ರಾಯಚೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, (2nd PUC Result) ರಾಯಚೂರು ಜಿಲ್ಲೆ 31ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ ಜಿಲ್ಲೆಗೆ 30ನೇ ಸ್ಥಾನದಲ್ಲಿದೆ. ಈ ಬಾರಿ ಜಿಲ್ಲೆಗೆ ಶೇ. 66.31 ಫಲಿತಾಂಶ ಬಂದಿದೆ, ಕಳೆದ ವರ್ಷ ಶೇ. 59.73 ಫಲಿತಾಂಶ ಬಂದಿತ್ತು. ಈ ಬಾರಿಯ ಪಟ್ಟಿಯಲ್ಲಿ ಯಾದಗಿರಿ ಕೊನೆಯ ಸ್ಥಾನದಲ್ಲಿದೆ.
ಈ ಬಾರಿ ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸಮಾನ ಅಂಕ ಪಡೆಯುವ ಮೂಲಕ ಜಿಲ್ಲೆಯ ಜನರ ಗಮನ ಸೆಳೆದಿದ್ದಾರೆ. ವಿಜ್ಞಾನ ವಿಭಾಗದ ಕು. ವರ್ಷಾ ಮತ್ತು ಸೃಜನ್ ಇಬ್ಬರು ವಿದ್ಯಾರ್ಥಿಗಳು ಈ ಬಾರಿಯ ಜಿಲ್ಲೆಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಕು. ವರ್ಷಾ ಲಿಂಗಸುಗೂರು ಪಟ್ಟಣದ ಉಮಾ ಮಹೇಶ್ವರಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದು, 600ಕ್ಕೆ 588 ಅಂಕಗಳು ಪಡೆದು ಟಾಪರ್ ಆಗಿದ್ದಾಳೆ. ವರ್ಷಾ ತಂದೆ ನಾಗರಾಳ ಗ್ರಾಮದಲ್ಲಿ ಆಯುರ್ವೇದ ವೈದ್ಯರಾಗಿದ್ದಾರೆ. ತಾಯಿ ಕೆಇಬಿಯಲ್ಲಿ ಸರ್ಕಾರಿ ನೌಕರಸ್ತರಾಗಿದ್ದಾರೆ.
ಈ ವೇಳೆ ಕು.ವರ್ಷಾ ಮಾತನಾಡಿ, ಫಲಿತಾಂಶ ಬಹಳಷ್ಟು ಖುಷಿ ತಂದಿದೆ. ಟೀಚರ್ಸ್ ಬೋಧನೆಯ ಪ್ರಯತ್ನದಿಂದ ಈ ಸಾಧನೆ ಸಾಧ್ಯ. ಅಪ್ಪ ಅಮ್ಮ ಬಹಳಷ್ಟು ಶ್ರಮ ವಹಿಸಿದ್ದಾರೆ. ಈ ಎಲ್ಲಾ ಅಭಿನಂದನೆ ಅವರಿಗೆ ಸಲ್ಲಬೇಕು, ಮುಂದಿನ ದಿನಗಳಲ್ಲಿ ವೈದ್ಯಳಾಗುವ ಕನಸಿದೆ ಎಂದು ವರ್ಷಾ ವಿಸ್ತಾರ ನ್ಯೂಸ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಸತತ ಮೂರು ವರ್ಷಗಳಿಂದ ಉಮಾಮಹೇಶ್ವರ ಪಿಯು ಕಾಲೇಜ್ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಖಾಯಂಗೊಳಿಸಿದೆ. ವಿದ್ಯಾರ್ಥಿನಿ ವರ್ಷಾಳ ಸಾಧನೆಗೆ ಸಂಸ್ಥೆ ಅಧ್ಯಕ್ಷರು, ಆಡಳಿತಾಧಿಕಾರಿಗಳು, ಉಪನ್ಯಾಸಕರು, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 2nd PUC Result 2023 : ಪಾಸ್ ಆದವರು ಇದನ್ನು ಓದಬೇಕಾಗಿಲ್ಲ! ಫೇಲ್ ಆದವರು ಗಮನಿಸಲೇಬೇಕಾದ ಮಾಹಿತಿ ಇಲ್ಲಿದೆ
ಸೃಜನ್ ಗೆ 600ಕ್ಕೆ 588 ಅಂಕ
ನಗರದ ಪ್ರಮಾಣ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿರುವ ಸೃಜನ್ 600ಕ್ಕೆ 588 ಅಂಕಗಳನ್ನು ಪಡೆದಿದ್ದಾನೆ. ಸೃಜನ್ ರಾಯಚೂರು ನಗರದ ಪ್ರಮಾಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ.
ರಾಯಚೂರು ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿಯ ಫಲಿತಾಂಶ ಹೆಚ್ಚಳವಾಗಿದೆ. ಕಳೆದ 2022 ರಲ್ಲಿ 60.59 ರಷ್ಟು ಫಲಿತಾಂಶ ಪಡೆದಿದ್ದ ರಾಯಚೂರು ಜಿಲ್ಲೆ ಈ ಬಾರಿ 62.98% ರಷ್ಟು ಫಲಿತಾಂಶ ಬಂದಿದೆ. ಕಳೆದ ಬಾರಿಯ ಫಲಿತಾಂಶ ಗಮನಿಸಿದರೆ ಈ ಬಾರಿ ಫಲಿತಾಂಶ 2.39%ರಷ್ಟು ಹೆಚ್ಚಳ ಕಂಡಿದೆ. ಈ ಮೂಲಕ ರಾಯಚೂರು ಜಿಲ್ಲೆ 31 ಸ್ಥಾನದಲ್ಲಿದೆ. ಈ ಬಾರಿ 15 ರೊಳಗೆ ಸ್ಥಾನ ಪಡೆಯಲು ಜಿಲ್ಲಾಡಳಿತ ಸಾಕಷ್ಟು ಕಸರತ್ತು ನಡೆಸಿತ್ತು ಎನ್ನಲಾಗಿದೆ.