Site icon Vistara News

SSLC Exam | ಈ ವರ್ಷ ಶೇ.75 ರಷ್ಟು ಹಾಜರಾತಿ ಕಡ್ಡಾಯ

sslc karnataka

ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶೇ. ೭೫ರಷ್ಟು ಹಾಜರಾತಿ ಹೊಂದಿದ್ದಲ್ಲಿ ಮಾತ್ರ ಮುಂದೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು (SSLC Exam) ಅವಕಾಶ ನೀಡಲಾಗುತ್ತದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಕೋವಿಡ್‌-೧೯ ಕಾರಣದಿಂದ ಕಳೆದ ಎರಡು ವರ್ಷ ಪರೀಕ್ಷೆಗೆ ಹಾಜರಾಗಲು ಕಡ್ಡಾಯ ಹಾಜರಾತಿ ಹೊಂದಿರಬೇಕೆಂಬ ನಿಯಮವನ್ನು ರದ್ದುಪಡಿಸಲಾಗಿತ್ತು. ಆದರೆ ಈ ವರ್ಷ ನಿಗದಿಯಂತೆ ಶಾಲೆಗಳನ್ನು ತೆರೆಯಲಾಗಿರುವುದರಿಂದ ಕಡ್ಡಾಯ ಹಾಜರಿಯನ್ನು ಮರಳಿ ನಿಗದಿಪಡಿಸಲಾಗಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಆದೇಶದ ಪ್ರತಿ

sslc exam

“ಈ ವರ್ಷ ೨೦೨೨ರ ಮೇ ೧೬ರಿಂದಲೇ ಪೂರ್ಣ ಪ್ರಮಾಣದಲ್ಲಿ ಶಾಲೆಗಳನು ಭೌತಿಕವಾಗಿ ಪ್ರಾರಂಭಿಸಲಾಗಿದೆ. ಈ ಹಿನ್ನೆಲೆಯೆಲ್ಲಿ ಮಂಡಳಿಯ ಕಾಯ್ದೆ -೧೯೬೬ ನಿಯಮ-೩೭ರನ್ವಯ ೨೦೨೨-೨೩ನೇ ಸಾಲಿನಿಂದ ಶಾಲಾ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕುಳಿತುಕೊಳ್ಳಲು ಶಾಲೆಯ ಕಾರ್ಯ ನಿರ್ವಹಿಸಲು ನಿಗದಿಪಡಿಸಿರುವ ದಿನಗಳಿಗೆ ಅನುಸಾರ ಕನಿಷ್ಠ ಶೇ. ೭೫ ರಷ್ಟು ಹಾಜರಾತಿ ಕಡ್ಡಾಯಗೊಳಿಸಿರುವುದನ್ನು ಯಥಾ ರೀತಿ ಮುಂದುವರಿಸಲಾಗಿದೆʼʼ ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | ಎಸ್ಸೆಸ್ಸೆಲಿ ಪೂರಕ ಪರೀಕ್ಷೆ ಆರಂಭ; ಆಗಸ್ಟ್‌ ಮೊದಲ ವಾರ ಫಲಿತಾಂಶ ಪ್ರಕಟ

Exit mobile version