ಯಾದಗಿರಿ: ಜಿಲ್ಲೆಯ ವಿವಿಧೆಡೆ ಶನಿವಾರ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ (Rain News). ಈ ನಡುವೆ ಜಿಲ್ಲೆಯ ಶಹಾಪುರದ ಹಳಪೇಟೆಯ ಗುಡ್ಡದಲ್ಲಿ ಸಿಡಿಲು ಬಡಿದು 19 ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ.
ಸಂಗಪ್ಪ ಹಾಗೂ ದೇವಪ್ಪ ಎಂಬುವವರ ಕುರಿಗಳು ಮೃತಪ್ಟಟಿವೆ. ಸಂಜೆ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದಾಗ ಕುರಿಗಾಹಿಗಳು, ಕುರಿಗಳ ಜತೆ ಮನೆಗೆ ವಾಪಸ್ ತೆರಳುತ್ತಿದ್ದರು. ಈ ವೇಳೆ ಸಿಡಿಲು ಬಡಿದಿದ್ದರಿಂದ 19 ಕುರಿಗಳ ಕೊನೆಯುಸಿರೆಳೆದಿವೆ.
ಕುರಿಗಳ ಸಾವಿನಿಂದ ಮಾಲೀಕರಿಗೆ ಸುಮಾರು 4 ಲಕ್ಷ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯಡ್ರಾಮಿಯಲ್ಲಿ ವರುಣಾರ್ಭಟ, ರಸ್ತೆಗಳು ಜಲಾವೃತ
ಕಲಬುರಗಿ: ಜಿಲ್ಲೆಯ ಹಲವೆಡೆ ವರುಣ ಆರ್ಭಟಿಸಿದ್ದಾನೆ. ಧಾರಾಕಾರ ಮಳೆಯಿಂದಾಗಿ ಯಡ್ರಾಮಿ ಪಟ್ಟಣದಲ್ಲಿ
ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನರು ಪರದಾಡುವಂತಾಯಿತು.
ಇದನ್ನೋ ಓದಿ | Weather Report: ಬಿರುಗಾಳಿ ಸಹಿತ ಗುಡುಗಲಿರುವ ವರುಣ; ಯಾವೆಲ್ಲ ಜಿಲ್ಲೆಗಳಿಗೆ ಅಲರ್ಟ್
ಪಟ್ಟಣದಲ್ಲಿನ ರಸ್ತೆಗಳು ಕಾಲುವೆಯಂತೆ ಬದಲಾಗಿದ್ದರಿಂದ ವಾಹನ ಸವಾರರು ಹೈರಾಣಾದರು.
ಚರಂಡಿ ಇಲ್ಲದ ಕಾರಣ ರಸ್ತೆಯ ಮೇಲೆ ಮಳೆ ನೀರು ಹರಿಯುತ್ತಿದೆ. ಪ್ರತಿ ಬಾರಿ ಮಳೆ ಬಂದಾಗ ಸಮಸ್ಯೆ ಎದುರಾಗುತ್ತಿದೆ. ಸಾಕಷ್ಟು ಬಾರಿ ಅಧಿಕಾರಿಗಳು, ಶಾಸಕರಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು,
ಶಾಸಕ ಡಾ.ಅಜಯ್ ಸಿಂಗ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.