Site icon Vistara News

Job News: ಸೇನಾಧಿಕಾರಿಯಾಗಬೇಕಾ? ಎನ್‌ಡಿಎ-ಎನ್‌ಎ ಪರೀಕ್ಷೆ ಬರೆಯಿರಿ

UPSC NDA & NA Exam

ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಮುಂದಿನ ಸೆಪ್ಟೆಂಬರ್‌ ನಲ್ಲಿ ನಡೆಸಲಿರುವ ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆಗೆ (ಎನ್‌ಡಿಎ-ಎನ್‌ಎ) ಅಧಿಸೂಚನೆ ಹೊರಡಿಸಿದೆ.

ಸೇನೆಯಲ್ಲಿ ಅಧಿಕಾರಿಯಾಗ ಬಯಸುವ ಅರ್ಹ  ಪುರುಷ  ಮತ್ತು ಮಹಿಳಾ ಅಭ್ಯರ್ಥಿಗಳು ಜೂನ್‌ 7ರ ಒಳಗೆ  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 202೦ರವರೆಗೆ ಕೇವಲ ಅವಿವಾಹಿತ ಪುರಷ ಅಭ್ಯರ್ಥಿಗಳು ಮಾತ್ರ ಈ ಪರೀಕ್ಷೆ ಬರೆಯಬಹುದಿತ್ತು. ಈಗ  ಅವಿವಾಹಿತ ಮಹಿಳಾ ಅಭ್ಯರ್ಥಿಗಳು ಕೂಡ ರಕ್ಷಣಾ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

ಸೆಪ್ಟೆಂಬರ್‌ 4 ರಂದು ಪರೀಕ್ಷೆ

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ

ಯುಪಿಎಸ್‌ಸಿಯು ಅಭ್ಯರ್ಥಿಗಳ ಆಯ್ಕೆಗೆ ಇದೇ ಸೆಪ್ಟೆಂಬರ್‌ 4 ರಂದು ಲಿಖಿತ ಪರೀಕ್ಷೆ ನಡೆಸಲಿದೆ. ರಾಜ್ಯದ ಅಭ್ಯರ್ಥಿಗಳಿಗೆ  ಬೆಂಗಳೂರು, ಮೈಸೂರು ಮತ್ತು ಧಾರವಾಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ನ್ಯಾಷನಲ್ ಡಿಫೆನ್ಸ್  ಅಕಾಡೆಮಿಗೆ 400 ಅಭ್ಯರ್ಥಿಗಳನ್ನು ಈ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತಿದೆ. ಇವರಲ್ಲಿ  ಭೂಸೇನೆಗೆ-208, ನೌಕಾಪಡೆಗೆ-42 ಮತ್ತು ವಾಯುಪಡೆಯ ಫ್ಲೈಯಿಂಗ್‌ ವಿಭಾಗಕ್ಕೆ 92 ಮತ್ತು ಗ್ರೌಂಡ್‌ ಡ್ಯೂಟಿ ವಿಭಾಗಕ್ಕೆ 28 ಮತ್ತು ನೇವಲ್ ಅಕಾಡೆಮಿಗೆ 30 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ತರಬೇತಿಗೆ ಕಳುಹಿಸಲಾಗುತ್ತದೆ. ಈ ಅಕಾಡೆಮಿಗಳಲ್ಲಿ ಯಶಸ್ವಿಯಾಗಿ ತರಬೇತಿ ಪಡೆಯುವ ಅಭ್ಯರ್ಥಿಗಳನ್ನು ಸೇನೆಯು ಅಧಿಕಾರಿ ಹುದ್ದೆಗೆ ನೇಮಕ ಮಾಡಿಕೊಳ್ಳುತ್ತದೆ.

