Site icon Vistara News

ಉತ್ತರ ಕನ್ನಡದಲ್ಲಿ ಭಾರಿ ಮಳೆ, ಭಟ್ಕಳದಲ್ಲಿ ನಾಲ್ವರನ್ನು ಬಲಿ ಪಡೆದ ಗುಡ್ಡ ಕುಸಿತ

Bhatkal Rain

ಕಾರವಾರ: ಉತ್ತರ ಕನ್ನಡದ ಭಟ್ಕಳದ ಮುಟ್ಟಳ್ಳಿ ಗ್ರಾಮದಲ್ಲಿ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಮೃತಪಟ್ಟಿದ್ದಾರೆ. ಆಗಸ್ಟ್​ 1ರ ಮಧ್ಯರಾತ್ರಿ ಭಾರಿ ಮಳೆಯಿಂದ ಈ ಗ್ರಾಮದ ಮನೆಯೊಂದರ ಮೇಲೆ ಗುಡ್ಡ ಕುಸಿದಿತ್ತು. ಇದರಿಂದಾಗಿ ಮನೆಯೂ ಬಿದ್ದು ಹೋಗಿತ್ತು. ಈ ವೇಳೆ ಮನೆಯಲ್ಲಿ ಲಕ್ಷ್ಮೀ ನಾರಾಯಣ ನಾಯ್ಕ್‌(೪೮), ಆಕೆಯ ಪುತ್ರಿ ಲಕ್ಷ್ಮಿ (೩೩), ಪುತ್ರ ಅನಂತ್‌ (೩೨) ಮತ್ತು ಇವರ ಸಹೋದರಿಯ ಮಗ ಪ್ರವೀಣ್​ ನಾಯ್ಕ್(೨೦) ಇದ್ದರು. ಈ ನಾಲ್ವರ ಶವಗಳನ್ನು ಮಣ್ಣಿನಡಿಯಿಂದ ಹೊರಗೆ ತೆಗೆಯಲಾಗಿದೆ.

ಭಟ್ಕಳ ಶಾಸಕ ಸುನಿಲ್‌ ನಾಯ್ಕ್‌ ಸ್ಥಳದಲ್ಲಿ ಹಾಜರಿದ್ದರು. ನಾಲ್ವರ ಸಾವಿಗೆ ಸಚಿವ ಶಿವರಾಮ್‌ ಹೆಬ್ಬಾರ್‌ ಸಂತಾಪ ವ್ಯಕ್ತಪಡಿಸಿದ್ದಾರೆ.

ನಿನ್ನೆ ರಾತ್ರಿ ಮನೆ ಕುಸಿದಾಗಿನಿಂದಲೂ ಸ್ಥಳೀಯರು ಈ ನಾಲ್ವರನ್ನು ಕಾಪಾಡಲು ಇನ್ನಿಲ್ಲದಷ್ಟು ಪ್ರಯತ್ನ ಪಟ್ಟಿದ್ದರು. ರಸ್ತೆ ಸಂಪರ್ಕವೇ ಕಡಿತಗೊಂಡಿದ್ದರಿಂದ ಜೆಸಿಬಿ ಬರುವುದು ತಡವಾಯಿತು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಆಗಸ್ಟ್​ 1ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಬಿದ್ದು ಶ್ರುತಿ (11) ಮತ್ತು ಜ್ಞಾನಶ್ರೀ (6) ಎಂಬ ಇಬ್ಬರು ಪುಟ್ಟ ಬಾಲಕಿಯರು ದಾರುಣವಾಗಿ ಮೃತಪಟ್ಟಿದ್ದರು.

ಇದನ್ನೂ ಓದಿ: ಮುಂದುವರಿದ ಮಳೆ ಆರ್ಭಟ; ಉತ್ತರ ಕನ್ನಡದಲ್ಲಿ ಮನೆ ಮೇಲೆ ಗುಡ್ಡ ಕುಸಿತ, ನಾಲ್ವರು ಅಪಾಯದಲ್ಲಿ

Exit mobile version