Site icon Vistara News

JCI India: ಸೊರಬದಲ್ಲಿ ಜೆಸಿಐ ಭಾರತ ಪ್ರತಿಭಾ ಅನ್ವೇಷಣೆ ಪರೀಕ್ಷೆ; 2000 ವಿದ್ಯಾರ್ಥಿಗಳು ಭಾಗಿ

ಸೊರಬ: ಪ್ರತಿ ವರ್ಷ ಜೆಸಿಐ ಭಾರತ (JCI India) ವತಿಯಿಂದ ದೇಶಾದ್ಯಂತ ನಡೆಯುವ ರಾಷ್ಟ್ರಮಟ್ಟದ ಪ್ರತಿಭಾ ಅನ್ವೇಷಣೆ ಪರೀಕ್ಷೆಯನ್ನು ಜೆಸಿಐ ಸೊರಬ ಸಿಂಧೂರ ಘಟಕದಿಂದ ಸೊರಬ ತಾಲೂಕಿನ ವಿವಿಧ ಶಾಲೆ ಮತ್ತು ಕಾಲೇಜುಗಳಲ್ಲಿ ನಡೆಸಲಾಯಿತು. ಸೊರಬ ತಾಲೂಕಿನಲ್ಲಿ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು, ಜೆಸಿಐ ಭಾರತದ ಹಸಿರೀಕರಣ ವಿಭಾಗದ ಪೂರ್ವ ರಾಷ್ಟ್ರೀಯ ಸಂಯೋಜಕರಾದ ಪ್ರಶಾಂತ್ ದೊಡ್ಡಮನೆ ಸಮ್ಮುಖದಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಲಾಯಿತು.

ಪರೀಕ್ಷೆ ಬಳಿಕ ಜೆಸಿಐ ಭಾರತದ ಹಸಿರೀಕರಣ ವಿಭಾಗದ ಪೂರ್ವ ರಾಷ್ಟ್ರೀಯ ಸಂಯೋಜಕರಾದ ಪ್ರಶಾಂತ್ ದೊಡ್ಡಮನೆ ಅವರು ಮಾತನಾಡಿ, ಸಿಇಟಿ, ನೀಟ್‌ ಸೇರಿ ವಿವಿಧ ವೃತ್ತಿಪರ ಕೋರ್ಟ್‌ ಪ್ರವೇಶಾತಿ ಪರೀಕ್ಷೆಗಳನ್ನು ಎದುರಿಸಲು ಜೆಸಿಐನಿಂದ ಮಾಡುವ ಪ್ರತಿಭಾ ಅನ್ವೇಷಣೆ ಪರೀಕ್ಷೆಯಿಂದ ಅನುಕೂಲವಾಗುತ್ತದೆ. ಈ ಪರೀಕ್ಷೆಯು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಎದುರಿಸುವುದು, ಒಎಂಆರ್‌ ಶೀಟ್‌ನ ಮಾದರಿ ಹೇಗೆ ಇರುತ್ತದೆ, ಮಾದರಿ ಪ್ರಶ್ನೆಗಳು ಹೇಗೆ ಇರುತ್ತದೆ ಎಂದು ತಿಳಿಯಲು ನೆರವಾಗುತ್ತದೆ ಎಂದು ತಿಳಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಸಹ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು, ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದ ಪ್ರತಿಭಾ ಅನ್ವೇಷಣೆ ಪರೀಕ್ಷೆಯನ್ನು ಜೆಸಿಐ ಸೊರಬ ಸಿಂಧೂರ ಘಟಕದಿಂದ ತಾಲೂಕಿನ ಹಲವಾರು ಶಾಲಾ-ಕಾಲೇಜುಗಳಲ್ಲಿ ಮಾಡಿದ್ದೇವೆ. ಸೊರಬ ತಾಲೂಕಿನಲ್ಲಿ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | India Post GDS recruitment: 30,041 ಗ್ರಾಮೀಣ ಅಂಚೆ ಸೇವಕ ಹುದ್ದೆಗೆ ಅರ್ಜಿ ಆಹ್ವಾನ, ಅಪ್ಲೈ ಮಾಡಲು ಆ.23 ಕೊನೆ ದಿನ

ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಲಾಗಿದೆ. ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ವಲಯ ಮಟ್ಟದಲ್ಲಿ ಕ್ರಮವಾಗಿ 7500 ರೂ., 5 ಸಾವಿರ ರೂ. ಮತ್ತು 3 ಸಾವಿರ ರೂ. ಹಾಗೂ ಟ್ರೋಫಿ ಬಹುಮಾನ ನೀಡಲಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತಿಯ ಸ್ಥಾನ ವಿಜೇತರಿಗೆ ಕ್ರಮವಾಗಿ 40 ಸಾವಿರ ರೂ., 20 ಸಾವಿರ ರೂ. ,10 ಸಾವಿರ ರೂ. ಹಾಗೂ ವಿಶೇಷ ಟ್ರೋಫಿಯ ಬಹುಮಾನವಿರುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ | IT Recruitment 2023: ಫ್ರೆಶರ್‌ಗಳಿಗೆ ಗುಡ್‌ ನ್ಯೂಸ್;‌ 5 ತಿಂಗಳಲ್ಲಿ ಐಟಿ ಕಂಪನಿಗಳಿಂದ ಇಷ್ಟು ಸಾವಿರ ಜನಕ್ಕೆ ಜಾಬ್

ಜೆಸಿಐ ಸೊರಬ ಸಿಂಧೂರ ಘಟಕದ ಅಧ್ಯಕ್ಷ ರಾಘವೇಂದ್ರ.ಎನ್, ಸದಸ್ಯರಾದ ಗೀತಾ ನಿಂಗಪ್ಪ , ನಿವೇದಿತ ಶಶಿಕಾಂತಗೌಡ, ಆರತಿ ಮಹಾಂತೇಶ್, ಶ್ವೇತಾ ಸುನಿಲ್ , ಬಾಲಾಜಿ ಪಾಟೀಲ್ , ವನಿತಾ ಬಾಲಾಜಿ , ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.

Exit mobile version