ಶಿವಮೊಗ್ಗ: ಎಂಟು ವರ್ಷದ ಬಾಲಕನೊಬ್ಬನ ಪೊಲೀಸ್ ಅಧಿಕಾರಿಯಾಗಬೇಕು ಎಂಬ ಆಸೆಯನ್ನು ನಗರದ (Shivamogga News) ದೊಡ್ಡಪೇಟೆ ಪೊಲೀಸರು ಪೂರೈಸಿದ್ದಾರೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕನಿಗೆ ಪೊಲೀಸ್ ಅಧಿಕಾರಿಯಾಗಬೇಕು ಎಂಬ ಆಸೆ ಇತ್ತು. ಹೀಗಾಗಿ ಬಾಲಕನಿಗೆ 1 ಗಂಟೆಯ ಮಟ್ಟಿಗೆ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಎಸ್‌ಪಿ ಮಿಥುನ್ ಕುಮಾರ್ ಅವಕಾಶ ಮಾಡಿಕೊಟ್ಟಿದ್ದಾರೆ.
ನಗರದ ಸೂಳೆಬೈಲು ನಿವಾಸಿ ಅಜಾನ್ ಖಾನ್ (8) ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಹೀಗಾಗಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಬಾಲಕನ ಆಸೆಯನ್ನು ಪೊಲೀಸ್ ಇಲಾಖೆ ಈಡೇರಿಸಿದ್ದು, ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ | KILLER BMTC : ಬಿಎಂಟಿಸಿ ಬಸ್ ಹರಿದು ದುರಂತ; ಅಪ್ಪನೊಂದಿಗೆ ಶಾಲೆಗೆ ಹೋಗುತ್ತಿದ್ದ ಪುಟ್ಟ ಮಗು ಸಾವು
ನಗರದ ದೊಡ್ಡಪೇಟೆ ಠಾಣೆಯಲ್ಲಿ 1 ಗಂಟೆ ಅವಧಿಗೆ ಸಾಂಕೇತಿಕವಾಗಿ ಇನ್ಸ್‌ಪೆಕ್ಟರ್ ಹುದ್ದೆಯನ್ನು ಅಜಾನ್ ಖಾನ್ ಅಲಂಕರಿಸಿದ್ದ. ಪೊಲೀಸ್ ಸಮವಸ್ತ್ರದಲ್ಲಿ ಬಂದ ಅಜಾನ್ ಖಾನ್‌ನನ್ನು ಎಸ್‌ಪಿ ಮಿಥುನ್ ಕುಮಾರ್ ಸ್ವಾಗತಿಸಿದರು. ನಂತರ ವಿಸಿಟರ್ ಪುಸ್ತಕದಲ್ಲಿ ಸಹಿ ಹಾಕಿದ ಅಜಾನ್ ಖಾನ್, ಬೆಲ್ ಮಾಡಿ ಎಲ್ಲ ಸಿಬ್ಬಂದಿಯನ್ನೂ ಕೊಠಡಿಗೆ ಬರುವಂತೆ ಸೂಚಿಸಿದ. ಸಿಬ್ಬಂದಿ ಸಮಸ್ಯೆ ಆಲಿಸಿದ ಬಳಿಕ ಸಾಂದರ್ಭಿಕ ರಜೆ ಕೋರಿದ ಸಿಬ್ಬಂದಿಗೆ ಪುಟಾಣಿ ಇನ್ಸ್‌ಪೆಕ್ಟರ್ ಒಕೆ ಎಂದು ಹೇಳಿ ನಂತರ ಠಾಣೆಯ ಜೈಲು ವೀಕ್ಷಿಸಿದ್ದು ಕಂಡುಬಂತು.