ಬೆಂಗಳೂರು: ಬೀದರ್, ಕೊಡಗು ಹಾಗೂ ಉತ್ತರಕನ್ನಡ ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದೊಳಗೆ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಬೀದರ್ ಜಿಲ್ಲೆಯಲ್ಲಿ 57 ಹುದ್ದೆಗಳು ಖಾಲಿ ಇದ್ದು, ಇದರಲ್ಲಿ 46 ಹುದ್ದೆಗಳು ಹೈದರಾಬಾದ್ ಕರ್ನಾಟಕಕ್ಕೆ ಮತ್ತು ಉಳಿದ 11 ಹುದ್ದೆಗಳು ಹೈದರಾಬಾದ್ ಕರ್ನಾಟಕ ಹೊರತಾದ ಇತರ ಭಾಗದವರಿಗೆ ದೊರೆಯಲಿದೆ.
ಕೊಡಗು ಜಿಲ್ಲೆಯಲ್ಲಿ 35 ಹುದ್ದೆಗಳಿದ್ದರೆ, ಉತ್ತರ ಕನ್ನಡದಲ್ಲಿರುವ ಖಾಲಿ ಹುದ್ದೆಗಳ ಸಂಖ್ಯೆ 102. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿಯನ್ನು ಪಾಸ್ ಮಾಡಿರಬೇಕು. ಮೆರಿಟ್ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆದು ಅಭ್ಯರ್ಥಿಗಳನ್ನು ತೆಗೆದುಕೊಳ್ಳಲಾಗುತ್ತದೆ.
ಇದನ್ನೂ ಓದಿ : ಕರಾವಳಿಯಲ್ಲಿ ಸಾಗರ ಕವಚ ಅಣಕು ಕಾರ್ಯಾಚರಣೆ
ಅರ್ಜಿ ಶುಲ್ಕ ಎಷ್ಟು?
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪ್ರವರ್ಗ-1/ ಮಹಿಳೆ | 100 ರೂಪಾಯಿ |
ಸಾಮಾನ್ಯ/ಪ್ರವರ್ಗ-2ಎ/2ಬಿ/3ಎ/3ಬಿ | 200 ರೂಪಾಯಿ |
ಹುದ್ದೆಗಳ ವಿವರ
ವರ್ಗ | ಬೀದರ್ | ಕೊಡಗು | ಉತ್ತರ ಕನ್ನಡ |
ಎಸ್ ಸಿ | 7 | 5 | 28 |
ಎಸ್ ಟಿ | 1 | 1 | 3 |
2ಎ | 6 | 5 | 12 |
2ಬಿ | 2 | 1 | 2 |
3ಎ | 2 | 2 | 3 |
3ಬಿ | 3 | 2 | 7 |
ಸಾಮಾನ್ಯ | 23 | 18 | 43 |
ಪ್ರ ವರ್ಗ 1 | 2 | – | 4 |
ಒಟ್ಟು | 46 | 35 | 102 |
ಇದನ್ನೂ ಓದಿ : ಆರ್. ರಾಜು, ಸುಭಾಷ್ ಚಂದ್ರ ಸೇರಿ ಆರು ಕಲಾವಿದರಿಗೆ ಲಲಿತಕಲಾ ಅಕಾಡೆಮಿ ಪ್ರಶಸ್ತಿ
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ
ಆನ್ ಲೈನ್ ಅರ್ಜಿ | ಬೀದರ್ | ಕೊಡಗು | ಉತ್ತರಕನ್ನಡ |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 11-04-2022 | 19-04-2022 | 11-04-2022 |
ಅರ್ಜಿ ಸಲ್ಲಿಸಲು ಕೊನೆ ದಿನಾಂಕ | 16-05-2022 | 19-05-2022 | 10 -05-2022 |
ಅರ್ಜಿ ಶುಲ್ಕ ತುಂಬಲು ಕೊನೆ ದಿನಾಂಕ | 23-05-2022 | 23-05-2022 | 10-05-2022 |
ಹೆಚ್ಚಿನ ಮಾಹಿತಿಗಾಗಿ :