Site icon Vistara News

Teacher Recruitment 2022 | 15 ಸಾವಿರ ಶಿಕ್ಷಕರ ನೇಮಕ; ದಾಖಲೆ ಪರಿಶೀಲನೆಗೆ ವೇಳಾಪಟ್ಟಿ ಪ್ರಕಟ

teacher recruitment selection list

ಶಿಕ್ಷಕರ ನೇಮಕ

ಬೆಂಗಳೂರು: 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ( 6 ರಿಂದ 8 ನೇ ತರಗತಿ) ನೇಮಕಕ್ಕೆ (Teacher Recruitment 2022) ಸಂಬಂಧಿಸಿದಂತೆ 1:2 ಅನುಪಾತದಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ಮೂಲ ದಾಖಲೆಗಳ ಪರಿಶೀಲನೆಗೆ ಈಗ ವೇಳಾ ಪಟ್ಟಿ ಪ್ರಕಟಿಸಿದೆ.

ಬೆಂಗಳೂರು ವಿಭಾಗದಲ್ಲಿ ಅಕ್ಟೋಬರ್‌ 6 ರಿಂದ 14ರವರೆಗೆ, ಮೈಸೂರು ವಿಭಾಗದಲ್ಲಿ ಅಕ್ಟೋಬರ್‌ 6 ರಿಂದ 15ರವರೆಗೆ, ಬೆಳಗಾವಿ ವಿಭಾಗದಲ್ಲಿ ಅಕ್ಟೋಬರ್‌ 6 ರಿಂದ 15ರವರೆಗೆ ಹಾಗೂ ಕಲಬುರಗಿ ವಿಭಾಗದಲ್ಲಿ ಅಕ್ಟೋಬರ್‌ 6 ರಿಂದ 19ರವರೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಮೂಲ ದಾಖಲೆಯನ್ನು ಪರಿಶೀಲಿಸಲಾಗುತ್ತದೆ.

1:2 ತಾತ್ಕಾಲಿಕ ಪರಿಶೀಲನಾ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಭ್ಯರ್ಥಿಗಳು ಸಂಬಂಧಪಟ್ಟ ಜಿಲ್ಲೆಯ ಉಪನಿರ್ದೇಶಕರ (ಆಡಳಿತ) ಹಾಗೂ ನೇಮಕಾತಿ ಪ್ರಾಧಿಕಾರದ ಕಚೇರಿಯಲ್ಲಿ ತಮ್ಮ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕದಂದು ಎಲ್ಲ ದಾಖಲೆಗಳೊಂದಿಗೆ ದಾಖಲೆ ಪರಿಶೀಲನೆಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ.

ಮಾಹಿತಿಗೆ ಸಹಾಯವಾಣಿ ಸಂಖ್ಯೆ: 080-22483140,080- 2222 8805, 080-22483145

ಯಾವ್ಯಾವ ದಾಖಲೆಗಳು ಬೇಕು?
ದಾಖಲೆ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳು ಈ ಕೆಳಗಿನ ಮೂಲ ದಾಖಲೆಗಳನ್ನು ಪರಿಶೀಲನೆಗೆ ಹಾಜರು ಪಡಿಸಬೇಕಿರುತ್ತದೆ.

ದಾಖಲೆಗಳ ವಿವರ ಇಂತಿದೆ;

