Site icon Vistara News

Land Surveyor Exam 2023: ಭೂಮಾಪಕರ ನೇಮಕಕ್ಕೆ ಜು.8 ಕ್ಕೆ ಪರೀಕ್ಷೆ; ಪ್ರವೇಶ ಪತ್ರ ಪ್ರಕಟ

SSLR Karnataka Admit Card Link here

#image_title

ಬೆಂಗಳೂರು: ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು 2000 ಪರವಾನಗಿ ಭೂಮಾಪಕರ ನೇಮಕಕ್ಕೆ (Land Surveyor Exam 2023) ಜುಲೈ 8 ರಂದು ಆನ್‌ಲೈನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದ್ದು, ಪ್ರವೇಶ ಪತ್ರವನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಒದಗಿಸಿದೆ.

ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ರಿಜಿಸ್ಟೇಷನ್‌ ನಂಬರ್‌ ಮತ್ತು ಜನ್ಮದಿನಾಂಕದೊಂದಿಗೆ ಲಾಗಿನ್‌ ಆಗಿ ತಮ್ಮ ಪ್ರವೇಶ ಪತ್ರವನ್ನು ಪಡೆದುಕೊಳ್ಳಬಹುದಾಗಿದೆ. ಪ್ರವೇಶ ಪತ್ರದಲ್ಲಿ ಪರೀಕ್ಷೆಯ ದಿನಾಂಕ, ಸಮಯ, ಸ್ಥಳ ಮತ್ತಿತರ ಮಾಹಿತಿಯನ್ನು ಒದಗಿಸಲಾಗಿದೆ.

ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಪರೀಕ್ಷೆ ಬರೆಯಲು ಹಾಜರಾಗುವ ಅಭ್ಯರ್ಥಿಗಳು ಅರ್ಜಿಯ ಪ್ರತಿ, ಸ್ವೀಕೃತಿ ಪತ್ರ ಮತ್ತು ಆಧಾರ್‌ ಕಾರ್ಡ್‌ ಅಥವಾ ಚುನಾವಣಾ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಪ್ರವೇಶ ಪತ್ರದಲ್ಲಿ ತಮ್ಮ ಭಾವಚಿತ್ರ ಅಂಟಿಸಿ (ದ್ವಿಪ್ರತಿಯಲ್ಲಿ) ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ.

ಪ್ರವೇಶ ಪತ್ರ ಡೌನ್‌ಲೋಡ್‌, ಪರೀಕ್ಷಾ ಕೇಂದ್ರದ ಕುರಿತು ಗೊಂದಲಗಳಿದ್ದರೆ ಇಲಾಖೆಯ ಸಹಾಯವಾಣಿ ಸಂಖ್ಯೆ: 080-22221038 ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಪ್ರವೇಶ ಪತ್ರವನ್ನು ಮತ್ತು ಮೇಲೆ ಹೇಳಿದ ದಾಖಲೆಗಳನ್ನು ತಾರದ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ಇಲಾಖೆಯು ಸ್ಪಷ್ಟಪಡಿಸಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ( Click Here ) ಮಾಡಿ.

ಪರೀಕ್ಷೆ ಹೇಗಿರುತ್ತದೆ?

ಆನ್‌ಲೈನ್‌ನಲ್ಲಿ ಈ ಪರೀಕ್ಷೆ ನಡೆಯಲಿದ್ದು, ಎರಡು ಪ್ರಶ್ನೆ ಪತ್ರಿಕೆಗಳಿರಲಿವೆ. ಪತ್ರಿಕೆ-1ಸಾಮಾನ್ಯ ಪತ್ರಿಕೆಯಾದರೆ ಪತ್ರಿಕೆ-2 ನಿರ್ಧಿಷ್ಟ ವಿಷಯಕ್ಕೆ ಸಂಬಂಧಿಸಿದ ಪತ್ರಿಕೆಯಾಗಿದೆ. ತಲಾ 100 ಅಂಕ ನಿಗದಿಯಾಗಿರುತ್ತದೆ. ವಸ್ತುನಿಷ್ಟ ಬಹು ಆಯ್ಕೆಯ ಮಾದರಿಯಲ್ಲಿ ಈ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳು ಸರಿಯಾದ ಉತ್ತರವನ್ನು ಓಎಂಆರ್‌ ಶೀಟ್‌ನಲ್ಲಿ ಗುರುತಿಸಬೇಕಿರುತ್ತದೆ. ಈ ಪರೀಕ್ಷೆಯಲ್ಲಿ ಪಡೆಯುವ ಗರಿಷ್ಠ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಈ ನೇಮಕದಲ್ಲಿ ಯಾವುದೇ ಸಂದರ್ಶನ ಇರುವುದಿಲ್ಲ.

ಇದನ್ನೂ ಓದಿ : KEA Recruitment 2023 : ಸರ್ಕಾರದ ನಿಗಮ ಮಂಡಳಿಗಳಲ್ಲಿ 670 ಹುದ್ದೆ; ಇಂದಿನಿಂದ ಅರ್ಜಿ ಸಲ್ಲಿಕೆ ಶುರು

ಉಡುಪಿಯಲ್ಲಿನ 86, ಉತ್ತರಕನ್ನಡ 75, ಕೊಡಗು 25, ಕೋಲಾರ 53, ಗದಗ 54, ಚಿಕ್ಕಮಗಳೂರು 83, ಚಿತ್ರದುರ್ಗ 73, ಚಾಮರಾಜನಗರ 35, ತುಮಕೂರು 110, ದಕ್ಷಿಣ ಕನ್ನಡ 36, ದಾವಣಗೆರೆ 95, ಧಾರವಾಡ 92, ಬೆಂಗಳೂರು ಗ್ರಾಮಾಂತರ 66, ಬೆಂಗಳೂರು ಜಿಲ್ಲೆ 125, ಬಿಜಾಪುರ 32, ಬೆಳಗಾವಿ 85, ಬಳ್ಳಾರಿ 55, ವಿಜಯನಗರ 47, ಬಾಗಲಕೋಟೆ 47, ಬೀದರ್‌ 35, ಮಂಡ್ಯ 71, ಮೈಸೂರು 40, ಯಾದಗಿರಿ 20, ರಾಮನಗರ 100, ರಾಯಚೂರು 40, ಶಿವಮೊಗ್ಗ 125, ಹಾವೇರಿ 152, ಹಾಸನ 60, ಕೊಪ್ಪಳ 28, ಕಲಬುರಗಿ 10, ಚಿಕ್ಕಬಳ್ಳಾಪುರ 45 ಹೀಗೆ ಒಟ್ಟು 2000 ಪರವಾನಗಿ ಭೂಮಾಪಕರ ನೇಮಕಕ್ಕಾಗಿ ಈ ಪರೀಕ್ಷೆ ನಡೆಸಲಾಗುತ್ತಿದೆ.

Exit mobile version