ಮಂಗಳೂರು : ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಗುರುವಾರ(ಜೂನ್ 9) ರಂದು ರಾಜ್ಯದೆಲ್ಲೆಡೆ ಪ್ರೀಮಿಯರ್ ಶೋ ನಡೆದಿತ್ತು. ಈ ಸಿನಿಮಾದಿಂದ ಸ್ಫೂರ್ತಿ ಪಡೆದು ಮಂಗಳೂರು ಪೊಲೀಸ್ ಶ್ವಾನದಳದ ನಾಯಿಗೆ ʼಚಾರ್ಲಿʼ ಎಂದು ನಾಮಕರಣ ಮಾಡಿದ್ದಾರೆ.
ಗುರುವಾರದಂದು ಶ್ವಾನದಳದ ಸಿಬ್ಬಂದಿಗಳು ಪ್ರೀಮಿಯರ್ ಶೋ ವೀಕ್ಷಿಸಿದ್ದರು. ಶ್ವಾನ ಹಾಗೂ ಮನುಷ್ಯನ ಸಂಬಂಧದ ಕತೆ ಹೊಂದಿರುವ 777 ಚಾರ್ಲಿ ಚಿತ್ರದಿಂದ ಪ್ರಭಾವಿತರಾಗಿದ್ದರು. ಹೀಗಾಗಿ ಮೂರು ತಿಂಗಳ ಲ್ಯಾಬ್ರೊಡರ್ ರಿಟ್ರಿವರ್ ಶ್ವಾನಕ್ಕೆ ಚಾರ್ಲಿ ಎಂದು ನಾಮಕರಣ ಮಾಡಿದ್ದಾರೆ.
ಇದನ್ನೂ ಓದಿ | 777 ಚಾರ್ಲಿ: ಚಾರ್ಲಿನಾ ಭೇಟಿ ಮಾಡಿದ್ರಾ ಸಾಯಿಪಲ್ಲವಿ? ಚಿತ್ರಕ್ಕೆ ಸಿಗುತ್ತಿದೆ ಭರ್ಜರಿ ರೆಸ್ಪಾನ್ಸ್
ಮಾರ್ಚ್‌ನಲ್ಲಿ ಈ ಶ್ವಾನ ಜನಿಸಿತ್ತು. ಈ ಲ್ಯಾಬ್ರೊಡರ್ ರಿಟ್ರಿವರ್ ಶ್ವಾನವನ್ನು ಬಂಟ್ವಾಳದಿಂದ ₹20,000 ನೀಡಿ ಖರೀದಿಸಲಾಗಿತ್ತು. ಮುಂದೆ 3-4 ತಿಂಗಳ ಬಳಿಕ ಬೆಂಗಳೂರು ಸೌತ್ ಸಿಆರ್ ನಲ್ಲಿ ಆರು ತಿಂಗಳ ಕಾಲ ಈ ಶ್ವಾನಕ್ಕೆ ತರಬೇತಿ ನೀಡಲಾಗುತ್ತದೆ. ಬಳಿಕ ಈ ಶ್ವಾನವು ಬಾಂಬ್ ನಿಷ್ಕ್ರಿಯ ಹಾಗೂ ಪತ್ತೆ ಮಾಡಲು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುತ್ತದೆ ಎಂದು ಸಿಎಆರ್ ಎಸಿಪಿ ಎಂ.ಎ. ಉಪಾಸೆ ಹೇಳಿದ್ದಾರೆ.
ಇದನ್ನೂ ಓದಿ | 777 ಚಾರ್ಲಿ : ಮೇನಕಾ ಗಾಂಧಿ ಮೆಚ್ಚಿದ ಚಾರ್ಲಿ, ಅಭಿಮಾನಿಗಳು ಹೇಳಿದ್ದೇನು?