೧. ಆನ್‌ಲೈನ್‌ ಅರ್ಜಿಯ ಮುದ್ರಿತ ಪ್ರತಿ
೨. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
೩. ಪಿಯುಸಿ ಅಂಕಪಟ್ಟಿ
೪. ಪದವಿಯ ಮೂರು ವರ್ಷದ (ಆರು ಸೆಮಿಸ್ಟರ್‌ಗಳ) ಅಂಕಪಟ್ಟಿಗಳು
೫. ಪದವಿ ತೇರ್ಗಡೆ ಹೊಂದಿದ ಪ್ರಮಾಣ ಪತ್ರ (ಡಿಗ್ರಿ ಕಾನ್ವಕೇಷನ್‌ ಸರ್ಟಿಫಿಕೇಟ್‌)
೬. ಬಿ.ಎ.ಇಡಿ. ಹಾಗೂ ಬಿ.ಎಸ್ಸಿ. ಇಡಿ ಪದವಿಯ ನಾಲ್ಕು ವರ್ಷದ ಅಂಕಪಟ್ಟಿಗಳು.
೭. ಬಿ.ಎ.ಇಡಿ ಹಾಗೂ ಬಿ.ಎಸ್ಸಿ.ಇಡಿ ಪದವಿ ತೇರ್ಗಡೆ ಹೊಂದಿದ ಪ್ರಮಾಣ ಪತ್ರ.
೮. ಬಿ.ಇಡಿ. ಪದವಿಯ ಅಂಕಪಟ್ಟಿ.
೯. ಬಿ.ಇಡಿ ಪದವಿ ತೇರ್ಗಡೆ ಹೊಂದಿದ ಪ್ರಮಾಣ ಪತ್ರ.
೧೦. ಡಿ.ಇಡಿ./ಡಿ.ಎಲ್‌.ಇಡಿ ಕೋರ್ಸಿನ ಎರಡು ವರ್ಷಗಳ ಅಂಕಪಟ್ಟಿ
೧೧. ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅರ್ಹತಾ ಪ್ರಮಾಣ ಪತ್ರ.
1೨. ಅಭ್ಯರ್ಥಿಯ ಆಧಾರ್‌ ಕಾರ್ಡ್‌
1೩. ಮೀಸಲಾತಿ ಕೋರಿರುವ ಪ್ರವರ್ಗದ ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ಮತ್ತು ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರ (ಆರ್‌ಡಿ ನಂಬರ್‌ ಹೊಂದಿರಬೇಕು) (ಎಸ್‌ಸಿ/ಎಸ್‌ಟಿ, ಸಿಎಟಿ-1 2ಎ, 2ಬಿ ಮತ್ತು 3ಎ 3ಬಿ)
1೪. ಹೈ.ಕ. ಮೀಸಲಾತಿಗೆ, ಸಕ್ಷಮ ಪ್ರಾಧಿಕಾರದಿಂದ ಪಡೆದ 317ಜೆ ಪ್ರಮಾಣ ಪತ್ರ (ಆರ್‌ಡಿ ನಂಬರ್‌ ಹೊಂದಿರಬೇಕು)
1೫. ಸಾಮಾನ್ಯ ವರ್ಗದ ಗ್ರಾಮೀಣ ಅಭ್ಯರ್ಥಿಗಳಗಿಎ ನಾನ್‌ ಕ್ರೀಮಿ ಲೇಯರ್‌ ಸರ್ಟಿಫಿಕೇಟ್‌ (non creamy layer certificate) (ಆರ್‌ಡಿ ನಂಬರ್‌ ಹೊಂದಿರಬೇಕು).
1೬. ಮಾಜಿ ಸೈನಿಕ ಮೀಸಲಾತಿಗೆ ಕಾಋಯನಿರ್ವಹಿಸಿರುವ/ಅವಲಂಬಿತರ ಪ್ರಮಾಣ ಪತ್ರ.
1೭. ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಸಕ್ಷಮ ಪ್ರಾಧಿಕಾರದಿಂದ ನೀಡಿದ ಪ್ರಮಾಣ ಪತ್ರ.
1೮. ಗ್ರಾಮೀಣ ಅಭ್ಯರ್ಥಿ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರಗಳು (ನಿಗದಿತ ನಮೂನೆಯಲ್ಲಿರಬೇಕು).
1೯. ಅಂಗವಿಕಲ ಅಭ್ಯರ್ಥಿಗಳು ಪ್ರಮಾಣ ಪತ್ರ.
೨೦. ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ.
2೧. ಯೋಜನಾ ನಿರಾಶ್ರಿತ ಅಭ್ಯರ್ಥಿಗಳಿಗೆ ಸಕ್ಷಮ ಪ್ರಾಧಿಕಾರದಿಂದ ನೀಡಿದ ಪ್ರಮಾಣ ಪತ್ರ.
2೨. ಪ್ರಸ್ತುತ ಸರ್ಕಾರಿ ಉದ್ಯೋಗದಲ್ಲಿರುವವರು ಸೇವಾವಿವರಗಳಿಗೆ ಸಂಬಂಧಸಿದಂತೆ ನೇಮಕಾತಿ ಪ್ರಾಧಿಕಾರದಿಂದ ಪಡೆದುಕೊಂಡಿರುವ ಅನುಮತಿ ಪತ್ರದ ಪ್ರತಿ.
2೩. ಅರ್ಜಿಯನ್ನು ಭರ್ತಿ ಮಾಡುವಾಗ ತಿಳಿಸಿದ ಅವಶ್ಯವೆಂದು ಭಾವಿಸಿದ ಇನ್ನಿತರ ದಾಖಲೆಗಳು ಪ್ರತಿಗಳು

ಗಮನಿಸಿ: ಈ ಎಲ್ಲ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಎಂದರೆ 23-04-2022ದ ಒಳಗೆ ಪಡೆದಿರಬೇಕು.

ದಾಖಲೆ ಪರಿಶೀಲನೆಗೆ ಇಲಾಖೆ ನೀಡಿರುವ ಸೂಚನೆ ಇಂತಿದೆ

ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ: https://www.schooleducation.kar.nic.in/index.html

ಇದನ್ನೂ ಓದಿ | 2,500 ಪ್ರೌಢಶಾಲಾ ಶಿಕ್ಷಕರ ನೇಮಕ | ಸದ್ಯವೇ ಅಧಿಸೂಚನೆ; ಡಿಸೆಂಬರ್‌ನಲ್ಲಿ ಪರೀಕ್ಷೆ

Exit mobile version