ಶಿವಮೊಗ್ಗ: ಅಯೋಧ್ಯೆ ಬಾಲಕ ರಾಮನ ಪ್ರಾಣ ಪ್ರತಿಷ್ಠಾಪನೆ (Ram Mandir) ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಜಿಲ್ಲೆಯ ಸಂಸ್ಕೃತ ಗ್ರಾಮ ಮತ್ತೂರಿನ ಗ್ರಾಮಸ್ಥರು ಅತಿರುದ್ರ ಮಹಾಯಾಗ ಏರ್ಪಡಿಸಿದ್ದಾರೆ. ಜ. 26ರಿಂದ 29 ರವರೆಗೆ ಅತಿರುದ್ರ ಮಹಾಯಾಗ ನಡೆಯಲಿದೆ. ನಾಲ್ಕು ದಿನಗಳ ಕಾಲ ನಡೆಯುವ ಹೋಮದಲ್ಲಿ ಪ್ರಮುಖರು ಭಾಗಿಯಾಗಲಿದ್ದಾರೆ.
ಅತಿರುದ್ರ ಮಹಾಯಾಗಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮಾಜಿ ಸಿಎಂಗಳಾದ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ನಾಯಕರಾದ ಸಿ.ಟಿ.ರವಿ, ಅಶ್ವತ್ಥ್ ನಾರಾಯಣ್, ಅನಂತ್ ಕುಮಾರ್ ಹೆಗಡೆ, ನಳೀನ್ ಕುಮಾರ್ ಕಟೀಲ್, ಆರಗ ಜ್ಞಾನೇಂದ್ರ ಸೇರಿದಂತೆ ಹಲವರಿಗೆ ಅಹ್ವಾನ ನೀಡಲಾಗಿದೆ.
ಇದನ್ನೂ ಓದಿ | Lord Ram: ಮದರಸಾಗಳಲ್ಲೂ ನಡೆಯಲಿದೆ ಇನ್ನು ರಾಮನ ಕುರಿತು ಅಧ್ಯಯನ; ಏನಿದು ಯೋಜನೆ?
ಅತಿರುದ್ರ ಮಹಾಯಾಗ ಸಂಚಲನಾ ಸಮಿತಿಯಿಂದ ಯಾಗ ಆಯೋಜನೆ ಮಾಡಲಾಗಿದ್ದು, ಶುಕ್ರವಾರದಿಂದ 4 ನಾಲ್ಕು ದಿನಗಳ ಕಾಲ ಶ್ರೀ ಅತಿರುದ್ರ ಮಹಾಯಾಗ ನಡೆಯಲಿದೆ. ಗಣಪತಿ ಹೋಮ, ಸುದರ್ಶನ ಹೋಮ, ರಾಷ್ಟ್ರ ವಿಜಯ ಯಜ್ಞ ಸೇರಿದಂತೆ ಅತಿರುದ್ರ ಮಹಾಯಾಗ ನಡೆಯಲಿದೆ. 12 ಯಜ್ಞ ಕುಂಡಗಳಲ್ಲಿ 100ಕ್ಕೂ ಹೆಚ್ಚು ಋತ್ವಿಜರಿಂದ ಅತಿರುದ್ರ ಮಹಾಯಾಗದ ಪೂರ್ಣಾಹುತಿ ಸಂಪನ್ನಗೊಳ್ಳಲಿದೆ.
Ram Mandir: ಮತ್ತೊಬ್ಬ ಕನ್ನಡಿಗ ಶಿಲ್ಪಿ ಗಣೇಶ್ ಭಟ್ ಕೆತ್ತಿದ ರಾಮನ ವಿಗ್ರಹ ಹೀಗಿದೆ ನೋಡಿ…
ಬೆಂಗಳೂರು: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆ (Pran Pratishtha) ಮಾಡಲು ಒಟ್ಟು ಮೂವರು ಶಿಲ್ಪಿಗಳು ಬಾಲ ರಾಮನ ವಿಗ್ರಹವನ್ನು (Ram Lalla Idol) ಕೆತ್ತನೆ ಮಾಡಿದ್ದರು. ಈ ಪೈಕಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರ ಕೆತ್ತನೆಯ ರಾಮಲಲ್ಲಾ ಈಗ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ. ಈಗ ಮತ್ತೊಬ್ಬ ಶಿಲ್ಪಿ, ಕನ್ನಡಿಗರೇ ಆದ ಗಣೇಶ್ ಭಟ್ (Ganesh Bhat) ಅವರ ಕೆತ್ತನೆಯ ಬಾಲಕ ರಾಮ ವಿಗ್ರಹದ ಫೋಟೋ ಬಹಿರಂಗವಾಗಿದೆ. ಈ ವಿಗ್ರಹವನ್ನೂ ಕೃಷ್ಣ ಶಿಲೆಯಲ್ಲಿ ನಿರ್ಮಿಸಲಾಗಿದ್ದು, ಗಮನ ಸೆಳೆಯುತ್ತಿದೆ. ಇನ್ನು ರಾಜಸ್ಥಾನದ ಶಿಲ್ಪಿ ರೂಪಿಸಿದ ವಿಗ್ರಹವು ಬಿಳಿ ಅಮೃತ ಶಿಲೆಯಲ್ಲಿದೆ.
