Site icon Vistara News

KARTET Result 2023: ಟಿಇಟಿ ಫಲಿತಾಂಶ; ಶಿಕ್ಷಕರಾಗಲು 64,830 ಅಭ್ಯರ್ಥಿಗಳು ಅರ್ಹ

The teacher is teaching in the school

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2023ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶವನ್ನು ಪ್ರಕಟಿಸಿದ್ದು, ಟಿಇಟಿ ಪತ್ರಿಕೆ 1 ಮತ್ತು 2 (KARTET Result 2023) ಪರೀಕ್ಷೆಗೆ ಹಾಜರಾದ ಒಟ್ಟು 3.01 ಲಕ್ಷ ಅಭ್ಯರ್ಥಿಗಳ ಪೈಕಿ 64,830 ಅಭ್ಯರ್ಥಿಗಳು ಶಿಕ್ಷಕರಾಗಲು ಅರ್ಹತೆ ಪಡೆದಿದ್ದಾರೆ.

ಸೆಪ್ಟೆಂಬರ್‌ 3ರಂದು ಟಿಇಟಿ ನಡೆದಿತ್ತು. 1 ರಿಂದ 5ನೇ ತರಗತಿ ಬೋಧನಾ ಅರ್ಹತೆಗೆ ನಡೆದಿದ್ದ ಪತ್ರಿಕೆ-1ರಲ್ಲಿ 1,27,131 ಅಭ್ಯರ್ಥಿಗಳ ಪೈಕಿ 14,922 (ಶೇ. 11.74) ಹಾಗೂ 5ರಿಂದ 8ನೇ ತರಗತಿವರೆಗಿನ ಬೋಧನಾ ಅರ್ಹತೆಗೆ ನಡೆದಿದ್ದ ಪತ್ರಿಕೆ-2 ಪರೀಕ್ಷೆಯಲ್ಲಿ 1,74,831 ಮಂದಿ ಪೈಕಿ 49,908 ಮಂದಿ (ಶೇ.28.54) ಶಿಕ್ಷಕರಾಗಲು ಅರ್ಹತೆ ಪಡೆದಿದ್ದಾರೆ.

ಟಿಇಟಿ-2023 ಫಲಿತಾಂಶವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಹಿಳೆಯರ ಮೈಲುಗೈ

ಟಿಇಟಿ ಪತ್ರಿಕೆ-1 ರಲ್ಲಿ 4,139 ಪುರುಷರು, 10,783 ಮಹಿಳೆಯರು ಅರ್ಹತೆ ಪಡೆದಿದ್ದು, ಪತ್ರಿಕೆ-2 ರಲ್ಲಿ 16,268 ಪುರುಷರು, 33,634 ಮಹಿಳೆಯರು, 6 ಲಿಂಗತ್ವ ಅಲ್ಪಸಂಖ್ಯಾತರು ಅರ್ಹತೆ ಪಡೆದಿದ್ದಾರೆ.

ಪತ್ರಿಕೆ-2ರಲ್ಲಿ ಉತ್ತೀರ್ಣರಾದವರ ಪೈಕಿ ಸಮಾಜ ವಿಜ್ಞಾನ ವಿಷಯ ಬೋಧನೆಗೆ 35,349 ಮಂದಿ ಮತ್ತು ಗಣಿತ ಮತ್ತು ವಿಜ್ಞಾನ ವಿಷಯ ಬೋಧನೆಗೆ 14,559 ಮಂದಿ ಅರ್ಹರಾಗಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2023ರ (ಟಿಇಟಿ) (KARTET Result 2023) ಫಲಿತಾಂಶವನ್ನು ಪ್ರಕಟಿಸಿದೆ. ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳು ಫಲಿತಾಂಶ ವೀಕ್ಷಿಸಬಹುದು.

ಅಭ್ಯರ್ಥಿಗಳು ಅರ್ಜಿಸಂಖ್ಯೆ ಮತ್ತು ಅಭ್ಯರ್ಥಿಯ ಜನ್ಮದಿನಾಂಕ (ಆನ್‌ಲೈನ್‌ ಅರ್ಜಿಯಲ್ಲಿರುವಂತೆ) ನಮೂದಿಸಿ ಫಲಿತಾಂಶ ವೀಕ್ಷಿಸುವುದಷ್ಟೇ ಅಲ್ಲದೇ ಶಿಕ್ಷಣ ಇಲಾಖೆಯ ವೆವ್‌ಸೈಟ್‌ನಲ್ಲಿ (www.schooleducation.kar.nic.in) ಗಣಕೀಕೃತ ಪ್ರಮಾಣಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ಪ್ರಮಾಣ ಪತ್ರವು ಜೀವಿತಾವಧಿಯವರೆಗೆ ಮಾನ್ಯತೆ ಹೊಂದಿರುತ್ತದೆ.

ಇದನ್ನೂ ಓದಿ | SSC recruitment 2023 : ಅರೆಸೇನಾ ಪಡೆಗಳಲ್ಲಿ 75,768 ಕಾನ್ಸ್‌ಟೇಬಲ್‌ ಹುದ್ದೆ; ಕನ್ನಡದಲ್ಲಿ ನಡೆಯೋಲ್ಲ ಪರೀಕ್ಷೆ

ಅರ್ಹತಾ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳಿಗೆ ಮುದ್ರಿತ ಅಂಕಪಟ್ಟಿ ಬದಲಿಗೆ QR Code ದತ್ತಾಂಶವನ್ನು ಹೊಂದಿರುವ ಗಣಕೀಕೃತ ಅಂಕಪಟ್ಟಿ ವಿತರಿಸಲಾಗುತ್ತದೆ. ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ನೀಡಲಾದ ಲಿಂಕ್‌ ಮೂಲಕ ಸುರಕ್ಷತಾ ಕೋಡ್‌ (QR Code) ಹೊಂದಿರುವ ಗಣಕೀಕೃತ ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದಾಗಿದೆ. ಈ ಪ್ರಮಾಣ ಪತ್ರವು ಸೀಮಿತ ದಿನಗಳವರೆಗೆ ಮಾತ್ರ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದ್ದು, ಅಭ್ಯರ್ಥಿಗಳು ಸಾಕಷ್ಟು. ಸಂಖ್ಯೆಯ ಪ್ರತಿಗಳನ್ನು ಡೌನ್‌ಲೋಡ್‌ ಮಾಡಿಕೊಂಡು ತಮ್ಮಲ್ಲಿ ಇಟ್ಟುಕೊಳ್ಳಬಹುದು.

Exit mobile version