Site icon Vistara News

Best Teacher Award: ಧಾರವಾಡದಲ್ಲಿ 18 ಶಿಕ್ಷಕರಿಗೆ ʼವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್ʼ ಪ್ರದಾನ

vistara best teacher

ಧಾರವಾಡ: ನಗರದ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾವ್ ಭವನದಲ್ಲಿ ಶನಿವಾರ ʼವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್-2023ʼ (vistara News Best Teacher Award ಕಾರ್ಯಕ್ರಮ ನೆರವೇರಿತು. ವಿದ್ಯಾರ್ಥಿಗಳ ಬದುಕು ರೂಪಿಸುವ ಶ್ರೇಷ್ಠ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ವಿಸ್ತಾರ ನ್ಯೂಸ್‌ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ 18 ಶಿಕ್ಷಕರಿಗೆ ʼವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್ʼ ನೀಡಿ ಗೌರವಿಸಲಾಯಿತು.

ರಾಜ್ಯ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಮಕ್ಕಳ ಕೈಯಲ್ಲಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿಸಿದರು. ನಂತರ ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ವಿಸ್ತಾರ ನ್ಯೂಸ್ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ನಮ್ಮ ಫೌಂಡೇಶನ್ ವತಿಯಿಂದಲೂ ಈ ರೀತಿಯ ಕಾರ್ಯಕ್ರಮ ಮಾಡಬೇಕು ಎಂದು ತಿಳಿಸಿದರು.

‌ನಮ್ಮಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳಿವೆ, ಮಕ್ಕಳಿಗೆ ಕೌಶಲ್ಯ ಬೆಳೆಸಲು ಬೇಕಾದ ವ್ಯವಸ್ಥೆ ಮಾಡಬೇಕಿದೆ. ವಿದೇಶಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ರೋಬೋಟ್‌ಗಳು ಕೆಲಸ ಮಾಡುತ್ತಿವೆ. ಆದರೆ, ನಮ್ಮಲ್ಲಿ ಉತ್ತಮ ಶಿಕ್ಷಕರು ಇದ್ದಾರೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ವಿಶೇಷವಾಗಿ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ಕೊಟ್ಟಿದ್ದಾರೆ. ಹೀಗಾಗಿ ವಿಸ್ತಾರ ನ್ಯೂಸ್‌ಗೆ ಧನ್ಯವಾದ ಹೇಳುತ್ತೇನೆ. ಇದೊಂದು ದೊಡ್ಡ ಚಾನೆಲ್ ಆಗಿ ಬೆಳೆಯಲಿ ಎಂದು ಹಾರೈಸಿದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಶಿಕ್ಷಕರಿಗೆ ಪ್ರಶಸ್ತಿ ಕೊಡುವುದು ವಿದ್ಯಾರ್ಥಿಗಳಿಗೆ ಖುಷಿ ಕೊಡುತ್ತೆ. ಶಿಕ್ಷಕರಿಗೆ ಪ್ರಶಸ್ತಿ ಕೊಟ್ಟರೆ ಇಡೀ ಸಮಾಜಕ್ಕೆ ಗೌರವ ಕೊಟ್ಟಂತೆ. ಒಂದು ವರ್ಷದಲ್ಲಿ ಉತ್ತಮ ಚಾನೆಲ್ ಆಗಿ ವಿಸ್ತಾರ ಹೊರ ಹೊಮ್ಮಿದೆ. ಕೇವಲ ಪ್ರಶಸ್ತಿ ಮೂಲಕ ಇದು ಗುರುತಿಸಿಕೊಂಡಿಲ್ಲ. ಸಮಾಜದ ಕುಂದು ಕೊರತೆಗಳ ಬಗ್ಗೆ ಸರ್ಕಾರವನ್ನು ಎಚ್ಚರಿಸುತ್ತಾ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ | Raja Marga Column : ಕುರುಡಿ, ಕಿವುಡಿ ಶಿಷ್ಯೆ ಮತ್ತು ಕುರುಡಿ ಟೀಚರ್! ; ಇದು ಜಗತ್ತಿನ ಬೆಸ್ಟ್‌ ಶಿಕ್ಷಕಿಯ ಕತೆ