ಬೆಂಗಳೂರುವಾಸಿಯಾಗಿರುವ ಗಣೇಶ್ ಭಟ್ ಅವರು ಕಪ್ಪು ಶಿಲೆಯಲ್ಲಿ ಕೆತ್ತಿರುವ ಬಾಲ ರಾಮನ ವಿಗ್ರಹವು ನಿಂತಿರುವ ಭಂಗಿಯಲ್ಲಿದೆ. ಈ ವಿಗ್ರಹದ ಹಿಂದೆ ಕಮಾನಿನ ರೀತಿಯ ರಚನೆಯಿದ್ದು, ಕೈಯಲ್ಲಿ ಬಿಲ್ಲು ಬಾಣಗಳಿವೆ. ಕಮಾನಿನ ತುಂಬ ಸೂಕ್ಷ್ಮ ಕೆತ್ತನೆಗಳಿದ್ದು, ಅತ್ಯಾಕರ್ಷಕವವಾಗಿವೆ. ಕಮಲ ಪೀಠದ ಮೇಲೆ ರಾಮ ನಿಂತಿದ್ದು, ಕಂಗೊಳಿಸುತ್ತಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ, ಹೊನ್ನಾವರದ ಇಡಗುಂಜಿ ಮೂಲದ ಪ್ರಸ್ತುತ ಬೆಂಗಳೂರು ಬನಶಂಕರಿಯ ನಿವಾಸಿ ಗಣೇಶ್ ಭಟ್ಟ ದೇಶ, ವಿದೇಶಗಳಲ್ಲಿ ಹಲವು ಪ್ರಾತ್ಯಕ್ಷಿಕೆ, ಶಿಬಿರಗಳನ್ನು ಸಂಯೋಜಿಸಿ ಪ್ರಶಸ್ತಿ ಪಡೆದಿದ್ದು, ಶಿಲ್ಪಕಲೆಗೆ ಅವರ ಕೊಡುಗೆಯನ್ನು ಗಮನಿಸಿ ಅಯೋಧ್ಯೆಯ ಬಾಲರಾಮನ ವಿಗ್ರಹ ರಚನೆಗೆ ಆಹ್ವಾನ ಬಂದಿತ್ತು. ಮುಖ್ಯ ದೇವಾಲಯಕ್ಕಾಗಿ ಕೆತ್ತಲಾದ ಮೂರು ಬಾಲರಾಮನ ವಿಗ್ರಹಗಳಲ್ಲಿ ಗಣೇಶ್ ಭಟ್ಟ ಅವರು ಕೆತ್ತಿರುವ ಶಿಲ್ಪವೂ ಒಂದು. ದುರದೃಷ್ಟವಶಾತ್ ಇದನ್ನು ಆಯ್ಕೆ ಮಾಡಲಾಗಿಲ್ಲ.
ನಿಸ್ಸಂಶಯವಾಗಿ ಇದೊಂದು ಅದ್ಭುತ ಶಿಲ್ಪ! ಪ್ರಭಾವಳಿಯ ಮೇಲಿನ ಭಾಗದಲ್ಲಿ ಕಮಲದ ಕಾಂಡದ ಸುಳಿಗಳ ಒಳಗೆ ದಶಾವತಾರಗಳನ್ನು ಇರಿಸಲಾಗಿದೆ. ಕೀರ್ತಿಮುಖವು ಮೇಲ್ಭಾಗವನ್ನು ಅಲಂಕರಿಸುತ್ತದೆ. ಸೂರ್ಯ ರಾಮನ ಮೇಲಿನ ಗಂಟಿನ ಒಳಗೆ ಕುಳಿತಿದ್ದಾನೆ. ಹನುಮಂತ ಮತ್ತು ಗರುಡ ಪಾರ್ಶ್ವದೇವತೆಗಳಾಗಿ ನಿಂತಿದ್ದಾರೆ. ಮುದ್ದು ಮುಖದ ಬಾಲರಾಮನ ರೂಪವು ಚಿಕ್ಕ ಹುಡುಗನನ್ನು ಹೇಗೆ ಹೋಲುತ್ತದೆ ಎಂಬುದನ್ನು ಗಮನಿಸಿ. ಅದು ಪ್ರಾಚೀನ ಭಾರತೀಯ ಕಲೆಯ ಪಾಂಡಿತ್ಯವಾಗಿದೆ. ಮುಖ ದೈವಿಕತೆಯ ಮುಗ್ಧ ನಗುವನ್ನು ಹೊಂದಿದೆ. ಈ ಕಲಾಕೃತಿಯಲ್ಲಿ ಯಾವುದೂ ಅಪೂರ್ಣವಲ್ಲ. ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಬಾಲರಾಮನ ಮೂರ್ತಿಯ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರ ಜೊತೆಗೆ ಇಂತಹ ಅದ್ಭುತ ಕಲಾಕೃತಿಯ ನಿರ್ಮಾತೃ ಶಿಲ್ಪಿ ಗಣೇಶ್ ಭಟ್ ಅವರೂ ಕೂಡ ಅಭಿನಂದನಾರ್ಹರು.