Site icon Vistara News

Murugha Seer | ಮುರುಘಾ ಶರಣರಿಂದ ಹತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಒಡನಾಡಿ ಪರಶುರಾಮ್‌ ಆರೋಪ

murugha Sree POCSO ACT Sexual Assault Chitradurga Murugha matt

ಚಿತ್ರದುರ್ಗ: ಮುರುಘಾ ಮಠದ ಮುರುಘಾ ಶರಣರಿಂದ (Murugha Seer) ಹತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಬಗ್ಗೆ ಮಾಹಿತಿ ಇದೆ ಎಂದು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಪರಶುರಾಮ್ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುರುಘಾ ಶರಣರ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಿಸಿ ವಿಚಾರಣೆ ನಡೆಸಬೇಕಿತ್ತು. ಸಂತ್ರಸ್ತ ಮಕ್ಕಳಿಗೆ ಸರ್ಕಾರದಿಂದ ಪರಿಹಾರದ ಹಣ ಬರುತ್ತದೆ. ಮಠದ ಹಾಸ್ಟೆಲ್‌ನಲ್ಲಿದ್ದ 11 ಜನ ಅನಾಥ ಮಕ್ಕಳು ಏನಾದರು? ಚಿತ್ರದುರ್ಗ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ, ಸದಸ್ಯರೇ ಕಳ್ಳರಾ? ಎಂದು ಪ್ರಶ್ನೆ ಮಾಡಿದರು.

ಹಾಸ್ಟೆಲ್‌ನಲ್ಲಿದ್ದ ೧೧ ಅನಾಥ ಮಕ್ಕಳ ಬಗ್ಗೆ ಮಾಹಿತಿ ಕಲೆ ಹಾಕಿ ಏಕೆ ಕ್ರಮ ಕೈಗೊಂಡಿಲ್ಲ? ಅನಾಥ ಮಕ್ಕಳು ಕೊಲೆಯಾದರೇ? ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೇ? ಇಲ್ಲವೇ ಮಾರಾಟವಾದರೇ? ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಎಂದು ಪರಶುರಾಮ್‌ ಪ್ರಶ್ನಿಸಿದರು.

ಇದನ್ನೂ ಓದಿ | ಮಂಗಳೂರು ಸ್ಫೋಟ | ಕುಕ್ಕರ್‌ ಬ್ಲಾಸ್ಟ್‌ಗೆ ಮಲೆನಾಡಿನ ನಂಟು, ಆತಂಕಕ್ಕೆ ಸಿಲುಕಿದ ತೀರ್ಥಹಳ್ಳಿಯ ಜನರು

ಈ ಮಕ್ಕಳನ್ನು ಮಾರಾಟ ಮಾಡಲಾಗಿದೆ, ಬಲಿ ಪೀಠಕ್ಕೆ ನೀಡಲಾಗಿದೆ, ಅವರ ಅಂಗಾಂಗಗಳನ್ನು ಕಿತ್ತು ಹಾಕಿರಬಹುದು ಎಂಬುದಾಗಿ ನಾವೀಗ ಗಂಭೀರ ಆರೋಪ ಮಾಡುತ್ತೇವೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪರಶುರಾಮ್‌ ಆಗ್ರಹಿಸಿದ್ದಾರೆ.

ನ.೨೫ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ
ಮುರುಘಾಶ್ರೀ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ಅರ್ಜಿ ವಿಚಾರಣೆಯು ಚಿತ್ರದುರ್ಗ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದಲ್ಲಿ ನಡೆದಿದ್ದು, ನವೆಂಬರ್ 25ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ಸೋಮವಾರ (ನ.೨೧) ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದ ಒಂದನೇ ಆರೋಪಿ ಮುರುಘಾಶ್ರೀ ಹಾಗೂ ಎರಡನೇ ಆರೋಪಿ ವಾರ್ಡನ್ ರಶ್ಮಿ ಮತ್ತು ಮೂರನೇ ಆರೋಪಿ ಮುರುಘಾ ಮಠದ ಮ್ಯಾನೇಜರ್ ಪರಮಶಿವಯ್ಯಗೆ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್‌ ವಿಚಾರಣೆಗೆ ಕಾಯುತ್ತಿದೆ ಎನ್‌ಐಎ ತಂಡ, ಚಾಲಕ ಪುರುಷೋತ್ತಮ್‌ ಆರೋಗ್ಯದಲ್ಲಿ ಚೇತರಿಕೆ

Exit mobile version