ಬೆಂಗಳೂರು: ತಮಿಳುನಾಡು ಮರ್ಕಂಟೈಲ್ ಬ್ಯಾಂಕ್ (Tamilnad Mercantile Bank-TMB) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (TMB Recruitment 2023). ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಸುಮಾರು 92 ಹುದ್ದೆಗಳು ಖಾಲಿ ಇವೆ. ಸ್ಪೆಷಲಿಸ್ಟ್ ಆಫೀಸರ್, ಪ್ರೊಬೆಷನರಿ ಕ್ಲರ್ಕ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ನವೆಂಬರ್ 6ರೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಹುದ್ದೆ ಮತ್ತು ವಿದ್ಯಾರ್ಹತೆಗಳ ವಿವರ
- ಸಿಸ್ಟಮ್ ಅಡ್ಮಿನಿಷ್ಟ್ರೇಟರ್-4 ಹುದ್ದೆ-ವಿದ್ಯಾರ್ಹತೆ ಬಿಸಿಎ, ಬಿ.ಇ. ಅಥವಾ ಬಿ.ಟೆಕ್, ಎಂ.ಇ. ಅಥವಾ ಎಂ.ಟೆಕ್ (ಸಿಎಸ್/ಐಟಿ), ಎಂಸಿಎ
- ನೆಟ್ವರ್ಕ್ ಅಡ್ಮಿನಿಷ್ಟ್ರೇಟರ್-4 ಹುದ್ದೆ-ವಿದ್ಯಾರ್ಹತೆ ಬಿಸಿಎ, ಬಿ.ಇ. ಅಥವಾ ಬಿ.ಟೆಕ್, ಎಂ.ಇ. ಅಥವಾ ಎಂ.ಟೆಕ್ (ಸಿಎಸ್/ಐಟಿ/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್), ಎಂಸಿಎ
- ಡಾಟಾ ಬೇಸ್ ಅಡ್ಮಿನಿಷ್ಟ್ರೇಟರ್-4 ಹುದ್ದೆ-ವಿದ್ಯಾರ್ಹತೆ ಬಿಸಿಎ, ಬಿ.ಇ. ಅಥವಾ ಬಿ.ಟೆಕ್, ಎಂ.ಇ. ಅಥವಾ ಎಂ.ಟೆಕ್ (ಸಿಎಸ್/ಐಟಿ), ಎಂಸಿಎ
- ಅಪ್ಲಿಕೇಷನ್ ಡೆವಲಪರ್-8 ಹುದ್ದೆ-ವಿದ್ಯಾರ್ಹತೆ ಬಿಸಿಎ, ಬಿ.ಇ. ಅಥವಾ ಬಿ.ಟೆಕ್, ಎಂ.ಇ. ಅಥವಾ ಎಂ.ಟೆಕ್ (ಸಿಎಸ್/ಐಟಿ), ಎಂಸಿಎ
- ಪ್ರೊಬೆಷನರಿ ಕ್ಲರ್ಕ್-72 ಹುದ್ದೆ-ವಿದ್ಯಾರ್ಹತೆ ಪದವಿ, ಸ್ನಾತಕೋತ್ತರ ಪದವಿ.
ವಯೋಮಿತಿ ಮತ್ತು ಅರ್ಜಿ ಶುಲ್ಕ
ಅಭ್ಯರ್ಥಿಗಳು 30 ವರ್ಷ ಮೀರಿರಬಾರದು. ಮೀಸಲಾತಿಗೆ ಅನುಗುಣವಾಗಿ ರಿಯಾಯಿತಿ ಲಭ್ಯ.ಬಿಸಿ/ ಎಂಬಿಸಿ ಅಭ್ಯರ್ಥಿಗಳಿಗೆ 2 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ. ಸ್ಪೆಷಲಿಸ್ಟ್ ಹುದ್ದೆಗಳಿಗೆ 1,000 ರೂ. ಮತ್ತು ಪ್ರೊಬೇಷನರಿ ಕ್ಲರ್ಕ್ ಹುದ್ದೆಗಳಿಗೆ 600 ರೂ. ಅರ್ಜಿ ಶುಲ್ಕ. ಆನ್‌ಲೈನ್ ಮೂಲಕ ಶುಲ್ಕ ಪಾವತಿಸಬೇಕು.
ಆಯ್ಕೆ ವಿಧಾನ
ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ನವೆಂಬರ್‌ನಲ್ಲಿ ಪರೀಕ್ಷೆ ಆಯೋಜಿಸಲಾಗುವುದು ಮತ್ತು ಡಿಸೆಂಬರ್‌ನಲ್ಲಿ ರಿಸಲ್ಟ್ ಪ್ರಕಟಿಸಲಾಗುವುದು. ಡಿಸೆಂಬರ್ ಅತವಾ ಜನವರಿಯಲ್ಲಿ ಸಂದರ್ಶನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅರ್ಜಿ ಸಲ್ಲಿಕೆ ವಿಧಾನ
- ಅರ್ಜಿ ಸಲ್ಲಿಸುವ ಮುನ್ನ ಕೇಳಿರುವ ಎಲ್ಲ ಅರ್ಹತೆ ಇರುವುದನ್ನು ಖಚಿತಪಡಿಸಿಕೊಳ್ಳಿ
- ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಸಂವಹನಕ್ಕೆ ಅಗತ್ಯವಾದ, ಸರಿಯಾದ ಫೋನ್ ನಂಬರ್, ಇಮೇಲ್ ಐಡಿ ನಮೂದಿಸಿ. ಐಡಿ ಪ್ರೂಫ್, ವಯಸ್ಸಿನ ದಾಖಲಾತಿ, ಶೈಕ್ಷಣಿಕ ಅರ್ಹತೆಯ ದಾಖಲಾತಿ, ರೆಸ್ಯೂಮ್ ಇತ್ಯಾದಿ ರೆಡಿ ಮಾಡಿಟ್ಟುಕೊಳ್ಳಿ.
- ತಮಿಳುನಾಡು ಮರ್ಕಂಟೈಲ್ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್, ಪ್ರೊಬೆಷನರಿ ಕ್ಲರ್ಕ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ಅಗತ್ಯವಾದ ಎಲ್ಲ ಮಾಹಿತಿಗಳನ್ನು ತುಂಬಿ. ಡಾಕ್ಯುಮೆಂಟ್ನ ಸ್ಕ್ಯಾನ್ ಪ್ರತಿ, ನಿಮ್ಮ ಫೋಟೊ (ಅಗತ್ಯವಿದ್ದರೆ ಮಾತ್ರ) ಅಪ್ಲೋಡ್ ಮಾಡಿ
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ
- ಎಲ್ಲ ಮಾಹಿತಿ ಸರಿಯಾಗಿದೆ ಎನ್ನುವುದನ್ನು ಖಚಿತಪಡಿಸಿದ ಬಳಿಕ TMB Recruitment 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು Submit ಬಟನ್ ಕ್ಲಿಕ್ ಮಾಡಿ. ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ನಂಬರ್ ಅಥವಾ ರಿಕ್ವೆಸ್ಟ್ ನಂಬರ್ ತೆಗೆದಿಡಿ.
ಹೆಚ್ಚಿನ ವಿವರಗಳಿಗೆ https://tmb.in/ ವೆಬ್‌ಸೈಟ್ ನೋಡಿ.
ಇದನ್ನೂ ಓದಿ: Teacher Jobs: ಪ್ರಾಥಮಿಕ ಶಾಲಾ ಶಿಕ್ಷಕ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ದಿನಾಂಕ ಪ್ರಕಟ