Site icon Vistara News

ಮಂತ್ರಾಲಯದಲ್ಲಿ ರಾಯರ 351ನೇ ಆರಾಧನಾ ‌ಮಹೋತ್ಸವ ಆರಂಭ: ತುಂಗಭದ್ರಾ ನದಿ ಸ್ನಾನಕ್ಕೆ ಬ್ರೇಕ್

mantralaya

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ರಾಯರ 351ನೇ ಆರಾಧನಾ ‌ಮಹೋತ್ಸವ ಬುಧವಾರ ಆರಂಭಗೊಂಡಿದೆ. ಧ್ವಜಾರೋಹಣ ಮೂಲಕ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ. ಈ ನಡುವೆ, ಇಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಭಾರಿ ನೀರು ಇರುವುದರಿಂದ ನದಿಗೆ ಇಳಿದು ಸ್ನಾನ ಮಾಡದಂತೆ ಭಕ್ತರಿಗೆ ಸೂಚನೆ ನೀಡಲಾಗಿದೆ.

ಆಗಸ್ಟ್‌ 10 ರಿಂದ 16ರವರೆಗೆ ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವ ನಡೆಯಲಿದೆ. ಎರಡು ವರ್ಷಗಳ ಮಹಾಮಾರಿ ಕೊರೊನಾದಿಂದ ಸರಳವಾಗಿ ನಡೆದಿದ್ದ ಆರಾಧನಾ ಮಹೋತ್ಸವ ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ. ರಾಜ್ಯದಲ್ಲಿ ವಿಪರೀತ ಮಳೆಯಾಗುತ್ತಿದ್ದು ತುಂಗಭದ್ರಾ ನದಿಯ ದಡದಲ್ಲಿ ಪ್ರವಾಹ ಸ್ಥಿತಿ ಎದುರಾಗಿದೆ.

ಇದನ್ನೂ ಓದಿ | Mantralaya | ಮಂತ್ರಾಲಯ ರಾಯರ ದರ್ಶನಕ್ಕೆ ಬಂದ ಭಕ್ತರಿಗೆ ವಿಶೇಷ ಅತಿಥಿಗಳ ಸ್ವಾಗತ!

ತುಂಗಭದ್ರ ನದಿಯಲ್ಲಿ ನೀರು ಹೆಚ್ಚಳವಾದ ಹಿನ್ನೆಲೆಯಲ್ಲಿ ಸ್ನಾನಕ್ಕೆ ನಿರ್ಬಂಧ ಹೇರಲಾಗಿದೆ. ಸ್ನಾನಘಟ್ಟದ ಬಳಿ ಪೊಲೀಸ್ ಅಧಿಕಾರಿಗಳು ಮತ್ತು ಸ್ವಯಂ ಸೇವಕರ ನೇಮಿಸಿ ಬ್ಯಾರಿಕೇಡ್ ಹಾಕಿ ಆಡಳಿತ ಮಂಡಳಿ ಕಟ್ಟೆಚ್ಚರ ವಹಿಸಿದೆ. ನದಿ ಸ್ನಾನದ ಬದಲಿಗೆ ತಾತ್ಕಾಲಿಕ ನೀರಿನ ವ್ಯವಸ್ಥೆ ಆಡಳಿತ ಮಂಡಳಿ ಮಾಡಿದೆ.

Exit mobile version