ನಮ್ಮ ದೇಶದಲ್ಲಿ ಅತಿ ಹೆಚ್ಚು ಮಂದಿಗೆ ಉದ್ಯೋಗ ನೀಡಿರುವ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ಒಂದಾಗಿರುವ ಭಾರತೀಯ ಅಂಚೆ ಇಲಾಖೆಯು (India Post Office) ಭರ್ಜರಿ ನೇಮಕ ಪ್ರಕ್ರಿಯೆ ಆರಂಭಿಸಲಿದ್ದು (Post Office vacancy 2022), ಒಟ್ಟು 98,083 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ದೇಶದೆಲ್ಲೆಡೆ ಇರುವ ಅಂಚೆ ಕಚೇರಿಗಳಿಗಾಗಿ ಈ ನೇಮಕ ನಡೆಯಲಿದ್ದು, ಒಟ್ಟು ಹುದ್ದೆಗಳಲ್ಲಿ ೫೯,೦೯೯ ಪೋಸ್ಟ್‌ಮ್ಯಾನ್ ಹುದ್ದೆಗಳಾದರೆ, ೧,೪೪೫ ಮೇಲ್‌ಗಾರ್ಡ್ ಹುದ್ದೆಗಳಾಗಿವೆ. ಉಳಿದವು ಅಂದರೆ 37,539 ವಿವಿಧ ಕಾರ್ಯಗಳನ್ನು ನಿರ್ವಹಿಸುವ ಮಲ್ಟಿಟಾಸ್ಕಿಂಗ್ ಸಿಬ್ಬಂದಿ(ಎಂಟಿಎಸ್) ಹುದ್ದೆಗಳಾಗಿವೆ.
ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆಯೂ ಅಲ್ಲಿಯೇ ಲಭ್ಯವಾಗಲಿದೆ. ರಾಜ್ಯದಲ್ಲಿಯೇ 5,731 ಹುದ್ಡೆಗಳಿಗೆ ನೇಮಕ ನಡೆಯಲಿದೆ. ಇದರಲ್ಲಿ 3,887 ಪೋಸ್ಟ್ ಮ್ಯಾನ್ ಹುದ್ದೆಗಳಾದರೆ, 90 ಮೈಲ್ ಗಾರ್ಡ್ ಹುದ್ದೆಗಳಾಗಿವೆ. 1,754 ಹುದ್ದೆಗಳು ಎಂಟಿಎಸ್ ಹುದ್ದೆಗಳಾಗಿವೆ.
ವಿದ್ಯಾರ್ಹತೆ ಏನೇನು?
ಪೋಸ್ಟ್‌ಮ್ಯಾನ್ ಹುದ್ದೆಗಳಿಗೆ: ಎಸ್‌ಎಸ್‌ಎಲ್‌ಸಿ/ ಪಿಯುಸಿಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದಾದರೂ ಅಧಿಕೃತ ಪರೀಕ್ಷಾ ಮಂಡಳಿಯಿಂದ ೧೦/ ೧೨ನೇ ತರಗತಿ ಪೂರ್ಣಗೊಳಿದವರೂ ಅರ್ಜಿ ಸಲ್ಲಿಸಬಹುದು.
ಮೇಲ್‌ಗಾರ್ಡ್:ಎಸ್‌ಎಸ್‌ಎಲ್‌ಸಿ/ ಪಿಯುಸಿಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದಾದರೂ ಅಧಿಕೃತ ಪರೀಕ್ಷಾ ಮಂಡಳಿಯಿಂದ ೧೦/ ೧೨ನೇ ತರಗತಿ ಪೂರ್ಣಗೊಳಿದವರೂ ಅರ್ಜಿ ಸಲ್ಲಿಸಬಹುದು. ಜತೆಗೆ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಕೌಶಲ್ಯ ಹೊಂದಿರಬೇಕು.
ಎಂಟಿಎಸ್: ಎಸ್‌ಎಸ್‌ಎಲ್‌ಸಿ/ ಪಿಯುಸಿಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಯಾವುದಾದರೂ ಅಧಿಕೃತ ಪರೀಕ್ಷಾ ಮಂಡಳಿಯಿಂದ ೧೦/ ೧೨ನೇ ತರಗತಿ ಪೂರ್ಣಗೊಳಿದವರೂ ಅರ್ಜಿ ಸಲ್ಲಿಸಬಹುದು. ಜತೆಗೆ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಕೌಶಲ್ಯ ಹೊಂದಿರಬೇಕು.
ವಯೋಮಿತಿ ಎಷ್ಟು?
ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು ೧೮ ವರ್ಷ ಮತ್ತು ಗರಿಷ್ಟ ವಯೋಮಿತಿ ೩೨ ವರ್ಷ ಎಂದು ನಿಗದಿಪಡಿಸಲಾಗಿದೆ. ಗರಿಷ್ಠ ವಯೋಮಿತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭ್ಯರ್ಥಿಗಳಿಗೆ ೫ ವರ್ಷ, ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ೩ ವರ್ಷ, ವಿಶೇಷ ಚೇತನರಿಗೆ ೧೦ ವರ್ಷ, ಇತರ ಹಿಂದುಳಿದ ವರ್ಗಗಳ ವಿಶೇಷ ಚೇತನರಿಗೆ ೧೩ ವರ್ಷ ಮತ್ತು ಪರಿಶಿಷ್ಟ ಜಾತಿ/ಪಂಗಡಗಳ ವಿಶೇಷ ಚೇತನರಿಗೆ ೧೫ ವರ್ಷ ಸಡಿಲಿಕೆ ನೀಡಲಾಗಿರುತ್ತದೆ.
ಅರ್ಜಿ ಶುಲ್ಕ: ಎಲ್ಲಾ ಹುದ್ದೆಗಳಿಗೂ ೧೦೦ ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆದರೆ ಮಹಿಳಾ ಅಭ್ಯರ್ಥಿಗಳಿಗೆ, ಪರಿಶಿಷ್ಟ ಜಾತಿ/ಪಂಗಡಗಳ, ವಿಶೇಷ ಚೇತನ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿರುತ್ತದೆ.
ವೇತನ ಎಷ್ಟಿರುತ್ತದೆ?
ಈ ಮೂರು ಹುದ್ದೆಗಳಿಗೂ 33,718 ರೂ.ಗಳಿಂದ 35,370 ರೂ.ಗಳವರಗೆ ವೇತನ ನಿಗದಿ ಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ವೆಬ್: INDIAN POST OFFICE URL
ಇದನ್ನೂ ಓದಿ| IBPS SO Recruitment 2022 | ರಾಷ್ಟ್ರೀಕೃತ ಬ್ಯಾಂಕ್‌ಗಳ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