Site icon Vistara News

UPSC Recruitment 2023: 50 ವಿವಿಧ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

upsc

upsc

ನವ ದೆಹಲಿ: ಯೂನಿಯನ್‌ ಪಬ್ಲಿಕ್‌ ಸರ್ವಿಸ್ ಕಮಿಷನ್‌ (Union Public Service Commission-UPSC Recruitment 2023) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಅಸಿಸ್ಟೆಂಟ್‌ ಡೈರಕ್ಟರ್‌, ಸ್ಪೆಷಲಿಸ್ಟ್‌, ಪ್ರೊಫೆಸರ್‌, ಸೀನಿಯರ್‌ ಲೆಕ್ಚರರ್‌ ಸೇರಿ ಸುಮಾರು 50 ಹುದ್ದೆಗಳಿಗೆ ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಭಾರತದ ಎಲ್ಲಿ ಬೇಕಾದರೂ ಉದ್ಯೋಗ ನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ: ನವೆಂಬರ್‌ 16.

ಹುದ್ದೆಗಳ ವಿವರ

ಸ್ಪೆಷಲಿಸ್ಟ್‌ ಗ್ರೇಡ್‌ III-7, ಅಸಿಸ್ಟೆಂಟ್‌ ಡೈರಕ್ಟರ್‌-39, ಪ್ರೊಫೆಸರ್‌-1, ಸೀನಿಯರ್‌ ಲೆಕ್ಚರರ್‌-3 ಹುದ್ದೆಗಳಿವೆ. ಈ ಹುದ್ದೆಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆ, ಚಂಡೀಗಢ ಆಡಳಿತ ಮತ್ತಿತರ ಕಡೆ ಲಭ್ಯ.

ವಿದ್ಯಾರ್ಹತೆ

ಎಂಬಿಬಿಎಸ್‌, ಸ್ನಾತಕೋತ್ತರ ಪದವಿ, ಎಂಬಿಎ, ಕೆಮಿಕಲ್‌ ಟೆಕ್ನಾಲಜಿ/ಎಂಜಿನಿಯರಿಂಗ್‌, ಗ್ಲಾಸ್‌/ ಸೆರಾಮಿಕ್‌ ಟೆಕ್ನಾಲಜಿಯಲ್ಲಿ ಪದವಿ, ಫುಡ್‌ ಟೆಕ್ನಾಲಜಿಯಲ್ಲಿ ಬಿ.ಇ ಅಥವಾ ಬಿ.ಟೆಕ್‌., ಫ್ರುಟ್ಸ್‌ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ, ಎಂ.ಡಿ., ಎಂ.ಎಸ್‌.(ರೇಡಿಯಾಲಜಿ) ಮುಂತಾದ ಶೈಕ್ಷಣಿಕ ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಎಸ್‌ಸಿ/ ಎಸ್‌ಟಿ. ಪಿಡಬ್ಲ್ಯುಬಿಡಿ/ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಜನರಲ್‌/ ಒಬಿಸಿ/ ಇಡಬ್ಲ್ಯುಎಸ್‌ ಅಭ್ಯರ್ಥಿಗಳು 25 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಆನ್‌ಲೈನ್‌ ಮೂಲಕವೇ ಶುಲ್ಕ ಪಾವತಿ ನಡೆಯುವುದು ಕಡ್ಡಾಯ. ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಅರ್ಜಿ ಸಲ್ಲಿಸುವ ವಿಧಾನ

ಯಾವುದೇ ಮಾರ್ಗದರ್ಶನ / ಸ್ಪಷ್ಟೀಕರಣ/ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್‌ ವಿಳಾಸ https://upsc.gov.in/ಗೆ ಭೇಟಿ ನೀಡಿ. ಜತೆಗೆ ದೂರವಾಣಿ ಸಂಖ್ಯೆ: 011-23385271/011-23381125/011-23098543ಕ್ಕೆ ಸಂಪರ್ಕಿಸಬಹುದು.

ಇದನ್ನೂ ಓದಿ: Job News: IREL 88 ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಅವಕಾಶ

Exit mobile version