Site icon Vistara News

Hori Habba 2022 | ಶಿವಮೊಗ್ಗದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯ ಅವಘಡ: ಇಬ್ಬರು ಯುವಕರ ಸಾವು

Hori Habba

ಶಿವಮೊಗ್ಗ: ಜಾನಪದ ಸಂಪ್ರದಾಯದ ಹಬ್ಬ ಎನ್ನಿಸಿರುವ ಹೋರಿ ಬೆದರಿಸುವ ಸ್ಪರ್ಧೆ ಮಲೆನಾಡಿನಲ್ಲಿ ಪ್ರಾರಂಭವಾಗಿದೆ. ಶಿವಮೊಗ್ಗದಲ್ಲಿ ನಡೆದ ಈ ಸಾಹಸಮಯ ಕ್ರೀಡೆ ಆರಂಭದಲ್ಲೇ ಇಬ್ಬರನ್ನು ಬಲಿಪಡೆದಿದೆ. ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು, ಅದೇ ಹೋರಿಯಿಂದ ಜೀವ ಕಳೆದುಕೊಂಡಿದ್ದಾರೆ.

ಎರಡು ಪ್ರತ್ಯೇಕ ಪ್ರಕರಣಗಳು ಇವು. ಶಿಕಾರಿಪುರದ ಗಾಮಾ ಎಂಬ ಗ್ರಾಮದಲ್ಲಿ ಓರ್ವ, ಹಾಗೇ ಸೊರಬ ತಾಲೂಕಿನ ಜಡೆ ಗ್ರಾಮದಲ್ಲಿ ಮತ್ತೊಬ್ಬ ಈ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೃತಪಟ್ಟಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಗಾಮಾ ಎಂಬಲ್ಲಿ ಪ್ರಶಾಂತ್ (36) ಎಂಬಾತ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ. ಹೋರಿಯನ್ನು ಬೆದರಿಸುತ್ತಿದ್ದಂತೆ ಅದು, ಒಂದು ಗೋಡೆಯ ಕಡೆ ಓಡಿ, ಮತ್ತೆ ವಾಪಸ್​ ಬರುತ್ತದೆ. ಈ ವೇಳೆ ಹೋರಿ ಪ್ರಶಾಂತ್ ಮೇಲೆ ಹಾರಿ, ಆತನ ಎದೆ ಮೇಲೆ ಒದ್ದು ಮುಂದೆ ಓಡುತ್ತದೆ. ಇದರಿಂದ ಪ್ರಶಾಂತ್​ ಗಂಭೀರವಾಗಿ ಗಾಯಗೊಂಡಿದ್ದ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಇನ್ನೊಂದು ಕಡೆ ಸೊರಬ ತಾಲೂಕಿನ ಜಡೆ ಗ್ರಾಮದಲ್ಲಿ ಕೂಡ ಇಂಥದ್ದೇ ಘಟನೆ ನಡೆದಿದೆ. ಚಗಟೂರು ನಿವಾಸಿ ಆದಿ (20) ಎಂಬಾತ ಹೋರಿಯಿಂದ ತಿವಿತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ.

ಇದನ್ನೂ ಓದಿ: 3 ವರ್ಷದ ಹೋರಿಗಳ ಅದ್ಧೂರಿ ಹುಟ್ಟುಹಬ್ಬ; 5 ಕೆಜಿ ಕೇಕ್‌ ಕತ್ತರಿಸಿ ಆಚರಣೆ

Exit mobile version