Site icon Vistara News

Ram Mandir: ವಿಜಯಪುರ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ; 5 ದಿನದಲ್ಲಿ 61 ಮಕ್ಕಳ ಜನನ, ಅಲ್ಲೇ ನಾಮಕರಣ

vijayapura Hospital

ವಿಜಯಪುರ: ನಗರದಲ್ಲಿ ಸೋಮವಾರ ಜನಿಸಿದ ಮಕ್ಕಳಿಗೆ ಅಲ್ಲೇ ಅಲ್ಲೇ ತೊಟ್ಟಿಲು ಶಾಸ್ತ್ರ ಹಾಗೂ ನಾಮಕರಣ ಮಾಡಿದ ವಿಶಿಷ್ಟ ಕಾರ್ಯಕ್ಕೆ ನಗರದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಸಾಕ್ಷಿಯಾಗಿದೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ 5 ದಿನಗಳ ಕಾಲ ಉಚಿತ ಹೆರಿಗೆ ಸೌಲಭ್ಯ ನೀಡಿದ್ದ ಆಸ್ಪತ್ರೆಯು, ಅಲ್ಲಿ ಜನಿಸಿದ ಮಕ್ಕಳಿಗೆ ತೊಟ್ಟಿಲು ಶಾಸ್ತ್ರ ಹಾಗೂ ನಾಮಕರಣವನ್ನೂ ಮಾಡಿದೆ.

ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜನವರಿ 18 ರಿಂದ 22 ರವರೆಗೆ ಐದು ದಿನ ಸಂಪೂರ್ಣ ಉಚಿತ ಹೆರಿಗೆ ಸೌಲಭ್ಯವನ್ನು ಆಸ್ಪತ್ರೆ ಘೋಷಿಸಿತ್ತು. ಇದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಅಧ್ಯಕ್ಷರಾಗಿರುವ ಆಸ್ಪತ್ರೆಯಾಗಿದೆ. ಐದು ದಿನಗಳಲ್ಲಿ ಆಸ್ಪತ್ರೆಯಲ್ಲಿ ಜನಿಸಿದ ಮಕ್ಕಳ ಪೈಕಿ 4 ಮಕ್ಕಳಿಗೆ ಉಚಿತವಾಗಿ ತೊಟ್ಟಿಲು ಶಾಸ್ತ್ರ ಹಾಗೂ ನಾಮಕರಣ ಮಾಡಲಾಗಿದೆ.

Ram lalla

ಐದು ದಿನಗಳಲ್ಲಿ ಈವರೆಗೆ 61 ಉಚಿತ ಹೆರಿಗೆ ಮಾಡಿಸಲಾಗಿದೆ. ಈ ಪೈಕಿ ನಾಲ್ಕು ಮಕ್ಕಳಿಗೆ ಆಸ್ಪತ್ರೆಯಲ್ಲೇ ನಾಮಕರಣ ಮಾಡಲಾಗಿದೆ.

Ram lalla

ಮೂವರು ಗಂಡು ಮಕ್ಕಳ ಹೆಸರು ʼರಾಮʼ, ಹೆಣ್ಣು ಮಗು ʼಸೀತಾʼ

ಒಟ್ಟು ನಾಲ್ಕು ಮಕ್ಕಳಿಗೆ ನಾಮಕರಣ ಮಾಡಲಾಗಿದ್ದು, ಅದರಲ್ಲಿ ಮೂರು ಗಂಡು ಮಕ್ಕಳಿಗೆ ʼರಾಮʼ ಎಂದು ಹೆಸರಿಡಲಾಗಿದೆ. ಹೆಣ್ಣು ಮಗುವಿಗೆ ಸೀತಾ ಎಂದು ನಾಮಕರಣ ಮಾಡಲಾಗಿದೆ. ವೈದ್ಯರು, ಆಸ್ಪತ್ರೆ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ನಾಮಕರಣ ಮಾಡಲಾಗಿದೆ.

