ಸವಣೂರು, ಹಾವೇರಿ: ಸವಣೂರು (savanur) ಪಟ್ಟಣದ ಪ್ರತಿಷ್ಠಿತ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಕಲಿತ 1997-98ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚಿನ (SSLC Batch)‘ರಜತ ಮಹೋತ್ಸವ’ ನಿಮಿತ್ತ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮವು ಭಾನುವಾರ ಅದ್ಧೂರಿಯಾಗಿ ಜರುಗಿತು.
ಬೇರೆ ಬೇರೆ ಕಡೆ ಸೇವೆ ಸಲ್ಲಿಸುತ್ತಿರುವ, ನಿವೃತ್ತಿಯಾಗಿರುವ ಹಾಗೂ ಸದ್ಯ ಸಂಸ್ಥೆಯಲ್ಲಿಯೇ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ವಿಶೇಷ ಆಮಂತ್ರಣ ನೀಡಿದ 98ನೇ ಸಾಲಿನ ವಿದ್ಯಾರ್ಥಿಗಳು, ಸೇವೆ ಸಲ್ಲಿಸಿದ್ದ ಸಂಸ್ಥೆಯಲ್ಲಿಯೇ ಶಿಕ್ಷಕರಿಗೆ ಗೌರವ ಸಲ್ಲಿಸಿರುವ ಶಿಷ್ಯರ ಕಾರ್ಯಕ್ಕೆ ಗುರು ವೃಂದವು ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು.
ನೆಚ್ಚಿನ ಶಿಕ್ಷಕರಿಗೆ ಪುಷ್ಪ ನೀಡಿ ಸ್ವಾಗತಿದ ವಿದ್ಯಾರ್ಥಿಗಳ ತಂಡ ಶಿಕ್ಷಕರಿಗೆ ನೆನಪಿನ ಕಾಣಿಕೆಯೊಂದಿಗೆ ಫಲ-ಪುಷ್ಪ ನೀಡಿ ಗೌರವ ಸಮರ್ಪಿಸಿದರು. ಶಿಕ್ಷಕರು ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ನೆನಪುಗಳನ್ನು ಮೆಲುಕು ಹಾಕಿದರೇ, ವಿದ್ಯಾರ್ಥಿಗಳು ಶಾಲಾ ದಿನಗಳ ನೆನಪುಗಳನ್ನು ಎಳೆ ಎಳೆಯಾಗಿ ನೆನೆದು ಖುಷಿ ಹಂಚಿಕೊಂಡರು. ಕಾರ್ಯಕ್ರಮದ ನಂತರ ಭೋಜನ ಸವಿದು ರಜತ ಮಹೋತ್ಸವ ಸಂಪನ್ನಗೊಳಿಸಿದರು.
ಈ ಸುದ್ದಿಯನ್ನೂ ಓದಿ: ಶಾಲೆ ಎಂದರೆ ನೆನಪುಗಳ ಮೊಗಸಾಲೆ, ಐನಾಪುರದಲ್ಲಿ ಎಸ್ಸೆಸ್ಸೆಲ್ಸಿ ಬ್ಯಾಚ್‌ನ ಬೆಳ್ಳಿ ಹಬ್ಬ, ಗುರುವಂದನೆ, ಸ್ನೇಹಸಂಗಮ
ಈ ಸಂದರ್ಭದಲ್ಲಿ ೯೮ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚಿನ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವ ಹಾಗೂ ಸಲ್ಲಿಸುತ್ತಿರುವ ಗುರು ವೃಂದ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ರಾಜ್ಯದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.