ಇತ್ತ ಗಮನಿಸಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:  ಜೂನ್‌ 7, 2022
ಅರ್ಜಿ ವಾಪಾಸ್‌ ಪಡೆಯಲು ಕೊನೆಯ ದಿನಾಂಕ:

ಜೂನ್‌ 14 ರಿಂದ 20, 2022
ಪರೀಕ್ಷೆ ನಡೆಯುವ ದಿನಾಂಕ:  ಸೆಪ್ಟೆಂಬರ್‌ 4, 2022
ಫಲಿತಾಂಶ ಪ್ರಕಟ: ಅಕ್ಟೋಬರ್‌, 2022
ಕೋರ್ಸ್‌ ಪ್ರಾರಂಭ : ಜುಲೈ 2, 2023

ಸಹಾಯವಾಣಿ ಸಂಖ್ಯೆ: 011-23385271 / 23381125 / 23098543
ಅರ್ಜಿ ಸಲ್ಲಿಸಲು ವೆಬ್‌ವಿಳಾಸ: https://www.upsc.gov.in/

ಭೂಸೇನೆಗೆ ಆಯ್ಕೆ ಮಾಡುವ 208 ಅಭ್ಯರ್ಥಿಗಳಲ್ಲಿ ಹತ್ತು ಮಂದಿ ಮಹಿಳೆಯರಾಗಿರಲಿದ್ದಾರೆ.  ನೌಕಾಪಡೆಗೆ ಆಯ್ಕೆ ಮಾಡುವ 42 ಅಭ್ಯರ್ಥಿಗಳಲ್ಲಿ 3 ಮಂದಿ ಮಹಿಳೆಯರಿಗೆ ಅವಕಾಶ  ದೊರೆಯಲಿದೆ. ವಾಯುಪಡೆಗೆ ಆಯ್ಕೆ ಯಾಗುವ ಒಟ್ಟು 120 ಅಭ್ಯರ್ಥಿಗಳಲ್ಲಿ 6 ಅಭ್ಯರ್ಥಿಗಳು ಮಹಿಳೆಯರಾಗಿರಲಿದ್ದಾರೆ. ನೇವಲ್‌ ಅಕಾಡೆಮಿಯಲ್ಲಿ ಮಾತ್ರ ಮಹಿಳೆಯರಿಗೆ ತರಬೇತಿ ಪಡೆಯಲು ಅವಕಾಶ ನೀಡಲಾಗಿಲ್ಲ.

ಯಾರು ಅರ್ಜಿ ಸಲ್ಲಿಸಬಹುದು?

ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರುವ ಅವಿವಾಹಿತ ಯುವಕರು  ಮತ್ತು ಯುವತಿಯರು  ಈ  ಪರೀಕ್ಷೆ  ಬರೆಯಬಹುದಾಗಿದೆ. ಈ ಶೈಕ್ಷಣಿಕ ಸಾಲಿ ನಲ್ಲಿ ದ್ವಿತೀಯ  ಪಿಯುಸಿ  ಪರೀಕ್ಷೆಗೆ  ಹಾಜರಾಗುವ  ಅಭ್ಯರ್ಥಿಗಳೂ ಅರ್ಜಿಸಲ್ಲಿಸಬಹುದು.

ನೌಕಾ ಪಡೆ ಮತ್ತು ವಾಯುಪಡೆಗೆ ಸೇರಬೇಕೆಂದು ಇಚ್ಛಿಸಿದ್ದಲ್ಲಿ ದ್ವಿತೀಯ ಪಿಯುಸಿಯಲ್ಲಿ  ಗಣಿತ ಮತ್ತು ಭೌತಶಾಸ್ತ್ರ ವಿಷಯವನ್ನು ಕಡ್ಡಾಯವಾಗಿ ಕಲಿತಿರಬೇಕು. ಅರ್ಜಿ ಸಲ್ಲಿಸುವ  ಅಭ್ಯರ್ಥಿಗಳು 2004ರ ಜನವರಿ 2  ರಿಂದ 2007ರ  ಜನವರಿ 1ರ ನಡುವೆ ಜನಿಸಿರಬೇಕು.

