ಬೆಂಗಳೂರು: ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ (The National Institute of Mental Health and Neuro Sciences-NIMHANS) ಖಾಲಿ ಇರುವ 161 ನರ್ಸಿಂಗ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 18ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು (NIMHANS Recruitment 2023). ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ: https://www.nimhans.ac.in ನೋಡಿ.
ವಿದ್ಯಾರ್ಹತೆ
ಅಭ್ಯರ್ಥಿಗಳು ಬಿಎಸ್‌ಸಿ ನರ್ಸಿಂಗ್/ ಪೋಸ್ಟ್ ಬೇಸಿಕ್ ನರ್ಸಿಂಗ್ ಅಥವಾ ತತ್ಸಮಾನ ಕೋರ್ಸ್ ಮಾಡಿರಬೇಕು. ಅಲ್ಲದೆ ನರ್ಸ್ ಆ್ಯಂಡ್ ಮಿಡ್‌ವೈಫ್ ಇನ್ ಸ್ಟೇಟ್/ ಇಂಡಿಯನ್ ನರ್ಸಿಂಗ್ ಕೌನ್ಸಿಲ್ (Nurses & Midwife in State/Indian Nursing Council)ನಲ್ಲಿ ಕಡ್ಡಾಯವಾಗಿ ಹೆಸರು ನೋಂದಾಯಿಸಿರಬೇಕು. 50 ಅಥವಾ ಅದಕ್ಕಿಂತ ಹೆಚ್ಚಿನ ಬೆಡ್ ಉಳ್ಳ ಆಸ್ಪತ್ರೆ/ ಇನ್‌ಸ್ಟಿಟ್ಯೂಟ್‌ನಲ್ಲಿ 2 ವರ್ಷಗಳ ಕಾಲ ಕೆಲಸ ನಿರ್ವಹಿಸಿದ ಅನುಭವ ಇರಬೇಕು.
ಹುದ್ದೆಗಳ ವಿವರ
ಯಾವ ವರ್ಗಕ್ಕೆ ಎಷ್ಟು ಹುದ್ದೆ ಇದೆ ಎನ್ನುವುದನ್ನು ನೋಡುವುದಾದರೆ ಯುಆರ್-70, ಒಬಿಸಿ-39, ಇಡಬ್ಲ್ಯುಎಸ್-16, ಎಸ್‌ಸಿ-26, ಎಸ್‌ಟಿ-10 ಹುದ್ದೆಗಳಿವೆ.
ಆಯ್ಕೆ ವಿಧಾನ ಮತ್ತು ವಯೋಮಿತಿ
ಪರೀಕ್ಷೆ/ ಸಂದರ್ಶನ, ಡಾಕ್ಯುಮೆಂಟ್ ಪರಿಶೀಲನೆ ಮೂಲಕ ಆಯ್ಕೆ ನಡೆಯಲಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 35 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ
ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳು 885 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಪಿಡಬ್ಲ್ಯುಡಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಇನ್ನು ಉಳಿದ ವರ್ಗದ ಅಭ್ಯರ್ಥಿಗಳು 1,180 ರೂ. ಪಾವತಿಸಬೇಕು.
ಅರ್ಜಿ ಸಲ್ಲಿಕೆ ವಿಧಾನ
- ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್ ಮಾಡಿ
- ತೆರೆದುಕೊಳ್ಳುವ ಹೋಮ್ ಪೇಜ್ನಲ್ಲಿ ನಿಬಂಧನೆಗಳನ್ನು ಗಮನವಿಟ್ಟು ಓದಿ Proceed ಆಯ್ಕೆ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಇಮೇಲ್ ಐಡಿ, ಫೋನ್ ನಂಬರ್ ಒದಗಿಸುವ ಮೂಲಕ ಹೆಸರು ನೋಂದಾಯಿಸಿ
- ನಿಮ್ಮ ರಿಜಿಸ್ಟ್ರೇಷನ್ ಐಡಿ, ಪಾಸ್ವರ್ಡ್ ಮೂಲಕ ಲಾಗಿನ್ ಆಗಿ
- ಅರ್ಜಿ ಭರ್ತಿ ಮಾಡಿ ಬೇಕಾದ ಡಾಕ್ಯುಮೆಂಟ್, ಫೋಟೊಗಳನ್ನು ಸರಿಯಾದ ಅಳತೆ ನೋಡಿಕೊಂಡು ಅಪ್ಲೋಡ್ ಮಾಡಿ
- ಅರ್ಜಿ ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದರೆ ಮಾತ್ರ)
- ಎಲ್ಲ ಮಾಹಿತಿ ಸರಿಯಾಗಿದೆಯೇ ಎನ್ನುವುದನ್ನು ಪರಿಶೀಲಿಸಿ Submit ಬಟನ್ ಕ್ಲಿಕ್ ಮಾಡಿ
- ಅಪ್ಲಿಕೇಷನ್ ಫಾರಂ ಅನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ. ಡಾಕ್ಯುಮೆಂಟ್ ಪರಿಶೀಲನೆ ವೇಳೆ ಇದು ಬೇಕಾಗುತ್ತದೆ.
ಇದನ್ನೂ ಓದಿ: JOB NEWS: 184 ಎಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