ಪ್ರಶಸ್ತಿ ಪುರಸ್ಕೃತ ಶಿಕ್ಷಕರು

1.ಎಲ್‌.ಐ. ಲಕ್ಕಮ್ಮನವರ, ಶಿಕ್ಷಕಿ, ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ, ಹೆಬ್ಬಳ್ಳಿ
2.ಪ್ರಕಾಶ ಹನುಮಪ್ಪ ಕಂಬಳಿ, ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಬರದ್ವಾಡ, ಕಂದಗೋಳ
3.ರಾಜಶೇಖರ ಮಲ್ಲಪ್ಪ ಹೊನ್ನಪ್ಪನವರ, ಶಿಕ್ಷಕರು, ಸ.ಹಿ.ಪ್ರಾ. ಶಾಲೆ ಲಕಮಾಪುರ
4.ನೀಲಕಂಠ ಎಸ್.ಗೋವಿಂದರೆಡ್ಡಿ, ಮುಖ್ಯ ಶಿಕ್ಷಕರು, ಕೆ.ಇ.ಬೋರ್ಡ್‌ ಪ್ರೌಢಶಾಲೆ, ಮಾಳಮಡ್ಡಿ
5.ಎಫ್‌.ವಿ. ಮಂಜಣ್ಣವರ, ಸಹ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ನವಲೂರ
6.ಅಹಮದ್‌ ಮುಜಾವರ, ಸಂಸ್ಥಾಪಕರು ಹಾಗೂ ನಿರ್ದೇಶಕರು, ವಿಕಾಸ್‌ ಕರಿಯರ್‌ ಅಕಾಡೆಮಿ, ಧಾರವಾಡ
7.ಲೂಸಿ ಕೆ. ಸಾಲ್ಡಾನಾ, ನಿವೃತ್ತ ಶಿಕ್ಷಕಿ, ಅಕ್ಷರ ತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ, ಧಾರವಾಡ
8.ಬಾಬಾಜಾನ್‌ ಮುಲ್ಲಾ, ಚಿತ್ರಕಲಾ ಶಿಕ್ಷಕರು, ಶ್ರೀ ಪ್ರಭುದೇವ ಪ್ರೌಢಶಾಲೆ, ಹೊನ್ನಾಪೂರ, ಆಳ್ನಾವರ
9.ಡಾ. ರೋಧಾ ಜೆಸುರಾಜ್‌, ಪ್ರಾಂಶುಪಾಲರು, ಶ್ರೀಯಾ ನರ್ಸಿಂಗ್‌ ಕಾಲೇಜು, ಧಾರವಾಡ
10.ಬಶೀರ ಅಹ್ಮದ್‌ ಎ. ಬಳ್ಳಾರಿ, ಶಹ ಶಿಕ್ಷಕರು, ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ, ಜನ್ನತ್‌ ನಗರ, ಧಾರವಾಡ
11.ಭೀಮಪ್ಪ ಎಲ್‌. ಮಲ್ಲಿಗವಾಡ, ನಿವೇದಿತಾ ಪ್ರಾಥಮಿಕ ಶಾಲೆ, ರಾಮನಗರ, ಧಾರವಾಡ
12.ವೀಣಾ ಹೊಸಮನಿ, ಶಿಕ್ಷಕಿ, ಸ.ಹಿ.ಪ್ರಾ. ಶಾಲೆ, ನವಲೂರು
13.ರಾಮಚಂದ್ರ ಎಸ್‌.ಗೂಳೇರ, ಶಿಕ್ಷಕರು, ಸರ್ಕಾರಿ ಪ್ರಾಥಮಿಕ ಶಾಲೆ, ಗೋಪನ ಕೊಪ್ಪ|
14.ವೆಂಕಣ್ಣ ಎಫ್‌. ಚುಳಕಿ, ಶಿಕ್ಷಕರು, ಹಿರಿಯ ಪ್ರಾಥಮಿಕ ಶಾಲೆ, ಕುಸುಗಲ್‌
15.ಮಾರ್ಗರೇಟ್‌ ಎಸ್‌. ಕೊಂಗಿ, ಶಿಕ್ಷಕರು, ಓಂ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಧಾರವಾಡ
16.ಡಾ. ಬಸವರಾಜ್‌ ಗೊಲ್ಲಪ್ಪ ಬಿರಾದಾರ, ಪ್ರಾಂಶುಪಾಲರು, ಗುಡ್‌ನ್ಯೂಸ್‌ ವೆಲ್ಫೇರ್‌ ಸೊಸೈಟಿಯ ಕಲಾ ಮತ್ತು ವಾಣಿಜ್ಯ ಕಾಲೇಜು, ಕಲಘಟಗಿ
17.ಸಿದ್ದಣ್ಣ ಅಶೋಕ ದಳವಾಯಿ, ಸ್ಪರ್ಧಾ ಜೀನಿಯಸ್‌ ಅಕಾಡೆಮಿ, ಜಯನಗರ ಕ್ರಾಸ್‌, ಧಾರವಾಡ
18.ಪ್ರೊ. ನಾಗೇಶ್‌ ವೈ ಅಣ್ಣಿಗೇರಿ, ಸಂಸ್ಥಾಪಕರು, ವೈ.ಬಿ.ಅಣ್ಣಿಗೇರಿ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ, ಧಾರವಾಡ

    Exit mobile version