ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ (KPSC) ವತಿಯಿಂದ ನಡೆಸಲಾಗುತ್ತಿರುವ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ಅರ್ಹತಾ ಪಟ್ಟಿ ಪ್ರಕಟಿಸಲು ಸಿದ್ಧಪಡಿಸಲಾದ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ವಿವಿಧ ಇಲಾಖೆ ಹೆಸರು, ಹುದ್ದೆಗಳ ಸಂಖ್ಯೆ, ಪರೀಕ್ಷೆ ನಡೆಸಿದ ದಿನಾಂಕ, ಅರ್ಹತಾ ಪಟ್ಟಿ ಪ್ರಕಟಿಸುವ ದಿನಾಂಕವನ್ನು ವೇಳಾಪಟ್ಟಿಯಲ್ಲಿ ನೀಡಲಾಗಿದೆ.
ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಎಂಜಿನಿಯರ್ (ಗ್ರೇಡ್-1 ಸಿವಿಲ್) 660 ಹುದ್ದೆಗಳಿಗೆ ಸೆ.23, ಲೋಕೋಪಯೋಗಿ ಇಲಾಖೆಯಲ್ಲಿನ ಕಿರಿಯ ಎಂಜಿನಿಯರ್(ಸಿವಿಲ್) 330 ಹುದ್ದೆಗಳಿಗೆ ಸೆ.15 ಹಾಗೂ ಕರ್ನಾಟಕ ಸರ್ಕಾರದ ಸಚಿವಾಲಯದ ಸಂಸದೀಯ ವ್ಯವಹಾರಗಳ ಇಲಾಖೆಯಲ್ಲಿನ ಪ್ರಾರೂಪಣಾ ಸಹಾಯಕರು 3 ಹುದ್ದೆ, ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕ ನಿರೀಕ್ಷಕರು 26 ಹುದ್ದೆ, ಪೌರಾಡಳಿತ ನಿರ್ದೇಶನಾಲಯದಲ್ಲಿನ (ನಗರ ಸ್ಥಳೀಯ ಸಂಸ್ಥೆ) ಅಕೌಂಟೆಂಟ್ 21 ಹುದ್ದೆ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಸಾಂಖ್ಯಿಕ ನಿರೀಕ್ಷಕರು 17 ಹುದ್ದೆಗಳಿಗೆ ಅರ್ಹತಾ ಪಟ್ಟಿ ಪ್ರಕಟಿಸಲು ತಾತ್ಕಾಲಿಕ ದಿನಾಂಕ ಅ.31 ನಿಗದಿ ಮಾಡಲಾಗಿದೆ.
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು 72 ಹುದ್ದೆ, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿನ ಲೆಕ್ಕಪರಿಶೋಧಕರು 20 ಹುದ್ದೆ, ಪೌರಾಡಳಿತ ನಿರ್ದೇಶನಾಲಯದ (ನಗರ ಸ್ಥಳೀಯ ಸಂಸ್ಥೆ) ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು 66 ಹುದ್ದೆ, ಕೃಷಿ ಮಾರಾಟ ಇಲಾಖೆಯಲ್ಲಿನ ಮಾರುಕಟ್ಟೆ ಮೇಲ್ವಿಚಾರಕರು 6 ಹುದ್ದೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಗಣತಿದಾರರು 6 ಹುದ್ದೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ನಿಲಯ ಮೇಲ್ವಿಚಾರಕರು (ಪುರುಷ) 4 ಹುದ್ದೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ನಿಲಯ ಮೇಲ್ವಿಚಾರಕರು (ಮಹಿಳೆ) 8 ಹುದ್ದೆಗಳ ಪಟ್ಟಿ ಬಿಡುಗಡೆಗೆ ಅ.31 ನಿಗದಿಪಡಿಸಲಾಗಿದೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದಲ್ಲಿನ ವಿದ್ಯಾರ್ಥಿ ನಿಲಯ ಮೇಲ್ವಿಚಾರಕರು (ವಾರ್ಡನ್) 3 ಹುದ್ದೆ, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಕಿರಿಯ ಲೆಕ್ಕ ಸಹಾಯಕರು 24 ಹುದ್ದೆ, ಪೌರಾಡಳಿತ ನಿರ್ದೇಶನಾಲಯದಲ್ಲಿನ (ನಗರ ಸ್ಥಳೀಯ ಸಂಸ್ಥೆ) ಕರವಸೂಲಿಗಾರರು 10 ಹುದ್ದೆ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಗಣತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್ 45 ಹುದ್ದೆ, ಸಮಾಜ ಕಲ್ಯಾಣ ಇಲಾಖೆಯಲ್ಲಿನ ವಿದ್ಯಾರ್ಥಿ ನಿಲಯದ ವಾರ್ಡನ್ (ಬಾಲಕ/ಬಾಲಕಿ) 140 ಹುದ್ದೆ, ಕರ್ನಾಟಕ ಸರ್ಕಾರದ ಸಚಿವಾಲಯದ ಗ್ರಂಥಾಲಯ ಸಹಾಯಕರು 1 ಹುದ್ದೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿನ ಗೃಹಪಾಲಕ/ಗೃಹಪಾಲಕಿ 50 ಹುದ್ದೆಗಳಿಗೆ ಅ.31 ರಂದು ಘೋಷಿಸಲಾಗುವುದು.
2019-20ನೇ ಸಾಲಿನ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಗಳು 16 ಹುದ್ದೆ, 2019-20ನೇ ಸಾಲಿನ ರಾಜ್ಯದ ವಿವಿಧ ಇಲಾಖೆಯ ಕಿರಿಯ ಸಹಾಯಕ/ ದ್ವಿತೀಯ ದರ್ಜೆ ಸಹಾಯಕರು 1323 ಹುದ್ದೆಗಳಿಗೆ ಅರ್ಹತಾ ಪಟ್ಟಿ ಪ್ರಕಟಿಸಲು ತಾತ್ಕಾಲಿಕ ದಿನಾಂಕ ಆ.22 ನಿಗದಿಪಡಿಸಲಾಗಿದೆ.