Site icon Vistara News

KPSC SDA Recruitment | ಕೊನೆಗೂ ಎಸ್‌ಡಿಎ ನೇಮಕದ ಫಲಿತಾಂಶ ಪ್ರಕಟಿಸಿದ ಕೆಪಿಎಸ್‌ಸಿ

kpsc recruitment 2023 result of compulsory kannada examination held february 25 published

KPSC Recruitment 2023

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2019ನೇ ಸಾಲಿನ ದ್ವಿತೀಯ ದರ್ಜೆ ಸಹಾಯಕರ (ಎಸ್‌ಡಿಎ) (KPSC SDA Recruitment) ಹುದ್ದೆಗಳ ನೇಮಕಕ್ಕೆ ಹೊರಡಿಸಿದ್ದ ಅಧಿಸೂಚನೆಗೆ ಸಂಬಂಧಿಸಿದಂತೆ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಒಟ್ಟು 3,749 ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಅರ್ಹತೆ ಪಡೆದಿದ್ದು, ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು, ರಿಜಿಸ್ಟರ್‌ ನಂಬರ್‌ ಮಾತ್ರ ಪ್ರಕಟಿಸಲಾಗಿದೆ. ದಾಖಲೆ ಪರಿಶೀಲನೆಯನ್ನು ಎಂದು ನಡೆಸಲಾಗುತ್ತದೆ ಎಂಬುದನ್ನು ಮುಂದೆ ಪ್ರಕಟಿಸಲಾಗುತ್ತದೆ ಎಂದು ಕೆಪಿಎಸ್‌ಸಿ ಹೇಳಿದೆ.

ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ: https://kpsc.kar.nic.in/sdar.pdf

ಸರ್ಕಾರದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ ಒಟ್ಟು 1323 ಹುದ್ದೆಗಳ ನೇಮಕಕ್ಕಾಗಿ ದಿನಾಂಕ 14-05-2020 ಅರ್ಜಿ ಆಹ್ವಾನಿಸಲಾಗಿತ್ತು. 2021 ರ ಸೆಪ್ಟೆಂಬರ್ 18 ಹಾಗೂ 19 ರಂದು ಪರೀಕ್ಷೆ ನಡೆಸಲಾಗಿತ್ತು. ಸುಮಾರು ಒಂದು ವರ್ಷಗಳ ನಂತರ ಫಲಿತಾಂಶವನ್ನು ಪ್ರಕಟಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಮೂಲಕ ಈ ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಸಂದರ್ಶನ ಇರುವುದಿಲ್ಲ.

ಕೋವಿಡ್‌-19 ಕಾರಣದಿಂದ ಈ ನೇಮಕಾತಿಯು ವಿಳಂಬವಾಗಿದ್ದು, ಫಲಿತಾಂಶ ಪ್ರಕಟಿಸದ ಕೆಪಿಎಸ್‌ಸಿ ವಿರುದ್ಧ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು. ಇದಾದ ನಂತರ ಕೆಪಿಎಸ್‌ಸಿಯು ಈ ನೇಮಕಾತಿಯ ಫಲಿತಾಂಶವನ್ನು ಆಗಸ್ಟ್‌ ೨೬ರಂದು ಪ್ರಕಟಿಸುವುದಾಗಿ ವೇಳಾಪಟ್ಟಿ ಪ್ರಕಟಿಸಿತ್ತು. ಅದರಂತೆಯೇ ಶುಕ್ರವಾರ ಫಲಿತಾಂಶ ಪ್ರಕಟಿಸಿದೆ.

ಈ ನೇಮಕಾತಿಯ ಕುರಿತ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌: https://kpsc.kar.nic.in/index.html

ಇದನ್ನೂ ಓದಿ|ಕೆಪಿಎಸ್‌ಸಿ ಡಿ ಗ್ರೂಪ್‌ ನೌಕರಿಗೆ ಸಂದರ್ಶನ ಇಲ್ಲ: ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ

Exit mobile version