ಬೆಂಗಳೂರು: ನಗರದ ಕೆ.ಪಿ.ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ವಿಶ್ವವಾಣಿ ಪುಸ್ತಕ ಪ್ರಕಾಶನ ಸಂಸ್ಥೆಯಿಂದ ಜುಲೈ 22ರಂದು ಬೆಳಗ್ಗೆ 10.30ಕ್ಕೆ 6 ಪುಸ್ತಕಗಳ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ರಚನೆಯ 3 ಪುಸ್ತಕ ಹಾಗೂ ವಿಶ್ವವಾಣಿಯ ಮೂವರು ಅಂಕಣಕಾರರು ಬರೆದ ತಲಾ ಒಂದು ಪುಸ್ತಕ ಸೇರಿ ಒಟ್ಟು 6 ಪುಸ್ತಕಗಳನ್ನು (Vishwavani Pustaka) ಬಿಡುಗಡೆ ಮಾಡಲಾಗುತ್ತದೆ.
ಸಿಎಂ ಸಿದ್ದರಾಮಯ್ಯ ಅವರು ಪುಸ್ತಕಗಳ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಚಿಕ್ಕಬಳ್ಳಾಪುರ ಶಾಸಕ, ಪರಿಶ್ರಮ ನೀಟ್ ಅಕಾಡೆಮಿ ಸಂಸ್ಥಾಪಕ ಪ್ರದೀಪ್ ಈಶ್ವರ್ ಅವರು ಭಾಗವಹಿಸಲಿದ್ದಾರೆ. ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಉಪಸ್ಥಿತರಿರಲಿದ್ದಾರೆ.
ಇದನ್ನೂ ಓದಿ | ಗ್ಲೋಕಲ್ ಲೋಕ ಅಂಕಣ: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಯಂತ್ರಿಸುವುದು ಹೇಗೆ?
ಬಿಡುಗಡೆಯಾಗುವ ಪುಸ್ತಕಗಳು
ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್ ಅವರ ಸಂಪಾದಕರ ಸದ್ಯಶೋಧನೆ-1, ಸಂಪಾದಕರ ಸದ್ಯಶೋಧನೆ-2, ಸಂಪಾದಕರ ಸದ್ಯಶೋಧನೆ-3 ಪುಸ್ತಕ, ಕಿರಣ್ ಉಪಾಧ್ಯಾಯ ಅವರ ಹೊರದೇಶವಾಸಿ, ರೂಪಾ ಗುರುರಾಜ್ ಅವರ ಒಂದೊಳ್ಳೆ ಮಾತು-2, ಶಿಶಿರ್ ಹೆಗಡೆ ಅವರ ಶಿಶಿರ ಕಾಲ ಪುಸ್ತಕ ಬಿಡುಗಡೆಯಾಗಲಿದೆ.