ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಒಟ್ಟು ಮೂರು ಅಧಿಸೂಚನೆಗೆ (KPSC Recruitment) ಸಂಬಂಧಿಸಿದಂತೆ ಹೈದರಾಬಾದ್ ಕರ್ನಾಟಕ ವೃಂದದ ಗ್ರೂಪ್ ʻಸಿʼ ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರವನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಈ ಪರೀಕ್ಷೆ ಬರೆಯಬೇಕಾಗಿರುವ ಅಭ್ಯರ್ಥಿಗಳು ಅರ್ಜಿಯ ಸಂಖ್ಯೆ ಮತ್ತು ಜನ್ಮದಿನಾಂಕದೊಂದಿಗೆ ಲಾಗಿನ್ ಆಗಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಪ್ರವೇಶ ಪತ್ರವಿಲ್ಲದೆ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ.
ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವಾಗ ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಸಹಾಯವಾಣಿ ಸಂಖ್ಯೆ : 18005728707 ಸಂಪರ್ಕಿಸಬೇಕೆಂದು ಕೆಪಿಎಸ್‌ಸಿಯು ಸೂಚಿಸಿದೆ.
ಪರೀಕ್ಷೆಯ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ (Click Here) ಮಾಡಿ.
ಮಾರ್ಚ್ 18 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಯಲಿದ್ದು, ಮಾ.19 ರಂದು ಪತ್ರಿಕೆ-1 ಮತ್ತು ಪತ್ರಿಕೆ-2 ರ ಪರೀಕ್ಷೆಗಳು ನಡೆಯಲಿವೆ. ಕನ್ನಡ ಭಾಷಾ ಪರೀಕ್ಷೆಯು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಪತ್ರಿಕೆ -1 ರ ಪರೀಕ್ಷೆಯು ಮಾ.19 ರ ಭಾನುವಾರದಂದು ಬೆಳಗ್ಗೆ 10ಗಂಟೆಯಿಂದ 11.30 ರವರೆಗೆ ನಡೆಯಲಿದೆ. ಪತ್ರಿಕೆ-2 ರ ಪರೀಕ್ಷೆಯು ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ ಎಂದು ಕೆಪಿಎಸ್‌ಸಿಯು ತಿಳಿಸಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಸಹಾಯಕ ಸಾಂಖ್ಯಿಕ ಅಧಿಕಾರಿ -5, ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕ ನಿರೀಕ್ಷಕರು -6, ಆರ್ಥಿಕ ಮತ್ತು ಸಾಂಖ್ಯೆಕ ನಿರ್ದೇಶನಾಲಯದಲ್ಲಿನ ಸಾಂಖ್ಯಿಕ ನಿರೀಕ್ಷಕರ 17 ಹುದ್ದೆಗಳಿಗೆ ಈ ಪರೀಕ್ಷೆ ನಡೆಯುತ್ತಿದೆ.
ಪರೀಕ್ಷೆಯ ವೇಳಾಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ (Click Here) ಮಾಡಿ.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ : https://kpsc.kar.nic.in
ಇದನ್ನೂ ಓದಿ : SC ST Reservation : ಎಸ್‌ಸಿ, ಎಸ್‌ಟಿ ಹೊಸ ಮೀಸಲಾತಿ ಜಾರಿ; ಸಮತಳ ಮೀಸಲಾತಿಯ ರೋಸ್ಟರ್ ಪ್ರಕಟ