ರಾಯಚೂರು: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಯೊಂದರ ಚುನಾವಣೆಗೂ ಧರ್ಮ ದಂಗಲ್ ಕಾಲಿಟ್ಟಿದೆ. ಅನ್ಯಕೋಮಿನ ವ್ಯಕ್ತಿಯ ಅಧ್ಯಕ್ಷಗಿರಿಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಏಕಕಾಲಕ್ಕೆ 15 ಹಿಂದು ಸದಸ್ಯರು ರಾಜೀನಾಮೆ ಸಲ್ಲಿಸಿರುವ ಘಟನೆ ಸಿಂಧನೂರು ತಾಲೂಕಿನ ಆರ್.ಎಚ್. ಕ್ಯಾಂಪ್ ನಂ. 1 ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಆಗಸ್ಟ್ 2ರಂದು ಆರ್.ಎಚ್. ಕ್ಯಾಂಪ್ ನಂ. 1 ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಸಾಮಾನ್ಯ ವರ್ಗಕ್ಕೆ ಮೀಸಲು ಅಧ್ಯಕ್ಷ ಸ್ಥಾನ ಮೀಸಲಾಗಿತ್ತು. ಆದರೆ, ಸಾಮಾನ್ಯ ವರ್ಗದ ವ್ಯಕ್ತಿಯ ಬದಲು ಅನ್ಯಕೋಮಿನ ವ್ಯಕ್ತಿಗೆ ಅಧ್ಯಕ್ಷಪಟ್ಟ ನೀಡಿದ್ದರಿಂದ ಹಿಂದು ಸದಸ್ಯರು ಕ್ಯಾತೆ ತೆಗೆದಿದ್ದಾರೆ. ಒಟ್ಟು 38 ಸದಸ್ಯಬಲ ಹೊಂದಿರುವ ಗ್ರಾಪಂನಲ್ಲಿ ಒಬ್ಬರು ಮಾತ್ರ ಅನ್ಯಕೋಮಿನ ವ್ಯಕ್ತಿಯಾಗಿದ್ದು, ಉಳಿದವರೆಲ್ಲಾ ಹಿಂದುಗಳಾಗಿದ್ದಾರೆ. ಇದರಿಂದ ಅಸಮಾಧಾನಗೊಂಡು 15 ಹಿಂದು ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ.
ಇದನ್ನೂ ಓದಿ | DK Shivakumar : ಅಣ್ಣ ಹೇಳಿದ್ದು ತಮ್ಮ ಕೇಳಬೇಕು; ಎಚ್‌ಡಿಕೆ ವಾಮ ಮಾರ್ಗ ಹೇಳಿಕೆಗೆ ಡಿಕೆಶಿ ತಿರುಗೇಟು!
ಗಾಂಜಾ ಚಾಕೋಲೆಟ್ ದಂಧೆ; ಇಬ್ಬರು ಆರೋಪಿಗಳ ಬಂಧನ
ರಾಯಚೂರು: ಯರಮರಸ್ ಬಳಿ ಗಾಂಜಾ ಚಾಕೋಲೆಟ್ ದಂಧೆ ಡನೆಸುತ್ತಿದ್ದ ಇಬ್ಬರನ್ನು ಅಬಕಾರಿ ಪೊಲೀಸರು ಬಂಧಿಸಿ, 200 ಗಾಂಜಾ ಚಾಕೋಲೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬಿಹಾರ ಮೂಲದ ರಂಜಿತ್ ಹಾಗೂ ರಾಜಾರಾಮ್ ಬಂಧಿತರು. ಇವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.