Site icon Vistara News

Contaminated Water : ಕಲುಷಿತ ನೀರಿನ ಸೇವನೆಯಿಂದ 27 ಜನರಿಗೆ ವಾಂತಿ ಭೇದಿ; ಬಳ್ಳಾರಿಯ ಗ್ರಾಮದಲ್ಲಿ ಆತಂಕದ ಪರಿಸ್ಥಿತಿ

Contaminated water

#image_title

ಬಳ್ಳಾರಿ: ಕಲುಷಿತ ನೀರು ಸೇವಿಸಿ 27 ಮಂದಿ ಅಸ್ವಸ್ಥಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುಂಟನಾಳ ಗ್ರಾಮದಲ್ಲಿ ನಡೆದಿದೆ. ಕಲುಷಿತ ನೀರು (Contaminated Water) ಸೇವಿಸಿದ ಪರಿಣಾಮ ವಾಂತಿ ಮತ್ತು ಬೇಧಿಯಿಂದ ಅಸ್ವಸ್ಥರಾಗಿದ್ದು, ಗ್ರಾಮದ ವಾಲ್ಮೀಕಿ ಭವನದಲ್ಲಿ ತಾತ್ಕಾಲಿಕ ಆರೋಗ್ಯ ಶಿಬಿರ ಪ್ರಾರಂಭಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ವಿಮ್ಸ್‌ನಲ್ಲಿ ಒಬ್ಬರು ಹಾಗೂ ಜಿಲ್ಲಾಸ್ಪತ್ರೆ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹದಿಮೂರು ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕುಂಟನಾಳ್‌ ಗ್ರಾಮದಲ್ಲಿ ತುರ್ತು ಚಿಕಿತ್ಸಾ ಘಟಕ ತೆರೆದಿದ್ದು, ಅಲ್ಲಿ ಕೂಡ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ಮನೆಯಲ್ಲಿ ತಂದೆ ಸೇರಿ ಮೂವರು ಮಕ್ಕಳಿಗೆ ವಾಂತಿ ಭೇಧಿ ಕಾಣಿಸಿಕೊಂಡಿದೆ. ಈಗಾಗಲೇ ಮೂವರು ಮಕ್ಕಳು ಚಿಕಿತ್ಸೆ ಪಡೆದು ಗುಣಮುಖರಾಗಿ ಊರಿಗೆ ತೆರಳಿದ್ದಾರೆ. ತಂದೆ ಮಾತ್ರ ಕಳೆದ ಮೂರು ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಗುಣಮುಖರಾಗಲಿದ್ದಾರೆ ವೈದ್ಯರು ತಿಳಿಸಿದ್ದಾರೆ.

ಕುಂಟನಾಳ್‌ ಗ್ರಾಮದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕ ಇದೆ. ಆದರೆ, ಸಮಸ್ಯೆಗೆ ಕಾರಣವಾಗಿದ್ದು ಅದರ ನೀರಲ್ಲ. ಅದೇ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜಿಗಾಗಿ ಒಂದು ಟ್ಯಾಂಕ್‌ ನಿರ್ಮಿಸಿದ್ದು, ಅದನ್ನು ಸ್ವಚ್ಛಗೊಳಿಸದೆ ಇದ್ದ ಪರಿಣಾಮವಾಗಿ ನೀರು ಕಲುಷಿತಗೊಂಡು ಸಮಸ್ಯೆಯಾಗಿದೆ ಎನ್ನಲಾಗಿದೆ.

ಮಾ. 25ರಂದು ಒಬ್ಬರಿಗೆ ಆಮಶಂಕೆ ಕಾಣಿಸಿಕೊಂಡ ನಂತರ ನಿಧಾನವಾಗಿ ಒಬ್ಬೊಬ್ಬರಿಗೆ ಸಮಸ್ಯೆ ಕಾಣಿಸಿಕೊಂಡಿದೆ. ಮಾ.27ರಂದು 3 ಜನರಿಗೆ, ಮಾ.28 ಒಬ್ಬರಿಗೆ, ಮಾ.29ರಂದು ಇಬ್ಬರಿಗೆ, ಮಾ.30ರಂದು ಮೂವರಿಗೆ, ಮಾ.31ರಂದು ನಾಲ್ವರಿಗೆ ವಾಂತಿ ಭೇದಿ ಉಲ್ಬಣಗೊಂಡಿದೆ. ಇದರಲ್ಲಿ ಇಬ್ಬರೂ ಮಕ್ಕಳು ಸೇರಿ ಒಟ್ಟಾರೆ ಇಲ್ಲಿಯವರೆಗೆ 27 ಜನರಿಗೆ ವಾಂತಿ ಭೇಧಿ ಕಾಣಿಸಿಕೊಂಡಿದೆ. ಗ್ರಾಮಕ್ಕೆ ತೆರಳಿದ ಡಿಎಚ್‌ಒ ಡಾ.ಎಚ್.ಎಲ್ ಜನಾರ್ಧನ, ಟಿಎಚ್‌ಒ ಡಾ.ಮೋಹನ್ ಕುಮಾರಿ ಅವರು ಗ್ರಾಮದ ಹೊರ ವಲಯದಲ್ಲಿ ಹರಿಯುತ್ತಿರುವ ವೇದವತಿ ನದಿ ನೀರನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬಾರಜು ಮಾಡಲಾಗುತ್ತಿದೆ.

ವಾಯ್ಸ್…‌ ಘಟನೆಗೆ ಗ್ರಾಮ ಪಂಚಾಯಿತಿ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಗ್ರಾಮದಲ್ಲಿದ್ದ ಏಕೈಕ ಶುದ್ಧ ಕುಡಿಯುವ ನೀರಿನ ಘಟಕ ಕೈಕೊಟ್ಟಿದೆ. ಗ್ರಾಮಸ್ಥರಿಗೆ ವೇದಾವತಿ ನದಿಯಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇದರೊಂದಿಗೆ ಒಡೆದ ಪೈಪ್‌ಲೈನ್‌ ಮೂಲಕ ಒಳಚರಂಡಿ ನೀರು ಕಲುಷಿತಗೊಂಡು ನೀರು ಸರಬರಾಜು ಆಗಿದೆ ಎಂದು ಗ್ರಾಮಸ್ಥರು ಅಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : Most Polluted City: ಏಷ್ಯಾದ ಟಾಪ್ ಟೆನ್ ಕಲುಷಿತ ಸಿಟಿಗಳಲ್ಲಿ ಭಾರತ ಮೂರು ನಗರಗಳು!

Exit mobile version