Site icon Vistara News

UGC NET 2023 : ಯುಜಿಸಿ-ನೆಟ್‌ ಎಕ್ಸಾಮ್‌ನ ಫಲಿತಾಂಶ ಪ್ರಕಟ

UGC NET 2023 december session scorecard released check out the details here

#image_title

ನವ ದೆಹಲಿ: ದೇಶದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗಳಿಗಾಗಿ ಮತ್ತು ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌ ನೇಮಕಕ್ಕಾಗಿ ಕಳೆದ ಫೆಬ್ರವರಿಯಲ್ಲಿ ನಡೆಸಲಾಗಿದ್ದ ಅಖಿಲ ಭಾರತ ಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆಯ (UGC NET 2023) ಫಲಿತಾಂಶ ಪ್ರಕಟಿಸಲಾಗಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಪರವಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಈ ಪರೀಕ್ಷೆ ನಡೆಸಿತ್ತು. ಪರೀಕ್ಷೆ ಬರೆದ ಅಭ್ಯರ್ಥಿಗಳು ಎನ್‌ಟಿಎ ವೆಬ್‌ಸೈಟ್‌ನಲ್ಲಿ ಅಪ್ಲಿಕೇಷನ್‌ ನಂಬರ್‌ ಮತ್ತು ಜನ್ಮದಿನಾಂಕದೊಂದಿಗೆ ಲಾಗಿನ್‌ ಆಗಿ ತಾವು ಪಡೆದ ಅಂಕದ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಫಲಿತಾಂಶದ ಜತೆಯಲ್ಲಿಯೇ ಕಟ್‌ ಆಫ್‌ ಅಂಕಗಳ ಮಾಹಿತಿಯನ್ನೂ ಒದಗಿಸಲಾಗಿದೆ.

ಫಲಿತಾಂಶಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಭ್ಯರ್ಥಿಗಳು 90 ದಿನಗಳ ಒಳಗೆ ಡೌನ್‌ಲೋಡ್‌ ಮಾಡಿಕೊಳ್ಳಬೇಕಿರುತ್ತದೆ. ನಂತರ ಈ ದಾಖಲೆಗಳು ಆನ್‌ಲೈನ್‌ನಲ್ಲಿ ಲಭ್ಯವಿರುವುದಿಲ್ಲ. ಫಲಿತಾಂಶವನ್ನು ನೋಡುವ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾದರೆ ಸಹಾಯವಾಣಿ ಸಂಖ್ಯೆ 011-4075 9000 ಸಂಪರ್ಕಿಸಬೇಕೆಂದು ಸೂಚಿಸಲಾಗಿದೆ.

ಫಲಿತಾಂಶ ನೋಡಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಕಳೆದ ಡಿಸೆಂಬರ್‌ನಲ್ಲಿಯೇ ನಡೆಯಬೇಕಾಗಿದ್ದ ಈ ಪರೀಕ್ಷೆಗೆ ಕಳೆದ ಜನವರಿಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಫೆಬ್ರವರಿ21 ರಿಂದ ಮಾರ್ಚ್‌ 10ರ ವರೆಗೆ ಐದು ಹಂತಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಇದು ಕಂಪ್ಯೂಟರ್‌ ಆಧಾರಿತ ಪರೀಕ್ಷೆ (CBT) ಯಾಗಿದ್ದು, ಒಟ್ಟು 83 ವಿಷಯಗಳಿಗೆ ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಕಳೆದ ವಾರ ಎನ್‌ಟಿಎ ಈ ಪರೀಕ್ಷೆಯ ಅಂತಿಮ ಕೀ ಉತ್ತರವನ್ನು ಪ್ರಕಟಿಸಿತ್ತು. ಒಟ್ಟಾರೆ 8,34,537 ಅಭ್ಯರ್ಥಿಗಳು ಬರೆದಿದ್ದಾರೆ ಎಂದು ಎನ್‌ಟಿಎ ತಿಳಿಸಿದೆ.

ರಾಜ್ಯದ ಬೆಳಗಾವಿ, ಬಳ್ಳಾರಿ, ಬಾಗಲಕೋಟ, ಬೆಂಗಳೂರು, ಬೀದರ್‌, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕಲಬುರಗಿ, ಹಾಸನ, ಹುಬ್ಬಳ್ಳಿ/ಧಾರವಾಡ, ಹಾವೇರಿ, ಕಾರವಾರ, ಕೊಡಗು, ಕೋಲಾರ, ಮಂಗಳೂರು, ಮೈಸೂರು, ರಾಯಚೂರು, ರಾಮನಗರ, ಯಾದಗಿರಿ, ಮಣಿಪಾಲ್‌/ ಉಡುಪಿ, ಮಂಡ್ಯ, ಶಿವಮೊಗ್ಗ ಮತ್ತು ತುಮಕೂರಿನಲ್ಲಿ ತೆರೆಯಲಾಗಿದ್ದ ಪರೀಕ್ಷಾ ಕೇಂದ್ರದಲ್ಲಿ ರಾಜ್ಯದ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ವರ್ಷದಲ್ಲಿ 2 ಬಾರಿ ಈ ಪರೀಕ್ಷೆ ನಡೆಯುತ್ತದೆ. 2023 ರಲ್ಲಿ ಮಾತ್ರ ಎರಡು ಬಾರಿ ಪರೀಕ್ಷೆ ನಡೆಯುವುದು ಕಷ್ಟ. ಸದ್ಯವೇ ಮತ್ತೊಂದು ಪರೀಕ್ಷೆಯ ಅಧಿಸೂಚನೆ ಪ್ರಕಟವಾಗುವ ನಿರೀಕ್ಷೆ ಇದೆ.

ಹೆಚ್ಚಿನ ಮಾಹಿತಿಗೆ : https://ugcnet.nta.nic.in/

ಇದನ್ನೂ ಓದಿ : KEA Recruitment 2023 : ಆಹಾರ ನಿಗಮದಲ್ಲಿ ನೇಮಕ; ವಿದ್ಯಾರ್ಹತೆ, ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ!

Exit mobile version