ಯಲ್ಲಾಪುರ: ತಾಲೂಕಿನ ಅಲ್ಕೇರಿ ಗೌಳಿವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು (77th Independence Day) ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮದನೂರು ಗ್ರಾಮ ಪಂಚಾಯಿತಿ ವತಿಯಿಂದ ಶಾಲೆಗೆ ಸುಮಾರು 30,000 ರೂ ಬೆಲೆ ಬಾಳುವ ಟೇಬಲ್, ಕುರ್ಚಿ ಹಾಗೂ ಕರ್ಟನ್‌ಗಳನ್ನು ಮತ್ತು ಗ್ರಾಮದ ಯುವಕರಾದ ನವಲು ಬೈರು ಜೋರೆ, ಜಾನು ಜಿಮ್ಮು ಜೋರೆ, ಬಾಬು ರಾಮು ಜೋರೆ ಧೋಂಡು ಟಾರಾ, ರಾಮು ಜಾನ್ಕರ, ಆವು ಜಾನ್ಕರ ಅವರಿಂದ ಸುಮಾರು 10000 ರೂ ಬೆಲೆ ಬಾಳುವ ಧ್ವನಿವರ್ಧಕದ ಸೆಟ್‌ಅನ್ನು ನೀಡಿದರು. ಜತೆಗೆ ಜುಮ್ಮು ಬಾಬು ಜೋರೆ ಎಂಬುವವರೂ ಸಹ ಎರಡು ಖುರ್ಚಿಗಳನ್ನು ಶಾಲೆಗೆ ದೇಣಿಗೆಯಾಗಿ ನೀಡಿದರು.
ಇದನ್ನೂ ಓದಿ: Mahila Satyagraha Smaraka: ಧೀರ ಮಹಿಳೆಯರ ಹೋರಾಟ ನೆನಪಿಸುವ ಮಾವಿನಗುಂಡಿಯ ಮಹಿಳಾ ಸತ್ಯಾಗ್ರಹ ಸ್ಮಾರಕ
ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಹನುಮಂತ ವಾರೇಗೌಡ, ನವಲ ವಿಠ್ಠು ಜೋರೆ, ಮನೋಹರ್ ಬಾಜಾರಿ, ಸುರೇಶ್ ಬಾಜಾರಿ, ದೀಪಕ ಮಲಗೋಂಡೆ ಕೊಯಾ ಮಲಗೊಂಡೆ, ಸೋನು ಜಾನ್ಕರ, ಸಕ್ಕು ಯಮ್ಕರ್, ಊರಿನ ಯುವಕರು, ಹಿರಿಯರು, ಅಂಗನವಾಡಿ ಕಾರ್ಯಕರ್ತೆಯರು, ಅಡಿಗೆ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ: Weather Report : ರಾಜ್ಯದ ಹಲವೆಡೆ 50-50 ಮಳೆಯಾಟ!
ಶಾಲೆಯ ಮುಖ್ಯ ಶಿಕ್ಷಕ ಗಂಗಾಧರ ಲಮಾಣಿ ಸ್ವಾಗತಿಸಿದರು. ಶಿಕ್ಷಕಿ ಶೋಭಾ ಗುನಗಿ ನಿರ್ವಹಿಸಿದರು.