ರಿಪ್ಪನ್‌ಪೇಟೆ: ಪಟ್ಟಣದ ಎಸ್.ಎಸ್.ಎಫ್. ಸಂಘಟನೆ ವತಿಯಿಂದ ತಅಝೀಜುಲ್ ಅರಬ್ಬಿಕ್ ಮದರಸ ವಿದ್ಯಾರ್ಥಿಗಳಿಂದ ನಾವೆಲ್ಲಾ ಭಾರತೀಯರು ಎಂಬ ಘೋಷಣೆಯೊಂದಿಗೆ ಪಟ್ಟಣದಲ್ಲಿ ಸೈಕಲ್ ರ‍್ಯಾಲಿಯನ್ನು (Cycle rally) ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ವಿನಾಯಕ ವೃತ್ತದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಮುನೀರ್ ಸಖಾಫಿ ಮಾತನಾಡಿ, ಎಸ್.ಎಸ್.ಎಫ್. ಸಂಘಟನೆಯಿಂದ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜ್ಯಾದ್ಯಂತ ರ‍್ಯಾಲಿಯನ್ನು ಆಯೋಜಿಸಲಾಗಿದೆ.
ಎಸ್.ಎಸ್.ಎಫ್. ಸಂಘಟನೆಯು ಕರ್ನಾಟಕ ರಾಜ್ಯವಲ್ಲದೇ ದೇಶಾದ್ಯಂತ ಕಳೆದ 50 ವರ್ಷಗಳಿಂದ ಯಾವುದೇ ಗುಂಪುಗಾರಿಕೆ ನಡೆಸದೇ , ಕಳಂಕವಿಲ್ಲದೇ, ಕಪ್ಪುಚುಕ್ಕೆಯಿಲ್ಲದೇ ನಡೆದುಕೊಂಡು ಬರುತ್ತಿರುವ ಸಂಸ್ಥೆಯೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದರು.
ಇದನ್ನೂ ಓದಿ: Independence Day 2023: ಸ್ವಾತಂತ್ರ್ಯೋತ್ಸವ ದಿನ ನೋಡಲೇಬೇಕಾದ ಕನ್ನಡ ಚಿತ್ರಗಳಿವು
ಹಳ್ಳಿ ಹಳ್ಳಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಶಾಂತಿಯುತವಾದ ವಾತಾವರಣ ನಿರ್ಮಾಣವಾಗಬೇಕು, ನಾವೆಲ್ಲಾರೂ ಭಾರತೀಯರು ಎನ್ನುವುದೇ ಎಸ್.ಎಸ್.ಎಫ್. ನ ಮೂಲ ಉದ್ದೇಶವಾಗಿದೆ ಎಂದರು.
ರ‍್ಯಾಲಿ ಪ್ರಾರಂಭಕ್ಕೂ ಮುನ್ನ ಎಲ್ಲಾ ಮಕ್ಕಳನ್ನುದ್ದೇಶಿಸಿ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್.ಪಿ. ಮಾತನಾಡಿದರು.
ಈ ವೇಳೆ ಗ್ರಾ.ಪಂ. ಸದಸ್ಯ ಆಸೀಫ್ ಭಾಷಾ, ಜನಪರ ಹೋರಾಟಗಾರ ಆರ್.ಎನ್. ಮಂಜುನಾಥ್ ರ‍್ಯಾಲಿಯಲ್ಲಿ ಮಾತನಾಡಿದರು.
ಇದನ್ನೂ ಓದಿ: Mobile Addiction : ಮಕ್ಕಳಿಗಿನ್ನು ಮೊಬೈಲ್ ಮುಟ್ಟಿದರೆ ಮುನಿ; ಇದು ಹೊಸ APP ಕಹಾನಿ!
ಈ ಸಂಧರ್ಭದಲ್ಲಿ ಎಸ್.ಎಸ್.ಎಫ್. ಸಂಘಟನೆಯ ರಿಪ್ಪನ್‌ಪೇಟೆ ಶಾಖೆ ಅಧ್ಯಕ್ಷ ಅಜ್ಮಲ್ , ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ರಫಿ, ಕಾರ್ಯದರ್ಶಿ ಶಫಿವುಲ್ಲಾ, ಮುಖಂಡರಾದ ಆರ್.ಎಸ್. ಶಂಶುದ್ದೀನ್, ಹನೀಫ್ ಹಾಗೂ ಇನ್ನಿತರರಿದ್ದರು.