Site icon Vistara News

Praneek: 224 ವಿಧಾನಸಭೆ ಕ್ಷೇತ್ರ, ಅಣ್ಣಾವ್ರ 205 ಸಿನಿಮಾ ಹೆಸರು; ಸ್ಮರಣ ಶಕ್ತಿಯಿಂದ ಗಮನ ಸೆಳೆದ ಬಾಲಕ ಪ್ರಣೀಕ್‌

Praneek@ chikkamagaluru

Praneek@ chikkamagaluru

ಚಿಕ್ಕಮಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳು, ಡಾ. ರಾಜ್‌ಕುಮಾರ್ ಅಭಿನಯದ 205 ಕನ್ನಡ ಸಿನಿಮಾಗಳು, ಎಲ್ಲ ರಾಜ್ಯಗಳು ಜತೆಗೆ ಅವುಗಳ ಮುಖ್ಯಮಂತ್ರಿ ಹೆಸರನ್ನು ಅರಳು ಹುರಿದಂತೆ ಪಟಪಟನೆ ಹೇಳುವ ಮೂಲಕ ಕಾಫಿ ನಾಡಿನ ಬಾಲಕನೊಬ್ಬ (Praneek) ಜಿಲ್ಲಾದ್ಯಂತ ಮನೆ ಮಾತಾಗಿದ್ದಾನೆ.

ಹೌದು, ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಬಾಲಕ ಪ್ರಣೀಕ್ ತನ್ನ ಸ್ಮರಣ ಶಕ್ತಿಯಿಂದ ಇಡೀ ಜಿಲ್ಲೆಯ ಗಮನ ಸೆಳೆದಿದ್ದಾನೆ. ಕಳಸ ಬಳಿಯ ಬಾಳೆ ಖಾನ್ ಗ್ರಾಮದ ಜೀಪ್ ಚಾಲಕ ಕೇಶವ ಮತ್ತು ಪುಷ್ಪ ದಂಪತಿಯ ಪುತ್ರ 9 ವರ್ಷದ ಪ್ರಣೀಕ್ ಸಾಧನೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳಸದ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ 3ನೇ ತರಗತಿ ಓದುತ್ತಿರುವ ಬಾಲಕ ಪ್ರಣೀಕ್‌ಗೆ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಹೆಸರು, ಡಾ.ರಾಜಕುಮಾರ್ ಅಭಿನಯದ 205 ಸಿನಿಮಾಗಳ ಹೆಸರು, ದೇಶದ ರಾಜ್ಯ ಹಾಗೂ ಮುಖ್ಯಮಂತ್ರಿಗಳ ಹೆಸರನ್ನು ಅರಳು ಹುರಿದಂತೆ ಪಟ ಪಟನೆ ಹೇಳುವುದು ಸಲೀಸು. ಅಷ್ಟೇ ಅಲ್ಲದೆ ಕನ್ನಡ ಸಾಹಿತ್ಯ ಸಮ್ಮೇಳನ ಈವರೆಗೂ ಸಮ್ಮೇಳನ ಅಧ್ಯಕ್ಷರಾಗಿದ್ದವರ ಹೆಸರನ್ನು ಒಂಚೂರು ತಪ್ಪಿಲ್ಲದೆ ಎಳೆ ವಯಸ್ಸಿನಲ್ಲಿ ಮರೆಯದೆ ಹೇಳುತ್ತಾನೆ.

ಇದನ್ನೂ ಓದಿ | Bidar News: ದುಶ್ಚಟಗಳನ್ನು ನಮ್ಮ ಜೋಳಿಗೆಗೆ ಹಾಕಿ; ತೊಗಲೂರಲ್ಲಿ ಹೀಗೊಂದು ವಿಶಿಷ್ಟ ಕಾರ್ಯಕ್ರಮ

ಜತೆಗೆ ರಾಜ್ಯ ಸೇರಿದಂತೆ ಆಯಾ ರಾಜ್ಯಗಳ ರಾಜಧಾನಿ ಪ್ರಪಂಚದ ವಿವಿಧ ದೇಶಗಳ ಹೆಸರನ್ನು ಒಂದೇ ನಿಮಿಷದಲ್ಲಿ ಬಾಲಕ ಪ್ರಣೀಕ್ ಹೇಳುವುದನ್ನು ನೋಡಿದ ಗ್ರಾಮಸ್ಥರು ಬಾಲಕನಿಗೆ ಶಹಬ್ಬಾಸ್ ಗಿರಿ ನೀಡಿದ್ದಾರೆ. ಈ ಬಾಲಕನಿಗೆ ಇನ್ನಷ್ಟು ಉತ್ತೇಜನ ಹಾಗೂ ವಿದ್ಯಾಭ್ಯಾಸ ಕಲಿಕೆಗೆ ಪ್ರೋತ್ಸಾಹ ನೀಡಿದರೆ ಮತ್ತಷ್ಟು ಬಾಲಕನ ಸಾಧನೆಗೆ ಸ್ಫೂರ್ತಿ ಆಗಲಿದೆ ಎಂಬುವುದು ಸ್ಥಳೀಯರ ಅಭಿಪ್ರಾಯವಾಗಿದೆ.

Exit mobile version