Site icon Vistara News

UGC NET 2023 : ನೆಟ್‌ ಪರೀಕ್ಷೆಯ ಕೀ ಉತ್ತರ ಪ್ರಕಟ; ಆಕ್ಷೇಪಣೆ ಸಲ್ಲಿಸಲು ಅವಕಾಶ

UGC NET Answer Key 2023

ನವ ದೆಹಲಿ: ದೇಶದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗಳಿಗಾಗಿ ಮತ್ತು ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌ ನೇಮಕಕ್ಕಾಗಿ ನಡೆಸಲಾದ ಅಖಿಲ ಭಾರತ ಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆಯ (UGC NET 2023) ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ.

ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ರಿಜಿಸ್ಟೇಷನ್‌ ನಂಬರ್‌ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್‌ ಆಗಿ ಕೀ ಉತ್ತರವನ್ನು ಪರಿಶೀಲಿಸಬಹುದಾಗಿದೆ. ಈ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಕೂಡ ಅವಕಾಶ ನೀಡಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಜುಲೈ 8ರ ರಾತ್ರಿ 8 ಗಂಟೆಯ ಒಳಗೆ ತಮ್ಮ ಆಕ್ಷೇಪಣೆಯನ್ನು ಆನ್‌ಲೈನ್‌ನಲ್ಲಿಯೇ ಸಲ್ಲಿಸಬಹುದಾಗಿದೆ. ಪ್ರತಿಯೊಂದು ಆಕ್ಷೇಪಣೆ ಸಲ್ಲಿಸಲು 200 ರೂ. ಶುಲ್ಕವನ್ನು ಪಾವತಿಸಬೇಕಾಗಿದ್ದು, ಆನ್‌ಲೈನಲ್ಲಿಯೇ ಶುಲ್ಕ ಪಾವತಿಸಲೂ ಅವಕಾಶ ನೀಡಲಾಗಿದೆ.

ಕೀ ಉತ್ತರವನ್ನು ನೋಡಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಆಕ್ಷೇಪಣೆ ಸಲ್ಲಿಸಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಕಳೆದ ಜೂನ್‌ನಲ್ಲಿ ಎರಡು ಹಂತಗಳಲ್ಲಿ, ದೇಶದ 181 ನಗರಗಳಲ್ಲಿ, 18 ಶಿಫ್ಟ್‌ಗಳಲ್ಲಿ ಒಟ್ಟು ಒಂಬತ್ತು ದಿನ ಈ ಪರೀಕ್ಷೆ ನಡೆಸಲಾಗಿತ್ತು. 6,39,069 ಅಭ್ಯರ್ಥಿಗಳು ಈ ಪರೀಕ್ಷೆ ಬರೆದಿದ್ದರು. ರಾಜ್ಯದ ಬೆಳಗಾವಿ, ಬಳ್ಳಾರಿ, ಬಾಗಲಕೋಟ, ಬೆಂಗಳೂರು, ಬೀದರ್‌, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕಲಬುರಗಿ, ಹಾಸನ, ಹುಬ್ಬಳ್ಳಿ/ಧಾರವಾಡ, ಹಾವೇರಿ, ಕಾರವಾರ, ಕೊಡಗು, ಕೋಲಾರ, ಮಂಗಳೂರು, ಮೈಸೂರು, ರಾಯಚೂರು, ರಾಮನಗರ, ಯಾದಗಿರಿ, ಮಣಿಪಾಲ್‌/ ಉಡುಪಿ, ಮಂಡ್ಯ, ಶಿವಮೊಗ್ಗ ಮತ್ತು ತುಮಕೂರಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು.

ಇದನ್ನೂ ಓದಿ : Education Guide : ನಂ.1 ಜಾಬ್‌ ಗ್ಯಾರಂಟಿ ಕೋರ್ಸ್‌; ಆರ್ಟಿಫಿಷಿಯಲ್‌ ಇಂಟಲಿಜೆನ್ಸಿ

ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಪರವಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಈ ಪರೀಕ್ಷೆ ನಡೆಸುತ್ತದೆ. ಇದು ಕಂಪ್ಯೂಟರ್‌ ಆಧಾರಿತ ಪರೀಕ್ಷೆ (CBT) ಯಾಗಿದೆ. ವರ್ಷದಲ್ಲಿ 2 ಬಾರಿ ಈ ಪರೀಕ್ಷೆ ನಡೆಯುತ್ತದೆ. ಕಳೆದ ಫೆಬ್ರವರಿಯಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆಯಬೇಕಾಗಿದ್ದ ಪರೀಕ್ಷೆ ನಡೆಸಲಾಗಿತ್ತು. ಈಗ ಜೂನ್‌ನಲ್ಲಿ ಪರೀಕ್ಷೆ ನಡೆಸಲಾಗಿದೆ. ಮುಂದೆ ಮತ್ತೆ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆಗಳಿವೆ.

ಸಹಾಯವಾಣಿ ಸಂಖ್ಯೆ: 011 -40759000 / 011 – 69227700

Exit mobile version