ಬೆಂಗಳೂರು: ಪವರ್ ಫೈನಾನ್ಸ್ ಕಾರ್ಪೋರೇಷನ್ (Power Finance Corporation-PFC Recruitment 2023) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಪ್ರಾಜೆಕ್ಟ್ ಕೋಆರ್ಡಿನೇಟರ್ (Project Coordinator) ಸೇರಿ ಸುಮಾರು 25 ಹುದ್ದೆಗಳು ಖಾಲಿ ಇದ್ದು, ಆಸಕ್ತರು ನವೆಂಬರ್ 22ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಭಾರತದ ಎಲ್ಲಿ ಬೇಕಾದರೂ ಉದ್ಯೋಗ ನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಅಧಿಕೃತ ವೆಬ್‌ಸೈಟ್ ವಿಳಾಸ: https://pfcindia.com/
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
- ಪ್ರಾಜೆಕ್ಟ್ ಕೋಆರ್ಡಿನೇಟರ್-22 ಹುದ್ದೆ-ವಿದ್ಯಾರ್ಹತೆ-ಬಿ.ಇ. ಅಥವಾ ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ ಐಟಿ/ ಸಿಎಸ್ನಲ್ಲಿ ಬಿ.ಟೆಕ್
- ಪ್ರಾಜೆಕ್ಟ್ ಕೋಆರ್ಡಿನೇಟರ್ (ಮ್ಯಾನೇಜ್ಮೆಂಟ್)-3 ಹುದ್ದೆ-ವಿದ್ಯಾರ್ಹತೆ-ಪದವಿ, ಎಚ್ಆರ್ನಲ್ಲಿ ಎಂಬಿಎ
ವಯೋಮಿತಿ
ಪವರ್ ಫೈನಾನ್ಸ್ ಕಾರ್ಪೋರೇಷನ್ ಅಧಿಸೂಚನೆ 2023 ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ ಮತ್ತು ಗರಿಷ್ಠ ವಯಸ್ಸು 45 ವರ್ಷ. ಮೀಸಲಾತಿಗೆ ಅನುಗುಣವಾಗಿ ವಿನಾಯಿತಿ ಲಭ್ಯ. ಒಬಿಸಿ(ಎನ್‌ಸಿಎಲ್)-3 ವರ್ಷ, ಎಸ್‌ಸಿ/ಎಸ್‌ಟಿ-5 ವರ್ಷ, ಪಿಡಬ್ಲ್ಯುಬಿಡಿ(ಯುಆರ್)-10 ವರ್ಷ, ಪಿಡಬ್ಲ್ಯುಬಿಡಿ(ಒಬಿಸಿ-ಎನ್‌ಸಿಎಸ್)-13 ವರ್ಷ, ಪಿಡಬ್ಲ್ಯುಬಿಡಿ(ಎಸ್‌ಸಿ/ಎಸ್‌ಟಿ)-15 ವರ್ಷಗಳ ವಿನಾಯಿತಿ ಇದೆ.
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಎಸ್‌ಸಿ/ ಎಸ್‌ಟಿ/ ಪಿಡಬ್ಲ್ಯುಬಿಡಿ/ ಇಎಸ್‌ಎಂ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಇತರ ಅಭ್ಯರ್ಥಿಗಳು ಆನ್‌ಲೈನ್ ಮೂಲಕ 100 ರೂ. ಅನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು. ವಿದ್ಯಾರ್ಹತೆ, ಅನುಭವ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಅಧಿಸೂಚನೆ ತಿಳಿಸಿದೆ.
ಪವರ್ ಫೈನಾನ್ಸ್ ಕಾರ್ಪೋರೇಷನ್ ಅಧಿಸೂಚನೆ 2023ಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಆಯ್ಕೆ ವಿಧಾನ
- PFC Recruitment 2023 ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಸಂವಹನಕ್ಕೆ ಅಗತ್ಯವಾದ, ಸರಿಯಾದ ಫೋನ್ ನಂಬರ್, ಇ-ಮೇಲ್ ಐಡಿ ನಮೂದಿಸಿ. ಐಡಿ ಪ್ರೂಫ್, ವಯಸ್ಸಿನ ದಾಖಲಾತಿ, ಶೈಕ್ಷಣಿಕ ಅರ್ಹತೆಯ ದಾಖಲಾತಿ, ರೆಸ್ಯೂಮ್ ಇತ್ಯಾದಿ ರೆಡಿ ಮಾಡಿಟ್ಟುಕೊಳ್ಳಿ.
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ಅಗತ್ಯವಾದ ಎಲ್ಲ ಮಾಹಿತಿಗಳನ್ನು ತುಂಬಿ. ಡಾಕ್ಯುಮೆಂಟ್ನ ಸ್ಕ್ಯಾನ್ ಪ್ರತಿ, ನಿಮ್ಮ ಫೋಟೊ (ಅಗತ್ಯವಿದ್ದರೆ ಮಾತ್ರ) ಅಪ್ಲೋಡ್ ಮಾಡಿ
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ)
- ಎಲ್ಲ ಮಾಹಿತಿ ಸರಿಯಾಗಿದೆ ಎನ್ನುವುದನ್ನು ಖಚಿತಪಡಿಸಿದ ಬಳಿಕ PFC Recruitment 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು Submit ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ನಂಬರ್ ಅಥವಾ ರಿಕ್ವೆಸ್ಟ್ ನಂಬರ್ ತೆಗೆದಿಡಲು ಮರೆಯಬೇಡಿ.
ಯಾವುದೇ ಮಾರ್ಗದರ್ಶನ / ಸ್ಪಷ್ಟೀಕರಣ/ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ವಿಳಾಸ https://pfcindia.com/ಗೆ ಭೇಟಿ ನೀಡಿ. ಜತೆಗೆ ದೂರವಾಣಿ ಸಂಖ್ಯೆ: 011-23456312/011-23456346 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: Job News: IREL 88 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