಷೆ ನಡೆಸಲಾಗಿತ್ತು.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ : https://kpsc.kar.nic.in
ಇದನ್ನೂ ಓದಿ : KMF TUMUL Recruitment 2023 : ಹಾಲು ಒಕ್ಕೂಟದಲ್ಲಿ 219 ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