ಬೆಂಗಳೂರು: ದೇಶದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗಾಗಿ ಮತ್ತು ಜೂನಿಯರ್ ರಿಸರ್ಚ್ ಫೆಲೋಶಿಪ್ ನೇಮಕಕ್ಕಾಗಿ ನಡೆಸಲಾಗುವ ಅಖಿಲ ಭಾರತ ಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆಯನ್ನು (UGC NET Exam 2022) ಮುಂದೂಡಲಾಗಿದೆ.
2021ರ ಡಿಸೆಂಬರ್‌ನಲ್ಲಿ ಮತ್ತು 2022ರ ಜೂನ್‌ನಲ್ಲಿ ನಡೆಸಬೇಕಾಗಿದ್ದ ಪರೀಕ್ಷೆಯನ್ನು ಒಟ್ಟು ಗೂಡಿಸಿ ನಡೆಸಲು ತೀರ್ಮಾನಿಸಲಾಗಿರುವುದರಿಂದ ಸೆಪ್ಟೆಂಬರ್ ೨೦ ರಿಂದ ೩೦ರ ಒಳಗೆ ಈ ಪರೀಕ್ಷೆ ನಡೆಸಲಾಗುವುದು ಎಂದು ಯುಜಿಸಿಯ ಅಧ್ಯಕ್ಷ ಜಗದೀಶ್ ಕುಮಾರ್ ಪ್ರಕಟಿಸಿದ್ದಾರೆ. ಈ ಮೊದಲು ಆಗಸ್ಟ್ ೧೨, ೧೨ ಮತ್ತು ೧೪ ರಂದು ಈ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು.
ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದ ಪರವಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಈ ಪರೀಕ್ಷೆಯನ್ನು ನಡೆಸುತ್ತದೆ. ವರ್ಷದಲ್ಲಿ 2 ಬಾರಿ ಈ ಪರೀಕ್ಷೆ ನಡೆಸಿಕೊಂಡು ಬರಲಾಗಿದ್ದು, ಕೊರೊನಾ ಕಾರಣದಿಂದ 2021ರ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಸಲಾಗಿರಲಿಲ್ಲ. ಹೀಗಾಗಿ 2021ರ ಮತ್ತು 2022ರ ಜೂನ್‌ನಲ್ಲಿ ನಡೆಸಬೇಕಾಗಿದ್ದ ಪರೀಕ್ಷೆಯನ್ನು ಒಟ್ಟಾಗಿ ನಡೆಸಲಾಗುತ್ತಿದೆ.
ಇದಕ್ಕೆ ಕಳೆದ ಮೇನಲ್ಲಿ ಅರ್ಜಿ ಆಹ್ವಾಣಿಸಲಾಗಿತ್ತು. ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಡೆಯಲಿರುವ ಈ ಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗಿರಲಿಲ್ಲ. ಒಟ್ಟು 82 ವಿಷಯಗಳಿಗೆ ಸಂಬಂಧಿಸಿದಂತೆ ನೆಟ್ ಪರೀಕ್ಷೆ ನಡೆಸಲಾಗುತ್ತದೆ. ಇದು ಕಂಪ್ಯೂಟರ್ ಆಧಾರಿತ ಪರಿಕ್ಷೆಯಾಗಿದ್ದು, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರವಿರಲಿದೆ.
ಹೆಚ್ಚಿನ ಮಾಹಿತಿಗೆ ವೆಬ್: https://ugcnet.nta.nic.in
ಇದನ್ನೂ ಓದಿ | Job News: ಸೇನಾಧಿಕಾರಿಯಾಗಬೇಕಾ? ಎನ್‌ಡಿಎ-ಎನ್‌ಎ ಪರೀಕ್ಷೆ ಬರೆಯಿರಿ