Site icon Vistara News

ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಕಲ್ಲಿನಿಂದ ಹಾನಿ: ಉದ್ವಿಗ್ನ ವಾತಾವರಣ

sangolli rayanna

ಬೆಳಗಾವಿ: ಜಿಲ್ಲೆಯ ಬೆಂಡಿಗೇರಿ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ.

ಪ್ರತಿಮೆ ಬಳಿಯಲ್ಲಿ ಕಲ್ಲುಗಳು ಪತ್ತೆಯಾಗಿದೆ. ಪ್ರತಿಮೆಯ ಕಾಲಿನ ಭಾಗದ ಕೆಲವೆಡೆ ಹಾನಿ ಉಂಟಾಗಿದೆ. ಉದ್ದೇಶಪೂರ್ವಕವಾಗಿ ಹಾನಿ ಮಾಡಲು ಪ್ರಯತ್ನ ಮಾಡಿರುವಂತೆ ಕಾಣುತ್ತಿದೆ.

ಘಟನೆಯ ವಿಚಾರ ತಿಳಿಯುತ್ತಿರುವಂತೆಯೇ ಸ್ಥಳದಲ್ಲಿ ನೂರಾರು ಜನರು ಜಮಾಯಿಸಲು ಆರಂಭಿಸಿದ್ದಾರೆ. ಈಗಾಗಲೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಹಿರೇಬಾಗೇವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version