ಬೆಂಗಳೂರು: ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL Recruitment 2023) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. 184 ಎಂಜಿನಿಯರ್ ಟ್ರೈನಿ ಹುದ್ದೆಗಳು ಖಾಲಿ ಇದ್ದು, ನವೆಂಬರ್ 10ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆ ತಿಳಿಸಿದೆ.
ಹುದ್ದೆಗಳ ವಿವರ
ಎಂಜಿನಿಯರ್ ಟ್ರೈನಿ (ಎಲೆಕ್ಟ್ರಿಕಲ್)- 144
ಎಂಜಿನಿಯರ್ ಟ್ರೈನಿ (ಸಿವಿಲ್)- 28
ಎಂಜಿನಿಯರ್ ಟ್ರೈನಿ (ಎಲೆಕ್ಟ್ರಾನಿಕ್ಸ್)- 6
ಎಂಜಿನಿಯರ್ ಟ್ರೈನಿ (ಕಂಪ್ಯೂಟರ್ ಸೈನ್ಸ್)- 6 ಹುದ್ದೆಗಳು ಖಾಲಿ ಇವೆ.
ವಿದ್ಯಾರ್ಹತೆ
- ಎಂಜಿನಿಯರ್ ಟ್ರೈನಿ (ಎಲೆಕ್ಟ್ರಿಕಲ್) – ಬಿ.ಇ./ ಬಿ.ಟೆಕ್/ ಬಿ.ಎಸ್‌ಸಿ. ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ (ಪವರ್) / ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್/ ಪವರ್ ಸಿಸ್ಟಮ್ಸ್ ಎಂಜಿನಿಯರಿಂಗ್/ ಪವರ್ ಎಂಜಿನಿಯರಿಂಗ್ (ಎಲೆಕ್ಟ್ರಿಕಲ್).
- ಎಂಜಿನಿಯರ್ ಟ್ರೈನಿ (ಸಿವಿಲ್) -ಬಿ.ಇ./ ಬಿ.ಟೆಕ್/ ಬಿ.ಎಸ್‌ಸಿ. ಸಿವಿಲ್ ಎಂಜಿನಿಯರಿಂಗ್
- ಎಂಜಿನಿಯರ್ ಟ್ರೈನಿ (ಎಲೆಕ್ಟ್ರಾನಿಕ್ಸ್) – ಬಿ.ಇ./ ಬಿ.ಟೆಕ್/ ಬಿ.ಎಸ್‌ಸಿ. ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಷನ್/ ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್ ಕಮ್ಯುನಿಕೇಷನ್/ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್
- ಎಂಜಿನಿಯರ್ ಟ್ರೈನಿ (ಕಂಪ್ಯೂಟರ್ ಸೈನ್ಸ್) – ಬಿ.ಇ./ ಬಿ.ಟೆಕ್/ ಬಿ.ಎಸ್‌ಸಿ. ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಎಂಜಿನಿಯರಿಂಗ್/ ಇನ್ಫಾರ್ಮೇಷನ್ ಟೆಕ್ನಾಲಜಿ. ಅಭ್ಯರ್ಥಿಗಳು ಶೇ. 60ಕ್ಕಿಂತ ಅಧಿಕ ಅಂಕ ಗಳಿಸಿರಬೇಕು.
ಅರ್ಜಿ ಶುಲ್ಕ ಮತ್ತು ವಯೋಮಿತಿ
ಸಾಮಾನ್ಯ/ ಒಬಿಸಿ/ ಇಡಬ್ಲ್ಯುಎಸ್ ಅಭ್ಯರ್ಥಿಗಳು 500 ರೂ. ಅರ್ಜಿ ಸಲ್ಲಿಸಬೇಕು. ಎಸ್‌ಸಿ/ ಎಸ್‌ಟಿ/ ಪಿಡಬ್ಲ್ಯುಬಿಡಿ/ ಎಕ್ಸ್ ಸರ್ವಿಸ್ ಮ್ಯಾನ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳ ವಯಸ್ಸು 28 ವರ್ಷ ಮೀರಿರಬಾರದು. ಮೀಸಲಾತಿಗೆ ಅನುಗುಣವಾಗಿ ರಿಯಾಯಿತಿ ಲಭ್ಯವಿದೆ. ಒಬಿಸಿ 3 ವರ್ಷ, ಎಸ್‌ಸಿ/ ಎಸ್‌ಟಿ 5 ವರ್ಷ ಮತ್ತು ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ.
ಆಯ್ಕೆ ವಿಧಾನ
ಗೇಟ್ (GATE) 2023 ಅಂಕ, ನಡವಳಿಕೆಯ ಮೌಲ್ಯಮಾಪನ, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಅರ್ಜಿ ಅಲ್ಲಿಕೆ ವಿಧಾನ
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಸಂವಹನಕ್ಕೆ ಅಗತ್ಯವಾದ, ಸರಿಯಾದ ಫೋನ್ ನಂಬರ್, ಇಮೇಲ್ ಐಡಿ ನಮೂದಿಸಿ. ಐಡಿ ಪ್ರೂಫ್, ವಯಸ್ಸಿನ ದಾಖಲಾತಿ, ಶೈಕ್ಷಣಿಕ ಅರ್ಹತೆಯ ದಾಖಲಾತಿ, ರೆಸ್ಯೂಮ್ ಇತ್ಯಾದಿ ರೆಡಿ ಮಾಡಿಟ್ಟುಕೊಳ್ಳಿ.
- ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ನೇಮಕಾತಿ-2023 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- Careers Section, Job Opportunities ಆಯ್ಕೆ ಮಾಡಿದ ಬಳಿಕ “Recruitment of Engineer Trainee” ಮೇಲೆ ಕ್ಲಿಕ್ ಮಾಡಿ
- ಕೇಳಿರುವ ವಿವರಗಳನ್ನು ತುಂಬಿ. ನಿಮ್ಮ ಮೊಬೈಲ್ ನಂಬರ್ ಮತ್ತು Captcha ನಮೂದಿಸಿ
- ಉಲ್ಲೇಖಿಸಿರುವ ಡಾಕ್ಯುಮೆಂಟ್ ಅನ್ನು ಅಪ್ಲೋಡ್ ಮಾಡಿ
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ತುಂಬಿ
- ಎಲ್ಲ ಮಾಹಿತಿ ಸರಿಯಾಗಿದೆ ಎನ್ನುವುದನ್ನು ಖಚಿತಪಡಿಸಿದ ಬಳಿಕ PGCIL Recruitment 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು Submit ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ನಂಬರ್ ಅಥವಾ ರಿಕ್ವೆಸ್ಟ್ ನಂಬರ್ ತೆಗೆದಿಡಿ.
ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್ ವಿಳಾಸ https://www.powergrid.inಗೆ ಭೇಟಿ ನೀಡಿ.
ಇದನ್ನೂ ಓದಿ: IB Recruitment 2023: ಎಸ್ಸೆಸ್ಸೆಲ್ಸಿ ಓದಿದವರಿಗೆ ಗುಡ್‌ನ್ಯೂಸ್; ಇಂಟೆಲಿಜೆನ್ಸ್ ಬ್ಯೂರೊ ಹುದ್ದೆಗಳು