ರಾಮಲಲ್ಲಾ ಪ್ರತಿಷ್ಠಾಪನೆ ದಿನವೇ ಹೆರಿಗೆ; ಬೆಂಗಳೂರಲ್ಲಿ 60ಕ್ಕೂ ಹೆಚ್ಚು ಮಕ್ಕಳ ಜನನ

Ram lalla

ಬೆಂಗಳೂರು: ರಾಮಲಲ್ಲಾ ಪ್ರತಿಷ್ಠಾಪನೆ ದಿನದಂದು ಹೆರಿಗೆಗೆ ಸಿಲಿಕಾನ್ ಸಿಟಿಯ ಆಸ್ಪತ್ರೆಗಳಲ್ಲಿ ಭಾರಿ ಬೇಡಿಕೆ ಉಂಟಾಗಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ಐತಿಹಾಸಿಕ ದಿನದಂದು (ಜ.22) ಮಕ್ಕಳನ್ನು ಪಡೆಯಲು ಅನೇಕ ಪೋಷಕರು ಬಯಸಿದ್ದರು. ಇದೀಗ ರಾಜಧಾನಿಯಲ್ಲಿ ಸೋಮವಾರ ಸಂಜೆವರೆಗೆ 60ಕ್ಕೂ ಹೆಚ್ಚು ಮಕ್ಕಳು ಜನ್ಮ ಪಡೆದಿರುವುದು ಕಂಡುಬಂದಿದೆ.

ಅಯೋಧ್ಯೆ ರಾಮಮಂದಿರ ಪ್ರತಿಷ್ಠಾನೆಯ ಶುಭ ದಿನದಂದು ರಾಮನಂತಹ ಮಗು, ಸೀತೆಯಂತಹ ಮಗಳನ್ನು ಪಡೆಯಲು ಹಲವು ಪೋಷಕರು ಆಸಕ್ತಿ ವಹಿಸಿದ್ದರು. ಹೀಗಾಗಿ ರಾಜಧಾನಿಯಲ್ಲಿ ಇದುವರೆಗೂ 60ಕ್ಕೂ ಹೆಚ್ಚು ಶಿಶುಗಳು ಜನಿಸಿದ್ದಾರೆ.

ವಾಣಿವಿಲಾಸ್ ಆಸ್ಪತ್ರೆಯಲ್ಲಿ 28 ಕಂದಮ್ಮಗಳ ಜನನ, ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈವರೆಗೆ 4 ಶಿಶುಗಳ ಜನನವಾಗಿದೆ. ಈ ಪೈಕಿ 2 ಸಹಜ ಹೆರಿಗೆ, 2 ಸಿಸೇರಿಯೆನ್ ಆಗಿದೆ. ಇನ್ನು ಘೋಷಾ ಆಸ್ಪತ್ರೆಯಲ್ಲಿ ಒಟ್ಟು 6 ಮಕ್ಕಳು ಜನಿಸಿದ್ದು, 5 ನಾರ್ಮಲ್, 1 ಸಿಸೇರಿಯನ್ ಹೆರಿಗೆ ಆಗಿದೆ. ಅದೇ ರೀತಿ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ 25ಕ್ಕೂ ಅಧಿಕ ಮಕ್ಕಳ ಜನನವಾಗಿದೆ.

ಇದನ್ನೂ ಓದಿ | Ram Mandir: Selfie With ರಾಮೋತ್ಸವದಲ್ಲಿ ಮಿಂಚಿದ ಬಾಲರಾಮರು; ಮದುವೆ ಮನೆಯಲ್ಲೂ ರಾಮಜಪ

ಖಾಸಗಿ ಆಸ್ಪತ್ರೆಗಳಲ್ಲಿ ಡೆಲಿವರಿ ಬಗ್ಗೆ ಮಾಹಿತಿ ನೀಡದಂತೆ ಪೋಷಕರು ತಾಕೀತು ಮಾಡಿದ ಹಿನ್ನೆಲೆಯಲ್ಲಿ ಜನಿಸಿದ ಹಲವು ಮಕ್ಕಳ ಮಾಹಿತಿ ನೀಡಲು ಖಾಸಗಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ.

Exit mobile version