Site icon Vistara News

ಬೆಂಗಳೂರಲ್ಲಿ ಐವರು ಶಂಕಿತ ಉಗ್ರರ ಬಂಧನ; ಭಾರಿ ವಿಧ್ವಂಸಕ ಕೃತ್ಯಕ್ಕೆ ನಡೆದಿತ್ತು ಪ್ಲ್ಯಾನ್​!

suspected terrorists

ಬೆಂಗಳೂರು: ನಗರದಲ್ಲಿ ಐವರು ಶಂಕಿತ ಉಗ್ರರನ್ನು (Suspected Terrorists) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ Suspected Terrorists Arrested). ಈ ಶಂಕಿತ ಉಗ್ರರು ಬೆಂಗಳೂರು ನಗರವನ್ನು ಟಾರ್ಗೆಟ್ ಮಾಡಿದ್ದರು. ಇಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪ್ಲ್ಯಾನ್​ ರೂಪಿಸಿದ್ದರು. ಎಲ್ಲರೂ ಸ್ಥಳೀಯರೇ ಆಗಿದ್ದಾರೆ. ಆದರೆ ಉಗ್ರರ ಜತೆ ಸಂಪರ್ಕದಲ್ಲಿದ್ದುಕೊಂಡು, ಬಾಂಬ್ ಸ್ಫೋಟಿಸುವ, ದಾಳಿ ನಡೆಸುವ ಬಗ್ಗೆ ಟ್ರೇನಿಂಗ್ ಪಡೆದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಾಗೇ, ಬೆಂಗಳೂರಿನ ಎಲ್ಲ ಕಡೆಗಳಲ್ಲೂ ಶಂಕಿತ ಉಗ್ರರು ಸಕ್ರಿಯರಾಗಿದ್ದು, ಎಲ್ಲೆಲ್ಲಿ ಬ್ಲಾಸ್ಟ್ ಮಾಡಬೇಕು ಎಂದು ಸರಿಯಾಗಿ ಸ್ಕೆಚ್​ ಹಾಕಿದ್ದರು ಎಂದೂ ಹೇಳಲಾಗಿದೆ.

ಇದೀಗ ಸಿಸಿಬಿ ವಶದಲ್ಲಿರುವ ಐವರೂ ಶಂಕಿತ ಉಗ್ರರು ರೌಡಿಶೀಟರ್​ಗಳಾಗಿದ್ದವರು. ಆರ್​.ಟಿ.ನಗರದಲ್ಲಿ ಕೊರೊನಾ ಸಮಯದಲ್ಲಿ ಒಬ್ಬನನ್ನು ಕಿಡ್ನ್ಯಾಪ್ ಮಾಡಿ, ಹತ್ಯೆ ಮಾಡಿದ್ದರು. ಆಗ ಜೈಲು ಸೇರಿದ್ದ ಈ ರೌಡಿ ಶೀಟರ್​ಗಳಿಗೆ ಅದಾಗಲೇ ಅರೆಸ್ಟ್ ಆಗಿದ್ದ ಶಂಕಿತ ಉಗ್ರರ ಪರಿಚಯ ಜೈಲಿನಲ್ಲಿ ಆಗಿತ್ತು. ಅವರಿಂದಲೂ ಹಲವರು ಮಾಹಿತಿಗಳನ್ನು ಸಂಗ್ರಹಿಸಿದ್ದರು. ಎಲ್ಲ ರೀತಿಯ ವಿಧ್ವಂಸಕ ಕೃತ್ಯದ ತರಬೇತಿ ಪಡೆದಿದ್ದರು. ಜೈಲಿಂದ ಹೊರಬಂದ ಬಳಿಕ ನಗರದ ವಿವಿಧ ಭಾಗದಲ್ಲಿ ಬ್ಲಾಸ್ಟ್ ಮಾಡಲು ಕಾಯುತ್ತಿದ್ದರು. ಆದರೆ ಶಂಕಿತ ಉಗ್ರರಿಂದ ಉಂಟಾಗಬಹುದಾಗಿದ್ದ ಒಂದು ದೊಡ್ಡಮಟ್ಟದ ಅಪಾಯವನ್ನು ಸಿಸಿಬಿ ಪೊಲೀಸರು ತಪ್ಪಿಸಿದ್ದಾರೆ. ಶಂಕಿತರನ್ನು ಅಜ್ಞಾತ ಸ್ಥಳದಲ್ಲಿ ಇಟ್ಟು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: NIA: ಜೈಷೆ ಸಂಘಟನೆಯ ಶಂಕಿತ ಉಗ್ರನನ್ನು ಬಂಧಿಸಿದ ಎನ್ಐಎ, ಏನೆಲ್ಲ ಮಾಹಿತಿ ದೊರೆತಿದೆ?

ಸುಮಾರು ಹತ್ತಕ್ಕೂ ಹೆಚ್ಚು ಶಂಕಿತ ಉಗ್ರರು ಸೇರಿ ಬೃಹತ್ ಮಟ್ಟದ ಸ್ಫೋಟ ನಡೆಸಲು ಯೋಜನೆ ರೂಪಿಸುತ್ತಿರುವ ಬಗ್ಗೆ ಬೆಂಗಳೂರು ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಅಲರ್ಟ್​ ಆಗಿ ಆ ಶಂಕಿತರ ಲೊಕೇಶನ್​​ನ್ನು ಪೊಲೀಸರು ಟ್ರೇಸ್ ಮಾಡಿದ್ದರು. ಇವರಿಂದ ಹಲವು ಉಪಕರಣಗಳು, ಸ್ಫೋಟಕ್ಕೆ ಬಳಸುವ ಕಚ್ಚಾ ಸಾಮಗ್ರಿಗಳು ಸಿಕ್ಕಿದ್ದಾಗಿ ಮಾಹಿತಿ ಲಭ್ಯವಾಗಿದೆ. ಹಾಗೇ ಇನ್ನಷ್ಟು ಶಂಕಿತ ಉಗ್ರರಿಗಾಗಿ ಸಿಸಿಬಿ ಪೊಲೀಸರ ಮತ್ತೊಂದು ಟೀಂ ಹುಡುಕಾಟ ನಡೆಸುತ್ತಿದೆ.

Exit mobile version