Site icon Vistara News

Cobra | ಮಾನ್ವಿಯಲ್ಲಿ ಗಾಯಗೊಂಡ ನಾಗರಹಾವಿಗೆ ಹೊಲಿಗೆ ಹಾಕಿದ ವೈದ್ಯ!

ರಾಯಚೂರು: ಹಾವು ಎಂದ ಕೂಡಲೇ ಭಯಪಟ್ಟು ದೂರ ಓಡುವ ಜನರೇ ಹೆಚ್ಚು. ಆದರೆ, ಇಲ್ಲೊಂದು ಕಡೆ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಸಿಲುಕಿ ಗಾಯಗೊಂಡಿದ್ದ ನಾಗರಹಾವಿಗೆ (Cobra) ಪಶುವೈದ್ಯರೊಬ್ಬರು ಹೊಲಿಗೆ ಹಾಕಿ ಚಿಕಿತ್ಸೆ ನೀಡಿ ಜೀವದಾನವನ್ನು ನೀಡಿದ್ದಾರೆ.

ಜಿಲ್ಲೆಯ ‌ಮಾನ್ವಿ ಪಟ್ಟಣದ ವ್ಯಕ್ತಿಯೊಬ್ಬರ ನಿರ್ಮಾಣ ಹಂತದ ಮನೆಯಲ್ಲಿ ನಾಗರಹಾವೊಂದು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿತ್ತು. ಇದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಪಶುವೈದ್ಯರಾದ ಡಾ.ರಾಜು ಎಂಬುವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದ ಬಳಿಕ ಸ್ಥಳಕ್ಕೆ ಆಗಮಿಸಿದ ಡಾ.ರಾಜು ಅವರು ಮೊದಲು ಹಾವಿನ ಪರಿಸ್ಥಿತಿಯನ್ನು ಅವಲೋಕಿಸಿದರು. ಬಳಿಕ ನಾಗರಹಾವಿಗೆ ಇಂಜೆಕ್ಷನ್‌ ನೀಡಿ, ಗಾಯವಾದ ಜಾಗಕ್ಕೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಿದರು. ನಾಗರಹಾವು ಸಂಪೂರ್ಣ ಗುಣಮುಖವಾದ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಅರಣ್ಯಕ್ಕೆ ಬಿಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈದ್ಯ ಡಾ. ರಾಜು, ನಾಗರಹಾವಿನಂತಹ ವಿಷಕಾರಿ ಜೀವಿಗಳಿಗೆ ಇದೇ ಮೊದಲ ಬಾರಿಗೆ ತಾವು ಚಿಕಿತ್ಸೆ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | ವಿಷಕಾರಿ ಹಾವುಗಳ ಕಡಿತಕ್ಕೆ ಬೆಂಗಳೂರಿನಲ್ಲಿ ಸಿಗಲಿದೆ ಜೀವರಕ್ಷಕ ʻಪ್ರತಿವಿಷʼ

Exit mobile version