ಬೆಂಗಳೂರು: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಿ ಉದ್ಯೋಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಪಿಂಚಣಿ ಪಡೆಯುತ್ತಿರುವ ಪಿಂಚಣಿದಾರರು ಜೀವನ ಪ್ರಮಾಣಪತ್ರ (Jeevan Pramaan Patra) ಸಲ್ಲಿಸಲು ನವೆಂಬರ್ 30 ಕೊನೆಯ ದಿನವಾಗಿದೆ. ಒಂದು ವೇಳೆ ಗಡುವಿನೊಳಗೆ ಲೈಫ್ ಸರ್ಟಿಫಿಕೇಟ್ ( Life Certificate) ಸಲ್ಲಿಸದಿದ್ದರೆ ಪಿಂಚಣಿ ಸ್ಥಗಿತವಾಗಲಿದೆ.
ಪಿಂಚಣಿ ಪಡೆಯುತ್ತಿರುವ ಪ್ರತಿಯೊಬ್ಬರೂ ಪ್ರತಿ ವರ್ಷ ತಾವು ಜೀವಂತ ಇರುವ ಬಗ್ಗೆ ‘ಲೈಫ್ ಸರ್ಟಿಫೀಕೇಟ್’ ಅನ್ನು ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಸಲ್ಲಿಸಬೇಕು. ನವೆಂಬರ್ 30ರೊಳಗೆ ಪಿಂಚಣಿದಾರರು ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡದಿದ್ದರೆ ಪಿಂಚಣಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಜತೆಗೆ ಮುಂಬರುವ ತಿಂಗಳ ಪಿಂಚಣಿ ಬರುವುದಿಲ್ಲ. ಬಳಿಕ, ಪ್ರಮಾಣ ಪತ್ರ ನೀಡಿ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಿಸಬೇಕು. ನಂತರ ಮುಂಬರುವ ಪಿಂಚಣಿಯಲ್ಲಿ ಹಳೆಯ ಬಾಕಿ ಸೇರಿಸಿ ಪಿಂಚಣಿ ಹಣ ಖಾತೆಗೆ ಜಮೆ ಆಗುತ್ತದೆ.
ಇದನ್ನೂ ಓದಿ | SSC Recruitment 2023 : ಅರೆಸೇನಾಪಡೆಗಳ 75 ಸಾವಿರವಲ್ಲ 26 ಸಾವಿರ ಹುದ್ದೆಗಳಿಗೆ ನೇಮಕ; ಕನ್ನಡದಲ್ಲಿಯೂ ನಡೆಯುತ್ತೆ ಪರೀಕ್ಷೆ!
ಏನಿದು ಜೀವನ ಪ್ರಮಾಣಪತ್ರ?
ಪಿಂಚಣಿ ಪಡೆಯುವವರು ಮೃತಪಟ್ಟ ಬಳಿಕವೂ ಅವರ ಖಾತೆಗೆ ಪಿಂಚಣಿ ಹಣ ಜಮೆಯಾಗುತ್ತಿತ್ತು. ಹಾಗಾಗಿ, ಇದನ್ನು ತಪ್ಪಿಸಲು ಫಲಾನುಭವಿಗಳು ಪ್ರತಿ ವರ್ಷ ತಾವು ಬದುಕಿರುವ ಬಗ್ಗೆ ಒಂದು ಪ್ರಮಾಣಪತ್ರ ಸಲ್ಲಿಕೆ ಮಾಡುವುದು ಕಡ್ಡಾಯ ಮಾಡಲಾಗಿದೆ. ಈ ಪ್ರಮಾಣ ಪತ್ರವನ್ನು ಪಿಂಚಣಿದಾರರು ಪೆನ್ಷನ್ ಡಿಸ್ಬರ್ಸಿಂಗ್ ಏಜೆನ್ಸಿ (ಪಿಡಿಎ) ಅಥವಾ ಪಿಂಚಣಿ ವಿತರಿಸುವ ಸಂಸ್ಥೆಗಳಲ್ಲಿ (ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್) ತೆರಳಿ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು. ಡಿಜಿಟಲ್ ಜೀವನ ಪ್ರಮಾಣಪತ್ರ ಯೋಜನೆಯನ್ನು ಕೇಂದ್ರ ಸರ್ಕಾರ 2014ರಲ್ಲಿ ಜಾರಿ ಮಾಡಿತ್ತು.