ನವದೆಹಲಿ: ಎನ್‌ಬಿಇಎಂಎಸ್ (National Board of Examinations In Medical Sciences Delhi-NBEMS) ಖಾಲಿ ಇರುವ 48 ಹುದ್ದೆಗಳ ಭರ್ತಿಗೆ ಆರ್ಜಿ ಆಹ್ವಾನಿಸಿದೆ (NBEMS Recruitment). ಡೆಪ್ಯುಟಿ ಡೈರಕ್ಟರ್, ಲಾ ಆಫೀಸರ್, ಜ್ಯೂನಿಯರ್ ಪ್ರೋಗ್ರಾಮರ್, ಜ್ಯೂನಿಯರ್ ಅಕೌಂಟೆಂಟ್ ಸೇರಿ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನವೆಂಬರ್ 9. ಭಾರತದ ಎಲ್ಲಿ ಬೇಕಾದರೂ ಉದ್ಯೋಗ ನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಬಹುದು.
ಹುದ್ದೆ ಮತ್ತು ಶೈಕ್ಷಣಿಕ ಅರ್ಹತೆಗಳ ವಿವರ
- ಡೆಪ್ಯುಟಿ ಡೈರಕ್ಟರ್- 7 ಹುದ್ದೆ- ವಿದ್ಯಾರ್ಹತೆ-ವೈದ್ಯಕಿಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ
- ಲಾ ಆಫೀಸರ್-1 ಹುದ್ದೆ-ವಿದ್ಯಾರ್ಹತೆ- ಎಲ್ಎಲ್ಬಿ ಪದವಿ
- ಜ್ಯೂನಿಯರ್ ಪ್ರೋಗ್ರಾಮರ್-6 ಹುದ್ದೆ-ವಿದ್ಯಾರ್ಹತೆ-ಬಿ.ಟೆಕ್/ ಬಿಇ/ ಬಿಸಿಎ/ ಡಿಒಇಎಸಿಸಿ(ಬಿ ಅಥವಾ ಸಿ ಶ್ರೇಣಿ)/ ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ/ಐಟಿ/ ಎಲೆಕ್ಟ್ರಾನಿಕ್ಸ್
- ಜ್ಯೂನಿಯರ್ ಅಕೌಂಟೆಂಟ್-3 ಹುದ್ದೆ- ವಿದ್ಯಾರ್ಹತೆ- ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಗಣಿತ ಅಥವಾ ಸ್ಟಾಟಿಸ್ಟಿಕ್ಸ್ನಲ್ಲಿ ಪದವಿ ಅಥವಾ ಕಾಮರ್ಸ್ ಪದವಿ
- ಸ್ಟೆನೋಗ್ರಾಫರ್-7 ಹುದ್ದೆ-ವಿದ್ಯಾರ್ಹತೆ- ದ್ವಿತೀಯ ಪಿಯುಸಿ
- ಜ್ಯೂನಿಯರ್ ಅಸಿಸ್ಟೆಂಟ್-24 ಹುದ್ದೆ-ವಿದ್ಯಾರ್ಹತೆ- ದ್ವಿತೀಯ ಪಿಯುಸಿ
ವಯೋಮಿತಿ ಮತ್ತು ಅರ್ಜಿ ಶುಲ್ಕ
ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಾಮಾನ್ಯ/ ಒಬಿಸಿ/ ಇಡಬ್ಲ್ಯುಎಸ್ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 1,500 ರೂ. 18% ಜಿಎಸ್‌ಟಿ ( ಒಟ್ಟು 1,700 ರೂ.) ಪಾವತಿಸಬೇಕು. ಎಸ್‌ಸಿ/ ಎಸ್‌ಟಿ/ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಆನ್‌ಲೈನ್ ಮೂಲಕವೇ ಶುಲ್ಕ ಪಾವತಿಸಬೇಕು.
ಇದನ್ನೂ ಓದಿ: Job Alert: ಜಯದೇವ ಹೃದ್ರೋಗ ವಿಜ್ಞಾನ, ಸಂಶೋಧನಾ ಸಂಸ್ಥೆಯಲ್ಲಿ 100 ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಆಹ್ವಾನ
ಆಯ್ಕೆ ವಿಧಾನ
ಹಂತ -1: ಮೊದಲಿಗೆ 200 ಅಂಕಗಳ ಕಂಪ್ಯೂಟರ್ ಬೇಸ್ಡ್ ಟೆಸ್ಟ್ (CBT) ನಡೆಯಲಿದೆ. ಕನಿಷ್ಠ ಅಂಕ 50%(ಸಾಮಾನ್ಯ ಅಭ್ಯರ್ಥಿಗಳಿಗೆ) ಮತ್ತು 40%(ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ). ತಪ್ಪಾದ ಉತ್ತರಕ್ಕೆ ನೆಗೆಟಿವ್ ಅಂಕಗಳಿವೆ.
ಹಂತ- 2: ಎರಡನೇ ಪರೀಕ್ಷೆ ಕಂಪ್ಯೂಟರ್ ಜ್ಞಾನ/ ಕೌಶಲ್ಯ ಪರೀಕ್ಷೆ. ಇದು 100 ಅಂಕಗಳ ಪರೀಕ್ಷೆಯಾಗಿದ್ದು, ಸುಮಾರು 500 ಇಂಗ್ಲಿಷ್ ಪದಗಳನ್ನು 15 ನಿಮಿಷಗಳಲ್ಲಿ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಬೇಕಾಗುತ್ತದೆ. ಆಯ್ಕೆಗಾಗಿ ಸಂದರ್ಶನ ಇರುವುದಿಲ್ಲ.
ಅರ್ಜಿ ಸಲ್ಲಿಕೆ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ತೆರೆದುಕೊಳ್ಳುವ ಹೋಮ್ ಪೇಜ್ನಲ್ಲಿ NBEMS Apply Online link ಆಯ್ಕೆ ಸೆಲೆಕ್ಟ್ ಮಾಡಿ
- ಪರೀಕ್ಷೆಗಾಗಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ
- ಅರ್ಜಿ ಭರ್ತಿ ಮಾಡಿ, ಅಗತ್ಯವಾದ ಡಾಕ್ಯುಮೆಂಟ್/ ಫೋಟೊ (ಅಗತ್ಯವಿದ್ದರೆ ಮಾತ್ರ) ಅಪ್ಲೋಡ್ ಮಾಡಿ
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ತುಂಬಿ
- ಭವಿಷ್ಯದ ಅಗತ್ಯಗಳಿಗಾಗಿ ಅರ್ಜಿ ಪ್ರಿಂಟ್ ಔಟ್ ತೆಗೆದಿಡಿ
- ಗಮನಿಸಿ ಅರ್ಜಿ ಸಲ್ಲಿಸುವಾಗ ಸಂಪರ್ಕ ಸಾಧಿಸಲು ಸರಿಯಾದ ಫೋನ್ ನಂಬರ್, ಇಮೇಲ್ ಐಡಿ ನಮೂದಿಸಿ
ಹೆಚ್ಚಿನ ಮಾತಿಗಾಗಿ ಅಧಿಕೃತ ವೆಬ್‌ಸೈಟ್ https://nbe.edu.in/ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.