ನವ ದೆಹಲಿ: ನ್ಯಾಷನಲ್ ಹೌಸಿಂಗ್ ಬೋರ್ಡ್(NHB) ಖಾಲಿ ಇರುವ 43 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪ್ರಾಜೆಕ್ಟ್ ಫೈನಾನ್ಸ್, ಚೀಫ್ ಫೈನಾನ್ಶಿಯಲ್ ಆಫೀಸರ್, ಎಕಾನಾಮಿಸ್ಟ್, MIS, ಚೀಫ್ ಎಕಾನಾಮಿಸ್ಟ್, ಸೀನಿಯರ್ ಅಪ್ಲಿಕೇಷನ್ ಡೆವಲಪರ್, ಅಪ್ಲಿಕೇಷನ್ ಡೆವಲಪರ್, ಸೀನಿಯರ್ ಪ್ರಾಜೆಕ್ಟ್ ಫೈನಾನ್ಸ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆನ್ಲೈನ್ ಮೂಲಕ ಅಕ್ಟೋಬರ್ 18ರೊಳಗೆ ಅರ್ಜಿ ಸಲ್ಲಿಸಬೇಕು. www.nhb.org.in. ಮೂಲಕ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಭಾರತದ ಎಲ್ಲಿಯಾದರೂ ಉದ್ಯೋಗ ನಿರ್ವಹಿಸಲು ಅಭ್ಯರ್ಥಿಗಳು ತಯಾರಿರಬೇಕು.
ಅರ್ಜಿ ಶುಲ್ಕ
ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 850 ರೂ. ಪಾವತಿಸಬೇಕು. ಮೀಸಲಾತಿಗೆ ಅನುಗುಣವಾಗಿ ರಿಯಾಯಿತಿ ಇದ್ದು, ಎಸ್ಸಿ, ಎಸ್ಟಿ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು 175 ರೂ. ಪಾವತಿಸಿದರೆ ಸಾಕು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.
ಇದನ್ನೂ ಓದಿ: RBI Assistant Recruitment: ಆರ್ಬಿಐನಲ್ಲಿದೆ 450 ಹುದ್ದೆ; ಈ ಪದವಿ ಪಡೆದಿದ್ದರೆ ಇಂದೇ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ವೆಬ್ಸೈಟ್ www.nhb.org.in.ಗೆ ಭೇಟಿ ನೀಡಿ
- ಆಗ ತೆರೆದುಕೊಳ್ಳುವ NHB ಹೋಮ್ಪೇಜ್ನ ಕೆಳಗಡೆ ಬಲಬದಿಯಲ್ಲಿ ಕಾಣಿಸುವ “Apply Online” ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಆಗ ರಿಜಿಸ್ಟ್ರೇಶನ್ ಫಾರ್ಮ್ ತೆರೆದುಕೊಳ್ಳಲಿದೆ.
- ಈ ಪಾರ್ಮ್ನಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತುಂಬಿ
- ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಿ
- ಈಗ ಅರ್ಜಿ ಶುಲ್ಕವನ್ನು ತುಂಬಿ
- ಅಕ್ಟೋಬರ್ 18ರೊಳಗೆ ಈ ಅರ್ಜಿ ಸಲ್ಲಿಸಿ
- ಭವಿಷ್ಯದ ಅಗತ್ಯಗಳಿಗಾಗಿ ಈ ಅರ್ಜಿಯ ಪ್ರಿಂಟ್ ಔಟ್ ತೆಗೆದಿಡಿ.