Site icon Vistara News

SBI Recruitment 2023: ಎಸ್‌ಬಿಐಯಲ್ಲಿದೆ 439 ಹುದ್ದೆ; ಅರ್ಜಿ ಸಲ್ಲಿಕೆಗೆ ಇಂದೇ ಕೊನೆಯ ದಿನ

sbi

sbi

ನವ ದೆಹಲಿ: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಉದ್ಯೋಗ ಹುಡುಕುವವರಿಗೆ ಎಸ್‌ಬಿಐ(SBI)ಉತ್ತಮ ಅವಕಾಶ ಒದಗಿಸುತ್ತಿದೆ. 439 ವಿಶೇಷ ಅಧಿಕಾರಿಗಳನ್ನು(SCO) ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ (SBI Recruitment 2023). ದೇಶಾದ್ಯಂತ ಇರುವ ಶಾಖೆಗಳಿಗೆ ನೇಮಕಾತಿ ನಡೆಯಲಿದೆ ಎಂದು ನೋಟಿಫಿಕೇಷನ್‌ನಲ್ಲಿ ತಿಳಿಸಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಇಂದು (ಅಕ್ಟೋಬರ್‌ 21, 2023).

ವಿದ್ಯಾರ್ಹತೆ

ನೋಟಿಫಿಕೇಷನ್‌ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್‌ ಸೈನ್ಸ್‌, ಇನ್ಫಾರ್ಮೇಶನ್‌ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್‌ ಅಥವಾ ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು. ಅಲ್ಲದೆ ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಥವಾ ಸರ್ಕಾರಿ ನಿಯಂತ್ರಕ ಸಂಸ್ಥೆಗಳಿಂದ ಅನುಮೋದಿಸಲ್ಪಟ್ಟ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಇದೇ ಕ್ಷೇತ್ರಗಳಲ್ಲಿ ಸ್ನಾತಕೋತ್ತರ ಪದವಿ (MCA ಅಥವಾ M. Tech/M.Sc.) ಹೊಂದಿದವರೂ ಅರ್ಹರು.

ಅರ್ಜಿ ಶುಲ್ಕ

ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್‌ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 750 ರೂ. ಪಾವತಿಸಬೇಕು. ಎಸ್ಸಿ, ಎಸ್ಟಿ ಮತ್ತು ಪಿಡಬ್ಲ್ಯೂಡಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಸಾಮಾನ್ಯ ಅಭ್ಯರ್ಥಿಗಳ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ.

ಆಯ್ಕೆ ವಿಧಾನ

ವಿವಿಧ ಹಂತಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮೊದಲು ಅರು ಸಲ್ಲಿಸಿದವರ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ. ಬಳಿಕ ಆಯ್ದ ಹುದ್ದೆಗಳಿಗೆ ಪರೀಕ್ಷೆ ನಡೆಯುತ್ತದೆ. ಅದರಲ್ಲಿ ಆಯ್ಕೆಯಾದವರ ಸಂದರ್ಶನ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಜನರಲ್‌ ಆಪ್ಟಿಟ್ಯೂಡ್‌(General Aptitude) ಮತ್ತು ಪ್ರೊಫೆಷನಲ್‌ ನಾಲೆಡ್ಜ್‌ (Professional Knowledge) ಎನ್ನುವ ಎರಡು ಹಂತಗಳಿರುತ್ತವೆ.

ವಯೋಮಿತಿ

ಅಸಿಸ್ಟೆಂಟ್‌ ಮ್ಯಾನೇಜರ್- 32 ವರ್ಷ
ಅಸಿಸ್ಟೆಂಟ್‌ ಜನರಲ್ ಮ್ಯಾನೇಜರ್- 45 ವರ್ಷ
ಮ್ಯಾನೇಜರ್- 38 ವರ್ಷ
ಡೆಪ್ಯುಟಿ ಮ್ಯಾನೇಜರ್- 35 ವರ್ಷ
ಚೀಫ್‌ ಮ್ಯಾನೇಜರ್- 42 ವರ್ಷ
ಪ್ರೊಜೆಕ್ಟ್ ಮ್ಯಾನೇಜರ್- 35 ವರ್ಷ
ಸೀನಿಯರ್‌ ಪ್ರೊಜೆಕ್ಟ್ ಮ್ಯಾನೇಜರ್ 38 ವರ್ಷ

ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಸುವ ವಿಧಾನ

ಇದನ್ನೂ ಓದಿ: JOB NEWS: 184 ಎಂಜಿನಿಯರ್‌ ಟ್ರೈನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

Exit mobile version