ನವ ದೆಹಲಿ: ನ್ಯಾಷನಲ್ ಇಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ & ಇನ್ಫಾರ್ಮೇಷನ್ ಟೆಕ್ನಾಲಜಿ ಖಾಲಿ ಇರುವ 80 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ (NIELIT Recruitment). ಇವು ಟ್ರೇಡ್ಸ್ ಮ್ಯಾನ್, ಹೆಲ್ಪರ್ ಹುದ್ದೆಗಳಾಗಿದ್ದು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು. ಭಾರತದ ಎಲ್ಲಿ ಬೇಕಾದರೂ ಉದ್ಯೋಗ ಮಾಡಲು ತಯಾರಿರುವ ಅಭ್ಯರ್ಥಿಗಳು ಅಕ್ಟೋಬರ್ 31ರೊಳಗೆ ಅರ್ಜಿ ಸಲ್ಲಿಸಬೇಕು.
ಹುದ್ದೆಗಳ ವಿವರ
ಡ್ರಾಫ್ಟ್ಸ್‌ಮ್ಯಾನ್ ಸಿ-5 ಲ್ಯಾಬ್ ಅಸಿಸ್ಟೆಂಟ್ ಬಿ-5, ಲ್ಯಾಬ್ ಅಸಿಸ್ಟೆಂಟ್ ಎ-20, ಟ್ರೇಡ್ಸ್‌ಮ್ಯಾನ್ ಬಿ-26, ಹೆಲ್ಪರ್ ಬಿ-24 ಒಟ್ಟು 80 ಹುದ್ದೆಗಳಿವೆ. ವೇತನ ಶ್ರೇಣಿ ಪ್ರತಿ ತಿಂಗಳಿಗೆ 18,000 ರೂ. – 92,300 ರೂ.
ಶೈಕ್ಷಣಿಕ ಅರ್ಹತೆ
ಡ್ರಾಫ್ಟ್ಸ್‌ಮ್ಯಾನ್ ಸಿ-ಎಸ್ಸೆಸ್ಸೆಲ್ಸಿ, ಐಟಿಐ
ಲ್ಯಾಬ್ ಅಸಿಸ್ಟೆಂಟ್ ಬಿ-ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ
ಲ್ಯಾಬ್ ಅಸಿಸ್ಟೆಂಟ್ ಎ-ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ
ಟ್ರೇಡ್ಸ್‌ಮ್ಯಾನ್ ಬಿ-ಎಸ್ಸೆಸ್ಸೆಲ್ಸಿ, ಐಟಿಐ
ಹೆಲ್ಪರ್ ಬಿ-ಎಸ್ಸೆಸ್ಸೆಲ್ಸಿ
ವಯೋಮಿತಿ
ಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ & ಇನ್ಫರ್ಮೇಷನ್ ಟೆಕ್ನಾಲಜಿ ನೇಮಕಾತಿ ಅಧಿಸೂಚನೆಯ ಪ್ರಕಾರ ಅಕ್ಟೋಬರ್ 31, 2023ಕ್ಕೆ ಅನ್ವಯಿಸುವಂತೆ ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿ 27 ವರ್ಷ ಮೀರಿರಬಾರದು. ಮೀಸಲಾತಿಗೆ ಅನುಗುಣವಾಗಿ ವಿನಾಯಿತಿ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇದೆ.
ಇದನ್ನೂ ಓದಿ: CDAC Recruitment 2023: 278 ಹುದ್ದೆಗಳಿವೆ; ಇಂದೇ ಅರ್ಜಿ ಸಲ್ಲಿಸಿ
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಎಸ್‌ಸಿ/ಎಸ್‌ಟಿ/ಮಹಿಳೆ/ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಜನರಲ್ ಮತ್ತು ಇತರ ವಿಭಾಗದ ಅಭ್ಯರ್ಥಿಗಳು ಆರ್ಜಿ ಶುಲ್ಕವಾಗಿ 200 ರೂ. ಪಾವತಿಸಬೇಕು. ಪಾವತಿ ವಿಧಾನ: ಆನ್‌ಲೈನ್. ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸುವ ಮುನ್ನ ಕೇಳಿರುವ ಎಲ್ಲ ಅರ್ಹತೆ ಇರುವುದನ್ನು ಖಚಿತಪಡಿಸಿಕೊಳ್ಳಿ
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಸಂವಹನಕ್ಕೆ ಅಗತ್ಯವಾದ, ಸರಿಯಾದ ಫೋನ್ ನಂಬರ್, ಇಮೇಲ್ ಐಡಿ ನಮೂದಿಸಿ. ಐಡಿ ಪ್ರೂಫ್, ವಯಸ್ಸಿನ ದಾಖಲಾತಿ, ಶೈಕ್ಷಣಿಕ ಅರ್ಹತೆಯ ದಾಖಲಾತಿ, ರೆಸ್ಯೂಮ್ ಇತ್ಯಾದಿಗಳನ್ನು ರೆಡಿ ಮಾಡಿಟ್ಟುಕೊಳ್ಳಿ.
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ಅಗತ್ಯವಾದ ಎಲ್ಲ ಮಾಹಿತಿಗಳನ್ನು ತುಂಬಿ. ಡಾಕ್ಯುಮೆಂಟ್ನ ಸ್ಕ್ಯಾನ್ ಪ್ರತಿ, ನಿಮ್ಮ ಫೋಟೊ (ಅಗತ್ಯವಿದ್ದರೆ ಮಾತ್ರ) ಅಪ್ಲೋಡ್ ಮಾಡಿ
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ
- ಎಲ್ಲ ಮಾಹಿತಿ ಸರಿಯಾಗಿದೆ ಎನ್ನುವುದನ್ನು ಖಚಿತಪಡಿಸಿದ ಬಳಿಕ NIELIT ನೇಮಕಾತಿ 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು Submit ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ನಂಬರ್ ಅಥವಾ ರಿಕ್ವೆಸ್ಟ್ ನಂಬರ್ ತೆಗೆದಿಡಿ.
ಅರ್ಜಿ ನಮೂನೆಯ ಆನ್‌ಲೈನ್ ಸಲ್ಲಿಕೆ/ಅಡ್ಮಿಟ್ ಕಾರ್ಡ್‌ನ ಡೌನ್‌ಲೋಡ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆ, ಸಂಶಯಗಳಿದ್ದರೆ recruit-stqc@nielit.gov.inಗೆ ಇಮೇಲ್ ಕಳುಹಿಸಿ. ಹೆಚ್ಚಿನ ಮಾಹಿತಿ ಅಧಿಕೃತ ವೆಬ್‌ಸೈಟ್ ವಿಳಾಸ nielit.gov.in ಸಂರ್ಕಿಸಿ.