Site icon Vistara News

ಕಲಿಕಾ ಹಬ್ಬ: ಮಕ್ಕಳ ಕಲಿಕಾ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹ ನೀಡಬೇಕು: ಗ್ರಾ ಪಂ ಅಧ್ಯಕ್ಷೆ ದಾಕ್ಷಾಯಿಣಿ ನಾಯ್ಕ್

kalika habba banavasi

#image_title

ಬನವಾಸಿ: ಮಕ್ಕಳ ಕಲಿಕಾ ಆಸಕ್ತಿಯನ್ನು (ಕಲಿಕಾ ಹಬ್ಬ) ಗಮನಿಸಿ ಅವರ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹ ನೀಡಬೇಕು ಎಂದು ಭಾಶಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಿಣಿ ನಾಯ್ಕ್ ಹೇಳಿದರು.

ಅವರು ಸಮೀಪದ ಭಾಶಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ (ಜ.೩೦) ನಡೆದ ಬನವಾಸಿ ಕ್ಲಸ್ಟರ್ ಮಟ್ಟದ ‘ಕಲಿಕಾ ಹಬ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳು ಸಮಾಜಮುಖಿಯಾಗಿ ಬೆಳೆಯುವ ಅಗತ್ಯವಿದೆ. ಸಮಾಜಮುಖಿಯಾಗಿ ಬೆಳೆದಾಗ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಜತೆಗೆ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕಿದೆ’ ಎಂದರು.

ಎಸ್‍ಡಿಎಂಸಿ ಅಧ್ಯಕ್ಷ ರಾಘವೇಂದ್ರ ನಾಯ್ಕ್ ಮಾತನಾಡಿ, ‘ಕಲಿಕಾ ಹಬ್ಬದಂತಹ ಕಾರ್ಯಕ್ರಮಗಳು ಮಕ್ಕಳ ಕಲಿಕಾ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಇಂತಹ ವೇದಿಕೆಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುವ ಅಗತ್ಯವಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಮಾನವಾಗಿ ತೊಡಗಿಸಿಕೊಳ್ಳಬೇಕಿದೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್ ಹೆಗಡೆ ಮಾತನಾಡಿ, ಮಕ್ಕಳ ಕಲಿಕೆಯನ್ನು ಗಟ್ಟಿಗೊಳಿಸಲು ಇಲಾಖೆಯು ಸದಾ ಸಹಕಾರ ನೀಡಲಿದೆ ಎಂದರು.

ಇದನ್ನೂ ಓದಿ | Bharat Jodo Yatra: ಭಾರತ ಜೋಡೋ ಯಾತ್ರೆಗೆ ತೆರೆ; ಬದಲಾಯ್ತಾ ರಾಹುಲ್ ಇಮೇಜ್?

ಬನವಾಸಿ ಗ್ರಾಪಂ ಅಧ್ಯಕ್ಷೆ ತುಳಸಿ ಆರೇರ, ರೈತ ಹೋರಾಟಗಾರ ಜಯಶೀಲಾ ಗೌಡ, ಭಾಶಿ ಪ್ರೌಢಶಾಲೆ ಮುಖ್ಯ ಶಿಕ್ಷಕ ದಿನೇಶ ರೇವಣಕರ ಕಲಿಕಾ ಹಬ್ಬದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ರಾಮ ಕನ್ನನಾಯ್ಕ್, ರಾಮ ನಾಯ್ಕ್ ಹುಲತಿ ಕೊಪ್ಪ, ಬಿ. ಆರ್. ಪಿ. ದೀಪಕ್ ಗೋಕರ್ಣ, ಸಿ. ಆರ್. ಪಿ. ದಿವ್ಯ ಕಾನಳ್ಳಿ, ನಿವೃತ್ತ ಸೈನಿಕ ಶಿವಪ್ಪ ಬಡಿಗೇರ, ಗ್ರಾ ಪಂ ಸದಸ್ಯರಾದ ಗಜಾನನ ಗೌಡ, ಬಸವರಾಜ ನಾಯ್ಕ್, ವಿನಯ ಗೌಡ, ಗುತ್ಯಪ್ಪ ಅಸ್ಲರ್, ಶಿಕ್ಷಣ ಇಲಾಖೆಯ ಪಿ.ಕೆ‌.ದೊಡ್ಮನಿ, ಸತೀಶ್ ಮಡಿವಾಳ, ರವಿ ಬೆಂಚೂಳಿ, ಪ್ರಮುಖರಾದ ವೀರೇಂದ್ರ ಗೌಡ, ಕುಮಾರ್ ನಾಯ್ಕ್, ಆರತಿ ಅಳಗುಂಡಿ ಹಾಗೂ ಶಾಲಾ ಸಂಪನ್ಮೂಲ ವ್ಯಕ್ತಿಗಳು, ವಿವಿಧ ಶಾಲೆಗಳ ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು, ಗ್ರಾಮಸ್ಥರು, ಶಿರಸಿ ತೋಟಗಾರಿಕೆ ಮಹಾವಿದ್ಯಾಲಯದ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ವಿದ್ಯಾ ನಾಯ್ಕ್ ನಿರೂಪಿಸಿದರು. ಶಿಕ್ಷಕ ಗೌರೀಶ ಅಳಗುಂಡಿ ಸ್ವಾಗತಿಸಿದರು. ಸಂಗೀತ ಶಿಕ್ಷಕ ಶಿವಾನಂದ ವಂದಿಸಿದರು.

#image_title

ಇದನ್ನೂ ಓದಿ | ಸಿದ್ದರಾಮಯ್ಯ ಮಗನೂ ಬಿಜೆಪಿ ಸೇರಲಿದ್ದಾರೆ: ಕಾಂಗ್ರೆಸ್-ಜೆಡಿಎಸ್‌ ನಾಯಕರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ನಳಿನ್‍ಕುಮಾರ್ ಕಟೀಲ್ ಮಾತು

ಕಲಿಕಾ ಹಬ್ಬದ ಅಂಗವಾಗಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಶಾಲಾ ಮಕ್ಕಳ ಮೆರವಣಿಗೆ ನಡೆಯಿತು. 15 ಶಾಲೆಗಳ ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳ ಹಾಕಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ ರೋಶನ್ ಛಲವಾದಿ ಎಂಬ ವಿದ್ಯಾರ್ಥಿಯ ಬೇಡರ ವೇಷ ಎಲ್ಲರ ಮೆಚ್ಚುಗೆ ಗಳಿಸಿತು. ಕುಂಭ ಹೊತ್ತ ವಿದ್ಯಾರ್ಥಿನಿಯರೊಂದಿಗೆ ವೀರಗಾಸೆ, ರೈತ ಹಾಗೂ ಮಹಾನ್ ನಾಯಕರ ವೇಷ ಧರಿಸಿದ ವಿದ್ಯಾರ್ಥಿಗಳು ಮೆರವಣಿಗೆ ಮೆರುಗು ತಂದರು.

ಇದನ್ನೂ ಓದಿ | Nithish Kumar : ಬಿಜೆಪಿ ಜತೆ ಕೈ ಜೋಡಿಸುವುದಕ್ಕಿಂತ ಸಾಯುವುದೇ ಲೇಸು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌

Exit mobile version