ಬಾಗಲಕೋಟೆ: ಐಸಿಯು ಬೆಡ್ ಮೇಲಿದ್ದ ಬಾಲಕ, ಸಾವು ಬದುಕಿನ ಹೋರಾಟದ ನಡುವೆಯೂ ಸಂಗೀತಕ್ಕೆ ಕೈಯಾಡಿಸಿರುವ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಜಾನಪದ ಹಾಡಿಗೆ ತಲೆದೂಗಿರುವ ಬಾಲಕ, ಹಾಡಿಗೆ ತಕ್ಕಂತೆ ಕೈಗಳನ್ನು ಕುಣಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಅಗಿದೆ.
ಪ್ರಜ್ಞೆ ಇಲ್ಲದಿದ್ದರೂ ಜಾನಪದ ಹಾಡಿಗೆ ಬಾಲಕ ಸ್ಪಂದಿಸಿದ್ದು, “ನಾ ಡ್ರೈವರ್, ನೀ ನನ್ನ ಲವರ್ʼʼ ಹಾಡಿಗೆ ಕೈಯಾಡಿಸಿದ್ದಾನೆ. ಇದನ್ನು ನೋಡಿ ಅಲ್ಲಿದ್ದ ಮಹಿಳೆಯೊಬ್ಬರು ನಕ್ಕಿದ್ದಾರೆ. ಐಸಿಯುನಲ್ಲಿನ ಬಾಲಕನ ಹೆಸರು, ವಿಳಾಸ, ಏನಾಗಿದೆ ಎಂಬುವುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಇದನ್ನೂ ಓದಿ | Video Viral: ಫ್ರೀ ಬಸ್‌ಗಾಗಿ ದಾರಿ ಕಾದು ನಿಂತ ಆನೆ; ಸೀಟು ಬಿಟ್ಟುಕೊಡದೇ ಕಿರುಚಿದ ಮಹಿಳೆಯರು!
ಅಣ್ಣಾವ್ರ ಹಾಡು ಹಾಡಿ ಶಕ್ತಿ ಯೋಜನೆ ಪರ ಪ್ರಚಾರ ಮಾಡಿದ ಕಂಡಕ್ಟರ್
ರಾಯಚೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿರುವ ಹಿನ್ನೆಲೆಯಲ್ಲಿ ಸಾರಿಗೆ ಬಸ್‌ಗಳು ತುಂಬಿತುಳುಕುತ್ತಿವೆ. ಈ ನಡುವೆ ಸಾರಿಗೆ ಬಸ್‌ನಲ್ಲಿ ನಿರ್ವಾಹಕರೊಬ್ಬರು, ಡಾ.ರಾಜಕುಮಾರ್ ಅವರ ಸಿನಿಮಾ ಹಾಡುಗಳನ್ನು ಬಳಸಿಕೊಂಡು ಸರ್ಕಾರದ ಶಕ್ತಿಯೋಜನೆ ಬಗ್ಗೆ ಹಾಡುತ್ತಾ, ಪ್ರಯಾಣಿಕರ ಗಮನ ಸೆಳೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗಿದೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರ ಗ್ರಾಮದ ಚಾಲಕ ಹಾಗೂ ನಿರ್ವಾಹಕ ಗುರು ದೇವರಮನಿ ಹಾಡು ಹಾಡಿದವರು. ಬಸ್‌ನಲ್ಲೇ ಹಾಡು ಹಾಡುತ್ತಾ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮಾಡಿರುವ ಇವರು, ಶಕ್ತಿ ಯೋಜನೆ ಬಗ್ಗೆ ವಿಭಿನ್ನ ರೀತಿಯಲ್ಲಿ ಕ್ಯಾಂಪೇನ್ ಮಾಡಿದ್ದಾರೆ. ಅಣ್ಣಾವ್ರ ಹಾಡುಗಳನ್ನು ಹಾಡುವ ಮೂಲಕ ಸರ್ಕಾರಿ ಯೋಜನೆ ಬಗ್ಗೆ ಮಹಿಳಾ ಪ್ರಯಾಣಿಕರಲ್ಲಿ ಅರಿವು ಮೂಡಿಸಿದ್ದಾರೆ.
ಇದನ್ನೂ ಓದಿ | Video Viral: ಬಸ್‌ನಲ್ಲೇ ಬಡಿದಾಡಿಕೊಂಡ ನಿರ್ವಾಹಕ- ಮಹಿಳೆಯರು; ಕಂಡಕ್ಟರ್‌ಗೆ ನಾರಿಯರ ಏಟು ಉಚಿತ!
ಮಹಿಳೆಯರಿಗೆಲ್ಲರಿಗೂ ಸಾರಿಗೆ ಬಸ್‌ನಲ್ಲಿ ಉಚಿತ ಪ್ರಯಾಣವಿರಲಿದೆ. ಇದು ಸಿದ್ದರಾಮಯ್ಯ ಅವರ ಶಕ್ತಿ ಯೋಜನೆ. ಆದರೆ, ಆಧಾರ್ ಕಾರ್ಡ್ ತೋರಿಸಬೇಕಷ್ಟೆ ಎಂದು ಹೇಳಿರುವ ಕಂಡಕ್ಟರ್, “ಎಲ್ಲಾದರೂ ಇರು, ಎಂತಾದರೂ ಇರು, ಎಂದಿಂದಿಗೂ ನೀ ಬಸ್‌ನಲ್ಲೇ ಫ್ರೀಯಾಗಿ ಪ್ರಯಾಣ ಮಾಡುತ್ತಿರು” ಎಂದು ಹಾಡುವ ಮೂಲಕ ಶಕ್ತಿ ಯೋಜನೆ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.