ಯುಪಿಎಸ್‌ಸಿ ಹೊರಡಿಸಿದ ಅಧಿಸೂಚನೆ ಇಲ್ಲಿದೆ

ಅರ್ಜಿ ಶುಲ್ಕ ಎಷ್ಟು?

ಎಸ್ಸಿ/ಎಸ್ಟಿ ಮತ್ತು ಸೇನೆಯ ಅಧಿಕಾರಿಗಳ (ಜೆಸಿಎ/ಎನ್ಸಿಎ ಒಆರ್)  ಪುತ್ರರಾಗಿದ್ದಲ್ಲಿ  ಅಂಥ ಅಭ್ಯರ್ಥಿಗಳಿಗೆ  ಶುಲ್ಕ  ವಿನಾಯ್ತಿ  ನೀಡಲಾಗಿದೆಉಳಿದ ಅಭ್ಯರ್ಥಿಗಳಿಗೆ  100 ರೂಶುಲ್ಕಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆಯಾವುದೇ ಎಸ್ಬಿಐ  ಶಾಖೆಯಲ್ಲಿ  ಶುಲ್ಕ ಪಾವತಿಸಬಹುದಾಗಿದೆ ಅಥವಾ ವೀಸಾ ಕಾರ್ಡ್/ಮಾಸ್ಟರ್ ಕಾರ್ಡ್ರು ಪೇ ಕಾರ್ಡ್/  ಡೆಬಿಟ್  ಕಾರ್ಡ್ಗಳ  ಮೂಲಕ  ಪಾವತಿಸಲು  ಅವಕಾಶ  ಕಲ್ಪಿಸಲಾಗಿದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ : https://www.upsc.gov.in/whats-new

ಅಭ್ಯರ್ಥಿಗಳ ಆಯ್ಕೆ ಹೇಗೆ?

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಅಥವಾ  ನೇವಲ್ ಅಕಾಡೆಮಿಗೆ ಆಯ್ಕೆಯಾಗಲು ಅಭ್ಯರ್ಥಿಯು ಮೂರು ಹಂತಗಳ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆಕೇಂದ್ರ ಲೋಕಸೇವಾ  ಆಯೋಗ ನಡೆಸುವ ಪ್ರವೇಶ ಪರೀಕ್ಷೆ  ಮೊದಲನೇ  ಹಂತಇದರಲ್ಲಿ ಯಶಸ್ವಿಯಾದ  ಅಭ್ಯರ್ಥಿಗಳು  ಎಸ್ಎಸ್ಬಿ ನಡೆಸುವ ಬೌದ್ಧಿಕ  ಹಾಗೂ ವ್ಯಕ್ತಿತ್ವ  ಪರೀಕ್ಷೆಗೆ ಹಾಜರಾಗಬೇಕುಅಧಿಕಾರಿಗೆ ಇರಬೇಕಾದ  ಅರ್ಹತೆಗಳನ್ನು   ವ್ಯಕ್ತಿತ್ವ ಪರೀಕ್ಷೆಯ ಸಂದರ್ಭದಲ್ಲಿ  ಒರೆಗೆ ಹಚ್ಚಿ ನೋಡಲಾಗುತ್ತದೆ

ಇದನ್ನೂ ಓದಿ | Job News: ಕೇಂದ್ರ ಸರಕಾರಿ ನೌಕರಿಗೆ SSC ಪರೀಕ್ಷೆ ಬರೆಯಿರಿ

  ಎರಡನೇ ಹಂತ ದಾಟಿದ ಅಭ್ಯರ್ಥಿಗಳು ಎಸ್ಎಸ್ಬಿ ನಡೆಸುವ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು. ಮೂರೂ ಹಂತಗಳಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಅವರವರ ಆಯ್ಕೆಯ ಕೋರ್ಸ್ಗಳಿಗೆ ಸೀಟು ಲಭ್ಯತೆಯ ಆಧಾರದ ಮೇಲೆ  ಆಯ್ಕೆ ಮಾಡಲಾಗುತ್ತದೆ.

 

Exit mobile version